

ಹಾವೇರಿ: 'ಪಕ್ಕದಲ್ಲಿಯೇ ಇದ್ದ ನರ್ಸ್ ರೋಗಿಗೆ ಇಂಜೆಕ್ಷನ್ ಕೊಡದೆ ತೆರಳುತ್ತಾರೆ. ಬೇರೆ ದಾರಿ ಕಾಣದ ರೋಗಿ ತನ್ನ ಕೈಗೆ ಸಲಾಯಿನ್ ಅಳವಡಿಸಲು ಹಾಕಿದ್ದ ಸೂಜಿ ಮೂಲಕ ತಾನೇ ಇಂಜೆಕ್ಷನ್ ಮಾಡಿಕೊಳ್ಳುತ್ತಾನೆ...' ಈ ದೃಶ್ಯದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಆಸ್ಪತ್ರೆಯ ದುಸ್ಥಿತಿ ಕಂಡ ಜನತೆ ಆತಂಕಗೊಂಡಿದ್ದಾರೆ.
ಇನ್ನು ಕೋವಿಡ್ ಆಸ್ಪತ್ರೆಯಲ್ಲಿ ರೋಗಿಯೇ ಇಂಜೆಕ್ಷನ್ ತೆಗೆದುಕೊಂಡ ವಿಡಿಯೋ ಕುರಿತು ತನಿಖೆಗೆ ಸೂಚಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಪರ ಜಿಲ್ಲಾಧಿಕಾರಿ ಎಂ.ಯೋಗೇಶ್ವರ ತಿಳಿಸಿದ್ದಾರೆ.
ಹಾವೇರಿ ಕೋವಿಡ್ ಆಸ್ಪತ್ರೆಯಲ್ಲಿ ಒಬ್ಬ ರೋಗಿ ಚಿಕಿತ್ಸೆ ಪಡೆದು ಹೋದ ನಂತರ ಮತ್ತೊಬ್ಬ ರೋಗಿ ಬಂದರೆ ಬೆಡ್ಶೀಟ್ ಕೂಡ ಬದಲಾಯಿಸದೆ ಅದೇ ಬೆಡ್ನಲ್ಲಿ ಮಲಗಲು ತಿಳಿಸುತ್ತಾರೆ. ಹಾಗಾಗಿ ರೋಗಿಗಳೇ ಮನೆಯಿಂದ ಬೆಡ್ಶೀಟ್ ತರಿಸಿಕೊಂಡ ಉದಾಹರಣೆಗಳೂ ಸಾಕಷ್ಟಿವೆ.