ನನ್ನ ಪ್ರಕಾರ ಈತ ಅನ್​ಫಿಟ್​; ಬುಮ್ರಾ ಕುರಿತು ಶಾಕಿಂಗ್​ ಹೇಳಿಕೆ ಕೊಟ್ಟ ಪಿಸಿಬಿ ಮಾಜಿ ಮುಖ್ಯಸ್ಥ

Jasprit Bumrah
Published on

ನವದೆಹಲಿ: ಈಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲಿ ರೋಹಿತ್​ ಶರ್ಮಾ ನಾಯಕತ್ವದಲ್ಲಿ ಭಾರತ ಎರಡನೇ ಬಾರಿಗೆ ಕಪ್​ ಜಯಿಸಿದ್ದು, ಟೂರ್ನಿ ಮುಗಿದು ಎರಡು ವಾರಗಳಾಗುತ್ತ ಬಂದರೂ ಟೀಮ್​ ಇಂಡಿಯಾಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಆಟಗಾರರ ಶ್ರಮವನ್ನು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ಇತ್ತ ಪಾಕಿಸ್ತಾನದ ಮಾಜಿ ಆಟಗಾರರು ಭಾರತದ ಪ್ರದರ್ಶನವನ್ನು ಹಾಡಿ ಹೊಗಳುತ್ತಿದ್ದು, ವೇಗಿ ಜಸ್ಪ್ರೀತ್​ ಬುಮ್ರಾರ ಕುರಿತು ನೀಡಿರುವ ಹೇಳಿಕೆ ಸಖತ್​ ವೈರಲ್​ ಆಗುತ್ತಿದೆ.

ಜೂನ್​ 29ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್​ ಪಂದ್ಯದಲ್ಲಿ ಹೆನ್ರಿಚ್​ ಕ್ಲಾಸೆನ್​ ಸ್ಪೋಟಕ ಬ್ಯಾಟಿಂಗ್​ ಫಲವಾಗಿ ಪಂದ್ಯ ಭಾರತದ ಕೈತಪ್ಪಿತ್ತು. ಈ ವೇಳೆ ತಮ್ಮ ಬಿಗಿ ಬೌಲಿಂಗ್ ದಾಳಿ ಮೂಲಕವೇ ಪಂದ್ಯವನ್ನು ಮತ್ತೊಮ್ಮೆ ಭಾರತದತ್ತ ವಾಲಿಸಿದ ಕೀರ್ತಿ ವೇಗಿ ಜಸ್ಪ್ರೀತ್​ ಬುಮ್ರಾಗೆ ಸಲ್ಲುತ್ತದೆ. ಇದಲ್ಲದೆ ಟಿ20 ವಿಶ್ವಕಪ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೌಲರ್​ ಒಬ್ಬರ ಸರಣಿಶೇಷ್ಠ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಬುಮ್ರಾ ಭಾಜನರಾದರು.

ಇನ್ನೂ ಈ ಕುರಿತು ಮಾತನಾಡಿರುವ ಪಿಸಿಬಿ ಮಾಜಿ ಮುಖ್ಯಸ್ಥ ರಮಿಜ್​ ರಾಜಾ, ನನ್ನ ಪ್ರಕಾರ ಜಸ್ಪ್ರೀತ್​ ಬುಮ್ರಾ ಮೂರು ಮಾದರಿಯ ಕ್ರಿಕೆಟ್​ನ ಲೆಜಂಡರಿ ಆಟಗಾರನಾಗಿದ್ದಾರೆ. ಈ ಹುಡುಗ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬೆಳೆದ ರೀತಿ ನೋಡಿದರೆ ನನಗೆ ನಿಜವಾಗಿಯೂ ಖುಷಿಯಾಗುತ್ತದೆ. ಮೊದಲಿಗೆ ಈತನ ಬೌಲಿಂಗ್​ ಶೈಲಿಯನ್ನು ನೋಡಿ ನಾನು ಆ ವೇಳೆಗೆ ಈತ ಅನ್​ಫಿಟ್​ ಎಂದು ಭಾವಿಸಿದ್ದೆ. ಆದರೆ ಆತನಲ್ಲಿರುವ ಆತ್ಮವಿಶ್ವಾಸ ಹಾಗೂ ಸಾಧಿಸುವ ಛಲದಿಂದ ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟಿದ್ದಾನೆ ಎಂದು ಪಿಸಿಬಿ ಮಾಜಿ ಮುಖ್ಯಸ್ಥ ರಮೀಜ್​ ರಾಜಾ ಜಸ್ಪ್ರೀತ್​ ಬುಮ್ರಾರನ್ನು ಹಾಡಿ ಹೊಗಳಿದ್ದಾರೆ.

Ramiz Bumrah
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net