ಸಿನಿಮಾ

ಹಿಂದುಸ್ತಾನದಲ್ಲಿ ಕುಮಾರಸ್ವಾಮಿಯಂತಹ ಮತ್ತೊಬ್ಬ ಸಿಎಂ ಇಲ್ಲ: ಎಚ್​ಡಿಡಿ

ಚನ್ನಪಟ್ಟಣ: ಎಚ್.ಡಿ. ಕುಮಾರಸ್ವಾಮಿ ಕಳೆದೆರಡು ದಿನಗಳಿಂದ ಹದಿನಾರು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ದೇಶದಲ್ಲಿ ರೈತನಿಗೆ ಪಿಂಚಣಿ‌ ಕೊಡುತ್ತೇನೆ ಎಂದು ಹೇಳುವ ವ್ಯಕ್ತಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ. ನುಡಿದಂತೆ ನಡೆಯುವ ರಾಜಕಾರಣಿ, ಸಿಎಂ ಇದ್ದರೆ ಅದು ಕುಮಾರಸ್ವಾಮಿ ಮಾತ್ರ ಎಂದು ಹೇಳುತ್ತಾ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪುತ್ರನ ಪರ ಚುನಾವಣಾ ಪ್ರಚಾರಕ್ಕಿಳಿದಿದ್ದಾರೆ.

ಕುಮಾರಸ್ವಾಮಿ ಸಾಲ ಮನ್ನಾ ಮಾಡಿದ್ದಾರೆ

ಚನ್ನಪಟ್ಟಣದಲ್ಲಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, ಕಾಂಗ್ರೆಸ್‌ನವರ ವ್ಯಂಗ್ಯದ ನಡುವೆ ಕುಮಾರಸ್ವಾಮಿ ಸಾಲ‌ ಮನ್ನಾ ಮಾಡಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಎರಡನೇ ಸಾಲಿನಲ್ಲಿ ಕುಳಿತ ಸಿದ್ದರಾಮಯ್ಯ ವ್ಯಂಗ್ಯ ಮಾಡಿ ಹೊರಗೆ ಹೋಗುತ್ತಾರೆ. ಸಿದ್ದರಾಮಯ್ಯ 50 ಸಾವಿರ ರೂ. ಸಾಲ‌ ಮನ್ನಾ ಮಾಡಿದ್ದರೂ 3500 ಕೋಟಿ ಬಾಕಿ ಉಳಿದಿತ್ತು. ಅದರೊಂದಿಗೆ 26 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದು ಎಚ್​ಡಿಕೆ ಎಂದು ಹೇಳಿದರು.

ಇದನ್ನೂ ಓದಿ: ದೆಹಲಿಯ ರಾಜ ಪರಿವಾರಕ್ಕೆ ಕರ್ನಾಟಕವನ್ನು ATM ಮಾಡಲು ಕಾಂಗ್ರೆಸ್​​ ಬಯಸುತ್ತಿದೆ: ಮೋದಿ ವಾಗ್ದಾಳಿ

ಹಿಂದುಸ್ತಾನದಲ್ಲಿ ಕುಮಾರಸ್ವಾಮಿಯಂತಹ ಮತ್ತೊಬ್ಬ ಮುಖ್ಯಮಂತ್ರಿ ಇಲ್ಲ

ಇಡೀ ಹಿಂದುಸ್ತಾನದಲ್ಲಿ ಕುಮಾರಸ್ವಾಮಿಯಂತಹ ಮತ್ತೊಬ್ಬ ಮುಖ್ಯಮಂತ್ರಿ ಇಲ್ಲ. ಕಾಂಗ್ರೆಸ್, ಬಿಜೆಪಿಯವರು ನನ್ನ ಮುಂದೆ ನಿಂತು ಹೇಳಲಿ. ‌ಇದೇ ನನ್ನ ಸವಾಲು ಎಂದು ಮಾಜಿ ಪ್ರಧಾನಿ ಹೇಳಿದರು. ಮಂಡ್ಯದಿಂದ ಸ್ಪರ್ಧೆಗೆ ಒತ್ತಡ ಬಂದರು, ಚನ್ನಪಟ್ಟಣ ನನ್ನ ಕರ್ಮ ಭೂಮಿ ಎಂದು ಅವಕಾಶ ನಿರಾಕರಿಸಿದರು ಎಂದರು.

ನಿಮ್ಮ ಮನೆ ಮಗ ಸಿಎಂ ಆಗುವುದು ಶತಸಿದ್ಧ

ಚನ್ನಪಟ್ಟಣದಲ್ಲಿ ಸಣ್ಣಪುಟ್ಟ ಏನೇ ವ್ಯತ್ಯಾಸಗಳಿದ್ದರೂ ಒಂದೇ ತಾಯಿಯ ಮಕ್ಕಳಂತೆ ಕೆಲಸ ಮಾಡಿ. ಸಮೀಕ್ಷಾ ವರದಿಗಳ ಬಗ್ಗೆ ತಲೆ‌ಕೆಡಿಸಿಕೊಳ್ಳಬೇಡಿ. ಕುಮಾರಸ್ವಾಮಿ ಸಿಎಂ ಆಗುವುದು ಶತಸಿದ್ದ. ಯಾರು ಏನೇ ಹೇಳಿ ಅಪ ಪ್ರಚಾರ ಮಾಡಿದರೂ ನಿಮ್ಮ ಮನೆ ಮಗನನ್ನು ಸಿಎಂ ಮಾಡುತ್ತೇವೆ ಎಂದು ಪಣ ತೊಡಿ. ಚನ್ನಪಟ್ಟಣಕ್ಕೆ ಮುಖ್ಯಮಂತ್ರಿ ಕೊಟ್ಟ ಹೆಗ್ಗಳಿಕೆ ಸಲ್ಲಬೇಕು. ದೇಶದ ಮುಂದಿನ ಪ್ರಜೆಗಳಾದ ಯುವಕರು ಜೆಡಿಎಸ್ ಪಕ್ಷವನ್ನು ಉಳಿಸಿ ಎಂದು ಕರೆ ನೀಡಿದರು.

ಇದನ್ನೂ ಓದಿ: ರಾಮ, ಹನುಮಂತನ ಮೇಲೆ ಕಾಂಗ್ರೆಸ್ಸಿಗರಿಗೆ ಯಾಕಿಷ್ಟು ಕೋಪ? ಪ್ರತಾಪ್ ಸಿಂಹ ಪ್ರಶ್ನೆ

Latest Posts

ಲೈಫ್‌ಸ್ಟೈಲ್