

LED Stumps : ಕ್ರಿಕೆಟ್‌ನಲ್ಲಿ ರನೌಟ್ ಮತ್ತು ಸ್ಟಂಪಿಂಗ್ ಅಂತ ಬಂದಾಗ ಎಲ್‌ಇಡಿ ಸ್ಟಂಪ್‌ಗಳು ಮತ್ತು ಬೇಲ್ಸ್ ಅಂಪೈರ್‌ಗಳಿಗೆ ಬಹಳಷ್ಟು ಸಹಾಯ ಮಾಡುತ್ತವೆ. ಈ ಹಿಂದೆ, ಸಾಮಾನ್ಯ ಸ್ಟಂಪ್‌ಗಳಿಂದಾಗಿ ಥರ್ಡ್ ಅಂಪೈರ್ ಕೆಲವು ಸಂದರ್ಭಗಳಲ್ಲಿ ತಮ್ಮ ನಿರ್ಧಾರಗಳನ್ನು ಘೋಷಿಸುವಲ್ಲಿ ವಿಳಂಬ ಮಾಡುತ್ತಿದ್ದರು. ಅಲ್ಲದೆ, ಕೆಲವೊಮ್ಮೆ ತಪ್ಪುಗಳು ಸಹ ಜರುಗುತ್ತಿದ್ದವು. ಆದರೆ, ಬಾಲ್ ಬಿದ್ದಾಗ ಎಲ್‌ಇಡಿ ಸ್ಟಂಪ್‌ಗಳು ಬೆಳಗುವುದರಿಂದ ಸ್ಟಂಪ್ ಹಾಗೂ ರನೌಟ್ ನಿರ್ಣಯಗಳನ್ನು ನೀಡಲು ಸುಲಭವಾಗಿದೆ. ಅಲ್ಲದೆ, ಔಟ್ ನಿರ್ಧಾರಗಳ ನಿಖರತೆಯನ್ನು ಇದು ಹೆಚ್ಚಿಸುತ್ತದೆ. ಅದಕ್ಕಾಗಿಯೇ 2016ರಿಂದ ಐಪಿಎಲ್‌ನಲ್ಲಿ ಎಲ್‌ಇಡಿ ಸ್ಟಂಪ್‌ಗಳನ್ನು ಬಳಸಲಾಗುತ್ತಿದೆ.
ಕ್ರಿಕೆಟ್‌ನಲ್ಲಿ ಬಳಸಲಾಗುವ ಬೇಲ್ಸ್ ಮತ್ತು ಸ್ಟಂಪ್‌ಗಳು ಸಾಂಪ್ರದಾಯಿಕ ಮರದಿಂದ ಮಾಡಲ್ಪಟ್ಟಿಲ್ಲ, ಬದಲಾಗಿ ಸಂಯೋಜಿತ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿವೆ. ಸ್ಟಂಪ್‌ಗಳು ಮತ್ತು ಬೇಲ್ಸ್ ನಡುವಿನ ಸಂಪರ್ಕವು ಕಳೆದುಹೋದಾಗ ತಕ್ಷಣ ಬೆಳಗುವ ಮೈಕ್ರೋಪ್ರೊಸೆಸರ್‌ಗಳೊಂದಿಗೆ LED ದೀಪಗಳನ್ನು ಅಳವಡಿಸಲಾಗಿದೆ.
ಒಂದು ಸಣ್ಣ ಮೈಕ್ರೊಪ್ರೊಸೆಸರ್ ಬೇಲ್ಸ್ ಮತ್ತು ಸ್ಟಂಪ್‌ಗಳ ನಡುವಿನ ಚಲನೆಯನ್ನು ಸೆಕೆಂಡಿನ 1000ನೇ ಒಂದು ಭಾಗದಲ್ಲಿ ಪತ್ತೆ ಮಾಡುತ್ತದೆ. ಒಂದು ಚೆಂಡು ಸ್ಟಂಪ್ಗೆ ಬಿದ್ದ ತಕ್ಷಣ ದೀಪಗಳು ತಕ್ಷಣವೇ ಉರಿಯುತ್ತವೆ. ಕೆಲವು ಸಣ್ಣ ಕ್ಯಾಮೆರಾಗಳನ್ನು ಸಹ ಸ್ಟಂಪ್ನಲ್ಲಿ ಅಳವಡಿಸಲಾಗಿರುತ್ತವೆ.
ಇವುಗಳನ್ನು ಮುಖ್ಯವಾಗಿ ಜಿಂಗ್ ಇಂಟರ್ನ್ಯಾಷನಲ್ನಂತಹ ಕಂಪನಿಗಳು ತಯಾರಿಸುತ್ತವೆ ಮತ್ತು ಐಸಿಸಿ ವಿಶ್ವಕಪ್ ಮತ್ತು ಐಪಿಎಲ್ನಂತಹ ಪ್ರಮುಖ ಪಂದ್ಯಾವಳಿಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಎಲ್‌ಇಡಿ ಸ್ಟಂಪ್‌ಗಳು ತುಂಬಾ ದುಬಾರಿಯಾಗಿವೆ. ನಿಖರವಾದ ಬೆಲೆ ತಿಳಿದಿಲ್ಲವಾದರೂ, ಬೇಲ್ಸ್ ಜೊತೆಗೆ ಸ್ಟಂಪ್‌ಗಳ ಬೆಲೆ 40,000 ರಿಂದ 50,000 ಡಾಲರ್ವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಅಂದರೆ, ಭಾರತೀಯ ಕರೆನ್ಸಿಯಲ್ಲಿ 30 ರಿಂದ 40 ಲಕ್ಷ ರೂ.ವರೆಗೆ ಇರುತ್ತದೆ. ಈ ಸ್ಟಂಪ್‌ಗಳ ಬೆಲೆಯು ಅವುಗಳಿಗೆ ಬಳಸುವ ವಸ್ತುಗಳು, ಟೆಕ್ನಾಲಜಿ ಹಾಗೂ ವೇಗದ ಚೆಂಡಿನ ಪರಿಣಾಮಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. (ಏಜೆನ್ಸೀಸ್)