ಬಾಲಿವುಡ್​​ ನಟಿ ಆಲಿಯಾ ಭಟ್​​ ತಾಳಿಸರದಲ್ಲಿದೆ ರಣಬೀರ್ ಕಪೂರ್ ಲಕ್ಕಿ ನಂಬರ್​ ಚಿಹ್ನೆ!

alia
Published on

ಮುಂಬೈ: ಬಾಲಿವುಡ್​​ ನಟಿ ಆಲಿಯಾ ಭಟ್​​ ಅವರು ರಣಬೀರ್ ಕಪೂರ್ ಜತೆ ಕಳೆದ ವರ್ಷ ಏಪ್ರಿಲ್ 14 ರಂದು ದಾಂಪತ್ಯ ಜೀವಕ್ಕೆ ಕಾಲಿಟ್ಟರು. ಈ ಜೋಡಿಗೆ ಈಗ ಮುದ್ದಾದ ಹೆಣ್ಣು ಮಗು ಕೂಡಾ ಇದೆ. ಒಂದು ವರ್ಷದ ಬಳಿಕ ಆಲಿಯಾ ಧರಿಸಿರುವ ಮಾಂಗಲ್ಯ ಸರ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ.

ಆಲಿಯಾ ಧರಿಸಿದ್ದ ಮಾಂಗಲ್ಯ ಸರವನ್ನು ವಜ್ರದಿಂದ ಮಾಡಲಾಗಿದೆ. ಇನ್ಫಿನಿಟಿ ಚಿಹ್ನೆ ಹೊಂದಿದೆ. ಅದರ ಮಧ್ಯದಲ್ಲಿ ಸಾಲಿಟೇರ್ ಜೋಡಿಸಲಾಗಿದೆ. ಇನ್ಫಿನಿಟಿಯನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ರಣಬೀರ್ ಕಪೂರ್ ಅವರ ನೆಚ್ಚಿನ ಸಂಖ್ಯೆ. ರಣಬೀರ್ ಕಪೂರ್ ಅವರಿಗೆ 8 ಲಕ್ಕಿ ನಂಬರ್ ಅಂತೆ. ಹೀಗಾಗಿ ಮಾಂಗಲ್ಯ ಸರಕ್ಕೆ ಬಳಸಿಕೊಂಡಿದ್ದಾರೆ ಅಲಿಯಾ ಎನ್ನಲಾಗಿದೆ.

ಮಾಂಗಲ್ಯದ ವಿಶೇಷತೆ?:

ಪಾರ್ಟಿಯೊಂದರಲ್ಲಿ ಆಲಿಯಾ ಕಾಣಿಸಿಕೊಂಡಿದ್ದಾರೆ. ಈ ವೇಳೆ ಆಲಿಯಾ ಧರಿಸಿದ್ದ ಮಾಂಗಲ್ಯ ಸರ ಫೋಟೋದಲ್ಲಿ ಕಾಣಿಸಿದ್ದು, ವೈರಲ್ ಆಗಿದೆ. ಆಲಿಯಾ ಮಾಂಗ್ಯದಲ್ಲಿರುವ 8 ರಂತೆ ಕಾಣುವ ಚಿಹ್ನೆಯು ರಣಬೀರ್​ ಕಪೂರ್​ ಅವರ ಲಕ್ಕಿ ನಂಬರ್​ ಎಂದು ಹೇಳಲಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಆಲಿಯಾ ಭಟ್​ ಅವರ ಮಂಗಳಸೂತ್ರದ ಬಗ್ಗೆ ಅಭಿಮಾನಿಗಳು ಈಗ ಮಾತನಾಡುತ್ತಿದ್ದಾರೆ.

ಹಲವು ಪ್ರಾಜೆಕ್ಟ್​ಗಳು ಆಲಿಯಾ ಅವರ ಕೈಯಲ್ಲಿ ಇವೆ. ಕೆಲವೇ ತಿಂಗಳ ಹಿಂದೆ ಹೆಣ್ಣು ಮಗುವಿಗೆ ಅವರು ಜನ್ಮ ನೀಡಿದರು. ಆ ಮಗುವಿಗೆ ರಹಾ ಎಂದು ಹೆಸರು ಇಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net