ರಾಮನಗರ: ರಾಜ್ಯ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಮಾಜಿ ಸಿಎಂ ಕುಮಾರಸ್ವಾಮಿ, ಈ ಚುನಾವಣೆಯಲ್ಲಿ ನನ್ನನ್ನು ಮನೆಯ ಮಗನ ರೀತಿ ಗೆಲ್ಲಿಸ್ತೀರಾ ಅಂತ ನಂಬಿದ್ದೇನೆ. ಪಕ್ಷವನ್ನು ಅಧಿಕಾರಕ್ಕೆ ತರುವ ಸಲುವಾಗಿ ರಾಜ್ಯದಲ್ಲಿ ಏಕಾಂಗಿಯಾಗಿ ತಿರುಗಾಡಿದ್ದೇನೆ. ನನ್ನ ಆರೋಗ್ಯವನ್ನು ಲೆಕ್ಕಿಸದೇ 18 ಗಂಟೆ ಕೆಲಸ ಮಾಡಿದ್ದೇನೆ. ತಾಯಂದಿರು ಈ ಬಾರಿ ನಮಗೆ ಆಶಿರ್ವಾದ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಚನ್ನಪಟ್ಟಣದ ಶೇರು ಸರ್ಕಲ್ ಬಳಿ ಮಾತನಾಡಿದ ಅವರು, ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಲುವಾಗಿ ರಾಜ್ಯದಲ್ಲಿ ಏಕಾಂಗಿಯಾಗಿ ತಿರುಗಾಡಿ ನಾಡಿನ ಜನತೆಯ ವಿಶ್ವಾಸಗಳಿಸಿದ್ದೇನೆ. ಅಲ್ಲದೇ, ಈ ಚುನಾವಣೆಯಲ್ಲಿ ನನ್ನನ್ನು ಮನೆಯ ಮಗನ ರೀತಿ ಗೆಲ್ಲಿಸ್ತೀರಾ ಎಂದು ನಂಬಿ ಕೊನೆಯದಾಗಿ ಚನ್ನಪಟ್ಟಣಕ್ಕೆ ಬಂದಿದ್ದೇನೆ ಎಂದರು.
ಇದನ್ನು ಓದಿ: World Red Cross Day; ಈ ದಿನದ ಮಹತ್ವ, ವಿಶೇಷತೆ ಗೊತ್ತಾ…?
ಹಾಸನದಲ್ಲಿ ಜನ್ಮ ತಾಳಿದರೂ ರಾಮನಗರ ಜಿಲ್ಲೆ ನನಗೆ ರಾಜಕೀಯ ಜನ್ಮ ಕೊಟ್ಟ ಜಿಲ್ಲೆಯಾಗಿದೆ. ಈ ಚುನಾವಣೆಯಲ್ಲಿ ಬಹಳಷ್ಟು ಜನ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಕಳೆದ ಬಾರಿ ನಾನು 14 ತಿಂಗಳು ಮುಖ್ಯಮಂತ್ರಿಯಾದಾಗ ಕೆಲವು ಎದುರಾಳಿಗಳು ನನ್ನನ್ನು ಇಳಿಸಲಿಕ್ಕೆ ಬಹಳಷ್ಟು ಪ್ರಯತ್ನಪಟ್ಟಿದ್ದಾರೆ ಎಂದು ಆರೋಪಿಸಿದರು.
ನನ್ನ ಆರೋಗ್ಯವನ್ನು ಲೆಕ್ಕಿಸದೇ 18 ಗಂಟೆ ಕೆಲಸ ಮಾಡಿದ್ದೇನೆ. ತಾಯಂದಿರು ಈ ಬಾರಿ ನಮಗೆ ಆಶೀರ್ವಾದ ಮಾಡುವುದಾಗಿ ಹೇಳಿದ್ದಾರೆ. ಇನ್ನು ಕೆಲವರು ಚನ್ನಪಟ್ಟಣದಲ್ಲಿ ನೀವು ಸೋಲ್ತಿರಾ, ಅದಕ್ಕಾಗಿ ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರ ಮಾಡಬೇಕೆಂದು ಕೆಲವರು ಹೇಳಿದ್ದರೆಂದು ತಿಳಿಸಿದ್ದಾರೆ.
ಚನ್ನಪಟ್ಟಣ-ರಾಮನಗರ ನನಗೆ ಎರಡು ಕಣ್ಣುಗಳು ಇದ್ದ ಹಾಗೆ, ನನಗೆ ರಾಜಕೀಯವಾಗಿ ಜನ್ಮ ಕೊಟ್ಟ ಜನತೆ. ಅಲ್ಲದೇ ರಾಮನಗರ-ಚನ್ನಪಟ್ಟಣ ಕ್ಷೇತ್ರವನ್ನು ಅವಳಿ ನಗರ ಮಾಡಿ ಅಂತ ಸರ್ಕಾರಕ್ಕ ಮನವಿ ಕೂಡ ಮಾಡಿಕೊಂಡಿದ್ದಾರೆ.(ಏಜೆನ್ಸೀಸ್)