

ಅಡಿಲೇಡ್: ವೇಗಿ ಜೋಶ್ ಹ್ಯಾಸಲ್ವುಡ್ (35ಕ್ಕೆ 5) 11ನೇ ಬಾರಿ ಕಬಳಿಸಿದ 5 ವಿಕೆಟ್ ಗೊಂಚಲಿನ ನೆರವಿನಿಂದ ಆಸ್ಟ್ರೆಲಿಯಾ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 10 ವಿಕೆಟ್ಗಳಿಂದ ಸುಲಭ ಗೆಲುವು ದಾಖಲಿಸಿದೆ. ಈ ಮೂಲಕ 2 ಪಂದ್ಯಗಳ ಸರಣಿಯಲ್ಲಿ 1&0 ಮುನ್ನಡೆ ಸಾಧಿಸಿದೆ.
ಮೂರನೇ ದಿನವಾದ ಶುಕ್ರವಾರ 6 ವಿಕೆಟ್ಗೆ 73 ರನ್ಗಳಿಂದ 2ನೇ ಇನಿಂಗ್ಸ್ ಮುಂದುವರಿಸಿದ ವಿಂಡೀಸ್, ಬೆಳಗ್ಗೆ 13.3 ಓವರ್ಗಳ ಆಟದಲ್ಲೇ 120 ರನ್ಗಳಿಗೆ ಸರ್ವಪತನ ಕಂಡಿತು. ವಿಂಡೀಸ್ ಇನಿಂಗ್ಸ್ ಸೋಲಿನಿಂದ ಪಾರಾದರೂ ಆಸೀಸ್ 26 ರನ್ಗಳ ಸುಲಭ ಗುರಿ ಪಡೆಯಿತು. ಆರಂಭಿಕ ಉಸ್ಮಾನ್ ಖವಾಜ (9) ಗಾಯಗೊಂಡು ನಿವೃತ್ತಿ ಹೊಂದಿದ ನಡುವೆ ಆಸೀಸ್ 6.4 ಓವರ್ಗಳಲ್ಲೇ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗುರಿ ಸೇರಿತು.
ಸರಣಿಯ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಅಹರ್ನಿಶಿಯಾಗಿ ಬ್ರಿಸ್ಬೇನ್ನಲ್ಲಿ ಜನವರಿ 25ರಿಂದ ನಡೆಯಲಿದೆ.
ವೆಸ್ಟ್ ಇಂಡೀಸ್: 188 ಮತ್ತು 35.2 ಓವರ್ಗಳಲ್ಲಿ 120 (ಜೋಶ್ವಾ 18, ಶಮರ್ ಜೋಸೆಫ್ 15, ಹ್ಯಾಸಲ್ವುಡ್ 35ಕ್ಕೆ 5, ಸ್ಟಾರ್ಕ್ 46ಕ್ಕೆ 2, ಲ್ಯಾನ್ 4ಕ್ಕೆ 2), ಆಸ್ಟ್ರೆಲಿಯಾ: 283 ಮತ್ತು ವಿಕೆಟ್ ನಷ್ಟವಿಲ್ಲದೆ 26 (ಸ್ಟೀವನ್ ಸ್ಮಿತ್ 11*, ಖವಾಜ 9). ಪಂದ್ಯಶ್ರೇಷ್ಠ: ಟ್ರಾವಿಸ್ ಹೆಡ್.