

ಹಾಸನ: ಐದು ದಿನಗಳ ಹಿಂದೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪೊಲೀಸ್ ಕಾನ್ಸ್ಟೇಬಲ್ ಚಿಕಿತ್ಸೆ ಫಲಕಾರಿಯಾಗದೇ ಇಂದು (ಬುಧವಾರ) ಸಾವಿಗೀಡಾಗಿದ್ದಾರೆ.
ಮೋಹನ್ ಕುಮಾರ್(32) ಮೃತ ದುರ್ದೈವಿ. ಐದು ದಿನದ ಹಿಂದೆ ಬೈಕ್ನಲ್ಲಿ ಪೊಲೀಸ್ ಠಾಣೆಗೆ ಹೋಗುವಾಗ ಹಾಸನದ ಕಂದಲಿ ಬಳಿ ಅಪಘಾತವಾಗಿತ್ತು. ತಕ್ಷಣ ಚಿಕಿತ್ಸೆಗಾಗಿ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.
ಮೋಹನ್ ಕುಮಾರ್ ಅವರಿಗೆ ಕೇವಲ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಕರೊನಾ ಲಾಕ್‌ಡೌನ್ ಆದಾಗಿನಿಂದ ಮೋಹನ್ ನಿರಂತರವಾಗಿ ಸೇವೆ ಸಲ್ಲಿಸಿದ್ದರು. ಇದೀಗ ಅವರ ಅಕಾಲಿಕ ಮರಣದಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)