

Gold Rates: ಕಳೆದ ಒಂದು ವಾರದಲ್ಲಿ ಚಿನ್ನದ ದರದಲ್ಲಿ ಇಳಿಕೆ ಮಾತು ಬಹಳ ದೂರ ಸರಿದಿತ್ತು. ಇದರಿಂದ ಚಿನ್ನ ಖರೀದಿಸುವವರು ಸಹ ಗೋಲ್ಡ್ ಬಗ್ಗೆ ಹೆಚ್ಚು ಆಸಕ್ತಿ ತೋರುವುದನ್ನೇ ಬಿಟ್ಟಿದ್ದರು. ಆದರೆ, ಒಂದು ವಾರದ ಬಳಿಕ ಇದೀಗ ದಿಢೀರ್ ಎಂಬಂತೆ ಗಣನೀಯವಾಗಿ ಚಿನ್ನದ ಬೆಲೆಯಲ್ಲಿ ಸುಧಾರಣೆ ಕಂಡುಬಂದಿದೆ. ಚಿನ್ನಾಭರಣಗಳ ಖರೀದಿಸಲು ತಯಾರಿ ನಡೆಸುತ್ತಿರುವವರಿಗೆ ಇದು ಶುಭ ಸುದ್ದಿ ಎಂದೇ ಹೇಳಬಹುದು.
ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದ್ದು, ಚಿನ್ನ ಖರೀದಿಸಲು ಇದು ಉತ್ತಮ ಸಮಯ ಎಂದೇ ಹೇಳಬಹುದು. ಅಸಲಿಗೆ ಈ ಸುದ್ದಿ ತಿಳಿದರೆ, ಖಂಡಿತವಾಗಿಯೂ ಗ್ರಾಹಕರು ಖುಷಿ ಪಡುತ್ತಾರೆ. ಏಕೆಂದರೆ, ಚಿನ್ನದ ಬೆಲೆಗಳು ಗಣನೀಯವಾಗಿ ಕುಸಿಯುತ್ತಿವೆ. ಕಳೆದ ಐದು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿನ ಕುಸಿತದ ಜತೆಗೆ, ಮುಂಬರುವ ಅವಧಿಯಲ್ಲಿ ಗಮನಾರ್ಹ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಇದು ಚಿನ್ನ ಖರೀದಿದಾರರಲ್ಲಿ ಕೊಳ್ಳುವ ಉತ್ಸಾಹವನ್ನು ಹೆಚ್ಚಿಸಿದೆ.
ಇಂದು (ಮಾ.25) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, ಚಿನ್ನದ ಬೆಲೆ ತೀವ್ರ ಕುಸಿತ ಕಂಡಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 330 ರೂ. ಇಳಿಕೆಯಾಗಿದೆ. ಇದರೊಂದಿಗೆ, ಕಳೆದ ಐದು ದಿನಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1,370 ರೂ. ಇಳಿದಿದೆ. ಮತ್ತೊಂದೆಡೆ, ಬೆಳ್ಳಿ ಬೆಲೆಯೂ ಕುಸಿದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗಲಿದೆ ಎಂದು ವರದಿಗಳು ತಿಳಿಸಿವೆ.
ಕೆಲವು ಸಮಯದಿಂದ ಅಂತರರಾಷ್ಟ್ರೀಯ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿವೆ. ಅಂತರರಾಷ್ಟ್ರೀಯ ಉದ್ವಿಗ್ನತೆ ಪ್ರಸ್ತುತ ಕಡಿಮೆಯಾಗುತ್ತಿರುವುದರಿಂದ, ಕಳೆದ ಐದು ದಿನಗಳಿಂದ ಚಿನ್ನದ ದರ ಕುಸಿಯುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಸ್ಪಾಟ್ ಚಿನ್ನದ ದರ ಪ್ರಸ್ತುತ ಔನ್ಸ್‌ಗೆ 3,015 (31.10 ಗ್ರಾಂ) ಇಳಿದಿದೆ. ಅದೇ ರೀತಿ, ಸ್ಪಾಟ್ ಬೆಳ್ಳಿ ದರವು ಔನ್ಸ್‌ಗೆ 33 ಡಾಲರ್‌ಗಳಷ್ಟು ವಹಿವಾಟು ನಡೆಸುತ್ತಿದೆ.