HarshaBhogle : ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ಸೋಮವಾರ(ಏ.21) ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ VS ಗುಜರಾತ್ ಟೈಟನ್ಸ್ ಪಂದ್ಯದ ವೇಳೆ ಪ್ರಸಿದ್ಧ ವಿಕ್ಷಕ ವಿವರಣೆಗಾರರಾದ ಹರ್ಷ ಭೋಗ್ಲೆ ಮತ್ತು ಸೈಮನ್ ಡೌಲ್ ಅವರನ್ನು ನಿಷೇಧ ಮಾಡಲಾಗಿತ್ತು ಎಂದು ವರದಿಯಾಗಿದೆ.

ಇದನ್ನೂ ಓದಿ:ಐಪಿಎಲ್ನಲ್ಲಿ ಬಳಸುವ ಎಲ್ಇಡಿ ಸ್ಟಂಪ್ಸ್ ಬೆಲೆ ಎಷ್ಟು ಗೊತ್ತಾ? ನಿಮ್ಮ ಹುಬ್ಬೇರೋದು ಖಚಿತ! LED Stumps
ಆವೃತ್ತಿಯ ಆರಂಭದಲ್ಲಿ ಈಡನ್ ಪಿಚ್ ಕ್ಯುರೇಟರ್ ಬಗ್ಗೆ ಅವರು ಹೇಳಿರುವ ಹೇಳಿಕೆಗಳಿಂದಾಗಿ ಕೆಕೆಆರ್ vs ಜಿಟಿ ಪಂದ್ಯದಿಂದ ಇಬ್ಬರನ್ನೂ ತೆಗೆದುಹಾಕಿರಬಹುದು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಉಲ್ಲೇಖಿಸಿದೆ.
ಹರ್ಷ ಭೋಗ್ಲೆ- ಡೌಲ್ ಹೇಳಿದ್ದೇನು..?
ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಆರಂಭದಲ್ಲಿ ಭೋಗ್ಲೆ ಮತ್ತು ಡೌಲ್ ಈಡನ್ ಗಾರ್ಡನ್ಸ್ ಪಿಚ್ ಕ್ಯುರೇಟರ್ ಸುಜನ್ ಮುಖರ್ಜಿ ಅವರನ್ನು ಕೆಕೆಆರ್‌ನ ಆದ್ಯತೆಗಳಿಗೆ ಸರಿಹೊಂದುವ ಮೇಲ್ಮೈಯನ್ನು ಸಿದ್ಧಪಡಿಸದಿದ್ದಕ್ಕಾಗಿ ಟೀಕಿಸಿದ್ದರು. ಈ ವೇಳೆ ವಿವಾದ ಭುಗಿಲೆದ್ದಿತು.
ಪಿಚ್ ತಯಾರಿಕೆಯ ಕುರಿತು ಕೆಕೆಆರ್ ಆಡಳಿತ ಮಂಡಳಿಯಿಂದ ಸಲಹೆ ಪಡೆಯುವುದಿಲ್ಲ ಎಂದು ಮುಖರ್ಜಿ ಬಹಿರಂಗವಾಗಿ ಹೇಳಿಕೆ ನೀಡಿದ ನಂತರ ಇಬ್ಬರೂ ವ್ಯಾಖ್ಯಾನಕಾರರು(ಹರ್ಷ-ಡೌಲ್) ಮುಖರ್ಜಿ ಟೀಕಿಸಿದ್ದರು.
ಅಲ್ಲದೆ, ಕ್ರಿಕ್‌ಬಜ್‌ನಲ್ಲಿ ಮಾತನಾಡಿದ ಡೌಲ್ ಮತ್ತು ಭೋಗ್ಲೆ, ಕೆಕೆಆರ್ ತಮ್ಮ ಸಾಮರ್ಥ್ಯಕ್ಕೆ ಸೂಕ್ತವಾದ ಪಿಚ್‌ಗಳನ್ನು ಪಡೆಯಲು ಸಾಧ್ಯವಾಗದಿದ್ದರೆ ಈಡನ್ ತೊರೆಯುವುದನ್ನು ಪರಿಗಣಿಸಬೇಕು ಎಂದು ಹೇಳಿದ್ದರು.
ಈ ಇಬ್ಬರ ಹೇಳಿಕ ಬಗ್ಗೆ ಸಿಎಬಿ ಕಾರ್ಯದರ್ಶಿ ನರೇಶ್ ಓಜಾ ಸುಮಾರು 10 ದಿನಗಳ ಹಿಂದೆ ಬಿಸಿಸಿಐಗೆ ಪತ್ರ ಬರೆದ್ದಿದ್ದು, ಕೆಕೆಆರ್‌ನ ತವರು ಪಂದ್ಯಗಳಿಗೆ ಭೋಗ್ಲೆ ಮತ್ತು ಡೌಲ್ ಅವರನ್ನು ಕಾಮೆಂಟರಿ ಪ್ಯಾನೆಲ್‌ನಿಂದ ತೆಗೆದುಹಾಕುವಂತೆ ಕೋರಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಈ ಹೇಳಿಕೆಯಿಂದ ಕೋಪಗೊಂಡು ತ್ವರಿತ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.
ನಿಷೇಧದ ಬಗ್ಗೆ ಹರ್ಷಭೋಗ್ಲೆ ಹೇಳಿದ್ದೇನು..?
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯದಿಂದ ತಮ್ಮನ್ನು ದೂರವಿಡಲಾಗಿದೆ ಎಂಬ ಊಹಾಪೋಹವನ್ನು ಖ್ಯಾತ ನಿರೂಪಕ ಹರ್ಷ ಭೋಗ್ಲೆ ತಿರಸ್ಕರಿಸಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಎರಡು ಪಂದ್ಯಗಳಿಗೆ ಮಾತ್ರ ತಮ್ಮನ್ನು ಆಯ್ಕೆ ಮಾಡಲಾಗಿದೆ, ಆದರೆ ಆ ಪಂದ್ಯಗಳು ಮುಗಿದಿವೆ ಎಂದು ಅವರು ಹೇಳಿದ್ದಾರೆ.(ಏಜೆನ್ಸೀಸ್)
ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮಾಜಿ ಕ್ರಿಕೆಟಿಗ ಕೇದರ್ ಜಾಧವ್; ಯಾವ ಪಕ್ಷಕ್ಕೆ ಸೇರ್ಪಡೆ? | Kedar Jadhav
ಐಪಿಎಲ್ನಲ್ಲಿ ಬಳಸುವ ಎಲ್ಇಡಿ ಸ್ಟಂಪ್ಸ್ ಬೆಲೆ ಎಷ್ಟು ಗೊತ್ತಾ? ನಿಮ್ಮ ಹುಬ್ಬೇರೋದು ಖಚಿತ! LED Stumps