ಟಾಲಿವುಡ್​ಗೆ ಹರ್ಷ; ಗೋಪಿಚಂದ್​ ಅಭಿನಯದ 31ನೇ ಚಿತ್ರದ ನಿರ್ದೇಶನ

Gopichand 31 A - New
Published on

ಹೈದರಾಬಾದ್​: ಶಿವರಾಜಕುಮಾರ್​ ಅಭಿನಯದ 'ವೇದ' ಚಿತ್ರದ ನಂತರ ನಿರ್ದೇಶಕ ಎ. ಹರ್ಷ ಅವರ ಮುಂದಿನ ಹೆಜ್ಜೆ ಏನು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಏಕೆಂದರೆ, 'ವೇದ' ಬಿಡುಗಡೆಯಾಗಿ 50 ದಿನಗಳಾದರೂ ಹರ್ಷ ಮುಂದಿನ ಚಿತ್ರ ಯಾವುದು ಎಂಬ ಘೋಷಣೆಯಾಗಿರಲಿಲ್ಲ. ಆ ಕುತೂಹಲಕ್ಕೆ ಶನಿವಾರ ಕೊನೆಗೂ ತೆರೆಬಿದ್ದಿದೆ.

ಟಾಲಿವುಡ್ ಸ್ಟಾರ್ ನಟ ಗೋಪಿಚಂದ್ ಅಭಿನಯದ 31ನೇ ಚಿತ್ರಕ್ಕೆ ಎ.ಹರ್ಷ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಶನಿವಾರ, ಗೋಪಿಚಂದ್ ಹಾಗೂ ಹರ್ಷ ಕಾಂಬಿನೇಶನ್ ಸಿನಿಮಾ ಅದ್ದೂರಿಯಾಗಿ ಸೆಟ್ಟೇರಿದ್ದು, ಈ ಚಿತ್ರವನ್ನು ಶ್ರೀ ಸತ್ಯ ಸಾಯಿ ಆರ್ಟ್ಸ್ ಪ್ರೊಡಕ್ಷನ್​ನಡಿ ಕೆ.ಕೆ. ರಾಧಾಮೋಹನ್ ನಿರ್ಮಾಣ ಮಾಡುತ್ತಿದ್ದಾರೆ.

ಇದೊಂದು ಪಕ್ಕಾ ಆಕ್ಷನ್​ ಚಿತ್ರವಾಗಿದ್ದು, ಇದರಲ್ಲಿ ಹೊಸ ಅವತಾರದಲ್ಲಿ ಗೋಪಿಚಂದ್​ ಕಾಣಿಸಿಕೊಳ್ಳುತ್ತಿದ್ದಾರಂತೆ. ಸದ್ಯಕ್ಕೆ ಈ ಚಿತ್ರದ ಕಥೆ ಏನು, ವಿಶೇಷತೆ ಏನು ಮುಂತಾದ ಯಾವ ವಿಷಯಗಳ ಬಗ್ಗೆಯೂ ಸಹರ್ಷ ಆಗಲೀ, ಚಿತ್ರತಂಡದವರಾಗಲೀ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದೇ ತಿಂಗಳಿನಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

ಈ ಚಿತ್ರದಲ್ಲಿ ಬರೀ ಹರ್ಷ ಮಾತ್ರವಲ್ಲ. ಕನ್ನಡದ ಇನ್ನಿಬ್ಬರು ತಂತ್ರಜ್ನರು ಸಹ ಕೆಲಸ ಮಾಡುತ್ತಿದ್ದಾರೆ. 'ಭಜರಂಗಿ 2' ಮತ್ತು 'ವೇದ' ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದ ಸ್ವಾಮಿ ಜೆ ಮತ್ತು ರವಿ ಬಸ್ರೂರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದರೆ, ರವಿ ಬಸ್ರೂರು ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರದ ನಾಯಕಿ ಸೇರಿದಂತೆ ಉಳಿದ ಕಲಾವಿದರು ಮತ್ತು ತಂತ್ರಜ್ನರ ಬಗ್ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net