ಮಹಾರಾಜ ಟ್ರೋಫಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್​ಗೆ ಹ್ಯಾಟ್ರಿಕ್​ ಜಯ; ಶಿವಮೊಗ್ಗ ಲಯನ್ಸ್​ ಬೆಂಬಿಡದ ಸೋಲು

web bb
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಭುವನ್​ ರಾಜು (59*ರನ್​, 36 ಎಸೆತ, 3 ಬೌಂಡರಿ, 4 ಸಿಕ್ಸರ್​) ಅರ್ಧಶತಕದಾಟದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್​ ತಂಡದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಭಾನುವಾರದ 2ನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್​ ವಿರುದ್ಧ 7 ವಿಕೆಟ್​ಗಳಿಂದ ಗೆಲುವು ಸಾಧಿಸಿತು. ಮಯಾಂಕ್​ ಅಗರ್ವಾಲ್​ ಬಳಗಕ್ಕೆ ಇದು ಹ್ಯಾಟ್ರಿಕ್​ ಗೆಲುವಾಗಿದ್ದರೆ, ಶಿವಮೊಗ್ಗ ತಂಡ ಸತತ 3ನೇ ಸೋಲಿನ ಕಹಿ ಎದುರಿಸಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಶಿವಮೊಗ್ಗ, ಯುವ ಆಲ್ರೌಂಡರ್​ ಹಾರ್ದಿಕ್​ ರಾಜ್​ (69 ರನ್​, 33 ಎಸೆತ, 5 ಬೌಂಡರಿ, 5 ಸಿಕ್ಸರ್​) ಏಕಾಂಗಿ ಹೋರಾಟದ ಬಲದಿಂದ 9 ವಿಕೆಟ್​ಗೆ 163 ರನ್​ ಪೇರಿಸಿತು. ಶಿವಮೊಗ್ಗ ಒಂದು ಹಂತದಲ್ಲಿ 79 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ತತ್ತರಿಸಿತು. ನಾಯಕ ನಿಹಾಲ್​ ಉಲ್ಲಾಳ್​ (8) ಮತ್ತು ಐಪಿಎಲ್​ ತಾರೆ ಅಭಿನವ್​ ಮನೋಹರ್​ (5) ಬೇಗನೆ ಔಟಾಗಿ ನಿರಾಸೆ ಮೂಡಿಸಿದರು. ಆಗ 18 ವರ್ಷದ ಹಾರ್ದಿಕ್​ ರಾಜ್​ ದಿಟ್ಟ ಆಟವಾಡಿ ಮೊತ್ತ ಏರಿಸಿದರು. ಪ್ರತಿಯಾಗಿ ಬೆಂಗಳೂರು ತಂಡ ನಾಯಕ ಮಯಾಂಕ್​ ಅಗರ್ವಾಲ್​ (42) ಮತ್ತು ಭುವನ್​ ರಾಜು ಸಾಹಸದಿಂದ 17.2 ಓವರ್​ಗಳಲ್ಲಿ 3 ವಿಕೆಟ್​ಗೆ 168 ರನ್​ ಪೇರಿಸಿ ಜಯಿಸಿತು.

ಶಿವಮೊಗ್ಗ ಲಯನ್ಸ್​: 9 ವಿಕೆಟ್​ಗೆ 163 (ಭರತ್​ ಧುರಿ 29, ನಿಹಾಲ್​ 8, ಅಭಿನವ್​ ಮನೋಹರ್​ 5, ಶುಭಾಂಗ್​ 32ಕ್ಕೆ 2, ಲವಿಶ್​ ಕೌಶಲ್​ 33ಕ್ಕೆ 2). ಬೆಂಗಳೂರು ಬ್ಲಾಸ್ಟರ್ಸ್​: 17.2 ಓವರ್​ಗಳಲ್ಲಿ 3 ವಿಕೆಟ್​ಗೆ 168 (ಚೇತನ್​ 23, ಮಯಾಂಕ್​ 42, ಭುವನ್​ 59*, ಸೂರಜ್​ 23, ಆನಂದ್​ 23ಕ್ಕೆ 2).

ಸೋಮವಾರದ ಪಂದ್ಯಗಳು

ಬೆಂಗಳೂರು ಬ್ಲಾಸ್ಟರ್ಸ್​-ಹುಬ್ಬಳ್ಳಿ ಟೈಗರ್ಸ್​

ಆರಂಭ: ಮಧ್ಯಾಹ್ನ 3.00

ಮೈಸೂರು ವಾರಿಯರ್ಸ್​-ಮಂಗಳೂರು ಡ್ರ್ಯಾಗನ್ಸ್​

ಆರಂಭ: ರಾತ್ರಿ 7.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net