More

    ಭುವನ ಸುಂದರಿ ಹರ್ನಾಜ್ ಸಂಧು ಮದುವೆ ಆಗೋ ಹುಡುಗ ಇವರೇ..?!’ಮಿಸ್​​ ಯೂನಿರ್ವಸ್​​​’ ಪತಿ ಯಾರು ಗೊತ್ತಾ..?!

    ಭಾರತಕ್ಕೆ ಸುಮಾರು 21 ವರ್ಷಗಳ ಬಳಿಕ ಮತ್ತೆ ಭುವನ ಸುಂದರಿ ಕಿರೀಟವನ್ನ ತಂದುಕೊಟ್ಟಿದ್ದು, 2021ನೇ ಸಾಲಿನ ಮಿಸ್ ಯೂನಿವರ್ಸ್ (Miss Universe 2021) ಪಟ್ಟ ಪಂಜಾಬ್ ಮೂಲದ ಹರ್ನಾಜ್ ಸಂಧು. ಮಿಸ್​​ ಯೂನಿವರ್ಸ್​​ ಸ್ಪರ್ಧೆಯಲ್ಲಿ ವಿಜೇತೆಯಾದ ಈಕೆ 2000ನೇ ಇಸವಿಯಲ್ಲಿ ಲಾರಾ ದತ್ತಾ ‘ಭುವನ ಸುಂದರಿ’ ಕಿರೀಟ ಪಡೆದಿದ್ದರು. 21 ವರ್ಷಗಳ ನಂತರ ಹರ್ನಾಜ್ ಕೌರ್ ಸಂಧು ಅವರು ಮತ್ತೊಮ್ಮೆ ಹೆಮ್ಮೆ ತಂದಿದ್ದಾರೆ.


    ಸದ್ಯ ಹರ್ನಾಜ್​​ ಸಂಧು ಬಾಯ್​​​ಫ್ರೆಂಡ್​​ ಯಾರು, ಈಕೆ ಯಾರನ್ನ ಸೀರಿಯಸ್​​​ ಆಗಿ ಡೇಟ್​​ ಮಾಡುತ್ತಿದ್ದಾರೆ ಎಂಬ ವಿಚಾರ ಎಲ್ಲೆಡೆ ಸುದ್ದಿ ಮಾಡುತ್ತಿದೆ. ಹರ್ನಾಜ್​​, ಇಸ್ರೇಲ್‌ನ ಈಲಿಯಟ್‌ನಲ್ಲಿ ನಡೆದ 70ನೇ ಭುವನ ಸುಂದರಿ ಸ್ಪರ್ಧೆಯಲ್ಲಿ ಹರ್ನಾಜ್ ಅವರು ಅಂತಿಮ ಸುತ್ತಿನಲ್ಲಿ ತಮ್ಮ ಪ್ರತಿಸ್ಪರ್ಧಿಗಳಾಗಿದ್ದ ಪರಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸುಂದರಿಯರನ್ನು ಹಿಂದಿಕ್ಕಿ ವಿಜಯಶಾಲಿಯಾದವರು.


    ಇನ್ನು ವೀರ್ ಪಹಾರಿಯಾ ಮತ್ತು ಹರ್ನಾಜ್ ಸಂಧು ಮುಂಬೈನಲ್ಲಿ ನಡೆದ ಜಿಯೋ ವರ್ಲ್ಡ್ ಪ್ಲಾಜಾದ ಭವ್ಯವಾದ ಲಾಂಚ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡು ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳನ್ನ ಹಬ್ಬಿಸಿದ್ದರು.
    ಇತ್ತೀಚೆಗೆ, ವೀರ್ ಪಹಾರಿಯಾ ಅವರು ತಮ್ಮ ಇನ್‌ಸ್ಟಾಗ್ರಾಮ್​​​​ನಲ್ಲಿ, ಬ್ಲಾಕ್​​ ಕಲರ್​​ ಸೂಟ್​​ನಲ್ಲಿ ಹಾಟ್​​ ಆಗಿ ಕಾಣಿಸುತ್ತಿರುವ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ಇದಕ್ಕೆ ಹರ್ನಾಜ್​​​ ಸಂದು ಕಾಮೆಂಟ್​​​ ಮಾಡಿದ್ದು, ಡೇಟಿಂಗ್​​​ ವದಂತಿಗೆ ಪುಷ್ಠಿ ನೀಡಿದಂತಾಗಿದೆ.

    ಮುಂಬೈನ ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ವೀರ್ ಜತೆಗೆ ಕಾಣಿಸಿಕೊಂಡಿದ್ದ ಹರ್ನಾಜ್ ಸಂಧು ಡೇಟಿಂಗ್​ ಊಹಾಪೋಹಗಳಿಗೆ ಮತ್ತಷ್ಟು ರೆಕ್ಕೆ ಪುಕ್ಕ ಬರುವಂತೆ ವೀರ್​ ಫೋಟೋಗೆ ಕಾಮೆಂಟ್​​ ಮಾಡಿದ್ದಾರೆ. ಈ ಫೋಟೋಗೆ ಫೈಯರ್​​ ಈಮೋಜಿ ಹಾಕಿ ಕಾಡಿನಲ್ಲಿ ಒಬ್ಬನೇ ರಾಜ ಎಂದು ಕಾಮೆಂಟ್​​ ಮಾಡಿದ್ದಾರೆ. ಜತೆಗೆ ಇನ್ಸ್​​ಟಾಗ್ರಾಂನಲ್ಲಿ ಪಹಾರಿಯಾ ಪೋಸ್ಟ್​​ಗೆ ಕಾಮೆಂಟ್​ ಮಾಡುವ ಮೂಲಕ ಹರ್ನಾಜ್​ ಡೇಟಿಂಗ್​​ ವದಂತಿಗೆ ತೆರೆ ಎಳೆಯುವ ಪ್ರಯತ್ನ ಹರ್ನಾಜ್​​ ಮಾಡಿದ್ದಾರೆಂದು ಜನ ಕಾಮೆಂಟ್​​ ಮಾಡುತ್ತಿದ್ದಾರೆ


    ವೀರ್ ಶಿಖರ್ ಪಹಾರಿಯಾ ಅವರ ಸಹೋದರ, ಅವರು ಪ್ರಸ್ತುತ ಜಾನ್ವಿ ಕಪೂರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಇಬ್ಬರೂ ಸಹೋದರರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಶಿಂಧೆ ಅವರ ತಾಯಿಯ ಮೊಮ್ಮಕ್ಕಳಾಗಿದ್ದಾರೆ.

    ಒಟ್ಟಾರೆಯಾಗಿ ಹರ್ನಾಜ್​ ಮತ್ತು ಪಹಾರಿಯಾ ಡೇಟಿಂಗ್​​ ವದಂತಿಗಳು ಎಲ್ಲೆಡೆ ಹಬ್ಬಿದ್ದು, ಇವರಿಬ್ಬರೂ ಮದುವೆಯಾಗುತ್ತಾರೆ ಎಂದು ಫ್ಯಾನ್ಸ್​​ ಕಾಮೆಂಟ್​​ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts