

ಕೊಲಂಬೊ: ಮುಂಬರುವ ಟಿ20 ವಿಶ್ವಕಪ್ಗೆ ಪೂರ್ವಭಾವಿಯಾಗಿ ಸ್ಪಿನ್ ಬೌಲಿಂಗ್ ಆಲ್ರೌಂಡರ್ ವಾನಿಂದು ಹಸರಂಗ ಅವರನ್ನು ಶ್ರೀಲಂಕಾ ಟಿ20 ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.
ಏಕದಿನ ತಂಡದ ನಾಯಕತ್ವದಿಂದ ದಸುನ್ ಶನಕರನ್ನು ವಜಾಗೊಳಿಸಿ ಕುಸಲ್ ಮೆಂಡಿಸ್ಗೆ ಸಾರಥ್ಯದ ನೀಡಲಾಗಿದೆ. ಟೆಸ್ಟ್ ತಂಡದ ನಾಯಕರಾಗಿ ದಿಮುತ್ ಕರುಣರತ್ನೆ ಮುಂದುವರಿಯಲಿದ್ದು, ಇದೇ ಮೊದಲ ಬಾರಿಗೆ ಶ್ರೀಲಂಕಾ ತಂಡಕ್ಕೆ ಮೂರೂ ಪ್ರಕಾರದಲ್ಲಿ ಭಿನ್ನ ನಾಯಕರನ್ನು ನೇಮಿಸಲಾಗಿದೆ.