ಸಾರ್ ನೀವು ಕೇಳಿದ್ದಷ್ಟು ಹಣ ನನ್ನತ್ರ ಇಲ್ಲ, ಈ ಎತ್ತು ಇಟ್ಕೊಳ್ಳಿ: ಅಧಿಕಾರಿಗಳ ಹಣದಾಹ, ಹಾವೇರಿ ರೈತನ ಅಳಲು

Haveri Farmer
Published on

ಹಾವೇರಿ: ಅಸಹಾಯಕ ರೈತನೊಬ್ಬ ಲಂಚ ನೀಡಲು ಹಣವಿಲ್ಲದ ಕಾರಣ ತನ್ನ ದುಡಿಮೆಯ ಎತ್ತನ್ನೇ ಲಂಚವಾಗಿ ನೀಡಲು ಪುರಸಭೆ ಕಚೇರಿಗೆ ತೆರಳಿದ ಮನಕಲಕುವ ಹಾಗೂ ಆಘಾತಕಾರಿ ಘಟನೆ ಹಾವೇರಿಯ ಸವಣೂರಿನ ಪುರಸಭೆಯಲ್ಲಿ ನಡೆದಿದೆ.

ಮನೆ ಖಾತೆ ಬದಲಾಯಿಸಲು 25,000 ಸಾವಿರ ರೂ. ಲಂಚ ನೀಡುವಂತೆ ಪುರಸಭೆ ಅಧಿಕಾರಿಗಳು ಯಲ್ಲಪ್ಪ ರಾಣೋಜಿ ಎಂಬ ರೈತನಿಗೆ ಕೇಳಿದ್ದರು. ಈ ಹಿಂದೆಯು ಹಣವನ್ನು ಕೊಟ್ಟಿದ್ದೇನೆ. ಹಣ ತೆಗೆದುಕೊಂಡವರು ವರ್ಗಾವಣೆ ಆಗಿದ್ದಾರೆ. ಈಗ ಹೊಸದಾಗಿ ಬಂದಿರುವ ಅಧಿಕಾರಿಗಳು ಮತ್ತೆ 25,000 ಸಾವಿರ ಹಣ ಕೊಡಿ ಎಂದು ಬೇಡಿಕೆ ಇಡುತ್ತಿದ್ದಾರೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.

ಅಧಿಕಾರಿಗಳ ಹಣ ದಾಹದ ವರ್ತನೆಯಿಂದ ರೊಚ್ಚಿಗೆದ್ದ ಅನ್ನದಾತ ತಮ್ಮ ಎತ್ತಿನ ಸಮೇತ ಪುರಸಭೆ ಕಚೇರಿಗೆ ಬಂದರು. ಬಳಿಕ ಅಧಿಕಾರಿಗಳ ಬಳಿ ಹೋಗಿ ದುಡ್ಡು ಕೊಡುವತನಕ ಎತ್ತು ಇಟ್ಕೊಳಿ ಎಂದು ಹೇಳಿದರು. ಸಾರ್ ನನ್ನ ಬಳಿ ನೀವು ಕೇಳಿದಷ್ಟು ಕೊಡುವುದಕ್ಕೆ ಹಣ ಇಲ್ಲ. ಅಲ್ಲಿಯವರೆಗೆ ಈ ಎತ್ತನ್ನು ನಿಮ್ಮ ಜೊತೆ ಇಟ್ಟುಕೊಳ್ಳಿ ಎಂದಿದ್ದಾನೆ. ಇದನ್ನು ಕೇಳಿದ ಪುರಸಭೆ ಅಧಿಕಾರಿಗಳು ಒಂದು ಕ್ಷಣ ದಂಗಾಗಿದ್ದಾರೆ.

ರೈತ ಯಲ್ಲಪ್ಪನ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಯಲ್ಲಪ್ಪ ಸರಿಯಾಗಿಯೇ ಬುದ್ಧಿ ಕಲಿಸಿದ್ದಾನೆಂದು ಸಾರ್ವಜನಿಕರು ಪ್ರಶಂಸೆಗಳ ಸುರಿಮಳೆಗೈದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net