ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಕ್ಕಳಂತೆಯೇ ಪೋಸ್ ಕೊಟ್ಟು ರೋಲ್ಸ್​ ರಾಯ್ಸ್ ಖರೀದಿಸಲು ಹೋಗಿದ್ರು !

devegowda
Published on

ಬೆಂಗಳೂರು: ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರ ಮೊಮ್ಮಕ್ಕಳ ಸೋಗಿನಲ್ಲಿ ದುಷ್ಕರ್ಮಿಗಳಿಬ್ಬರು ಅಮಾಯಕರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ದೇವೇಗೌಡರ ಹೆಸರು ದುರುಪಯೋಗ ಪಡಿಸಿಕೊಂಡು ಮೋಸ ಮಾಡುತ್ತಿರುವವರ ವಿರುದ್ಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಚ್​ಡಿಡಿ ಅವರ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಿರುವ ಆರ್​. ನಾರಾಯಣಪ್ಪ ಎಂಬುವವರು ದೂರು ನೀಡಿದ್ದಾರೆ. ಇದನ್ನೂ ಓದಿರಿ ಡ್ರಗ್ಸ್ ಮಾಫಿಯಾ ಕಾರಣಕ್ಕೆ ಬೆಂಗಳೂರು ಕಾಂಗ್ರೆಸ್ ನಾಯಕರಿಗೆ ಶುರುವಾಗಿದೆ ಟೆನ್ಷನ್!

ತಾನು ಎಚ್​.ಡಿ.ದೇವೇಗೌಡರ ಮೊಮ್ಮಗ ಎಂದೇಳಿಕೊಂಡು ನಿಶಾಂತ್​ ಎಂಬಾತ, ರೋಲ್ಸ್​ ರಾಯ್ಸ್​ ಕಾರನ್ನು ಖರೀದಿಸಲು ಬಂದಿದ್ದ ದೃಶ್ಯ ಕಾರು ಮಾರಾಟ ಮಳಿಗೆಯಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್​ ಆಗಿದೆ. ಇದೇ ರೀತಿ ಮತ್ತೊಬ್ಬ ಪ್ರದಿಪ್​ ಸಹ 'ನಾನು ದೇವೇಗೌಡರ ಮೊಮ್ಮಗ. ಸರ್ಕಾರದ ವಿವಿಧ ಕೆಲಸಗಳನ್ನು ಮಾಡಿಸಿಕೊಡುತ್ತೇನೆ' ಎಂದು ಹೇಳಿಕೊಂಡು ಅಮಾಯಕರಿಗೆ ವಂಚನೆ ಮಾಡುತ್ತಿರುವ ಬಗ್ಗೆಯೂ ವಿಡಿಯೋ ಪತ್ತೆಯಾಗಿದೆ. ಈ ಇಬ್ಬರ ವಿಡಿಯೋಗಳು ಫೇಸ್​ಬುಕ್​ ಮತ್ತು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಆಗಿದ್ದವು. ಕರೆ ಮಾಡಿ ಪ್ರಶ್ನೆ ಮಾಡಿದಾಗ ಡಿಲೀಟ್​ ಆಗಿವೆ. ಮಾಜಿ ಪ್ರಧಾನಿ ಹೆಸರನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ನಾರಾಯಣಪ್ಪ ಮನವಿ ಮಾಡಿದ್ದಾರೆ.

ಈ ಮೇರೆಗೆ ಆರೋಪಿಗಳಾದ ನಿಶಾಂತ್​ ಮತ್ತು ಪ್ರದೀಪ್​ ಎಂಬುವರ ವಿರುದ್ಧ ಎಫ್​ಐಆರ್​ ದಾಖಲಿಸಿ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಬನಶಂಕರಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net