ಅಕ್ರಮವಾಗಿ ಶಾರುಖ್ ಖಾನ್​​ ಬಂಗಲೆ ಪ್ರವೇಶಿಸಿದ ಇಬ್ಬರು ಯುವಕರು ಪೊಲೀಸರ ವಶಕ್ಕೆ!

shah rukh khan
Published on

ಮುಂಬೈ: ಅಭಿಮಾನಿಗಳಿಗೆ ನಟ, ನಟಿಯರನ್ನು ಭೇಟಿಯಾಗುವುದು, ಜೆತೆಗೆ ಫೋಟೋ ತೆಗೆದುಕೊಳ್ಳುವುದು ಎಂದರೆ ಸಖತ್​ ಕ್ರೇಜ್​​ ಇರುತ್ತದೆ. ಇಬ್ಬರು ಯುವಕರು ಬಾಲಿವುಡ್ ನಟ ಶಾರುಖ್ ಖಾನ್ ಅವರ ಮುಂಬೈನಲ್ಲಿರುವ 'ಮನ್ನತ್' ನಿವಾಸಕ್ಕೆ ಅಕ್ರಮವಾಗಿ ಪ್ರವೇಶಿಸಿ ಪೊಲೀಸರ ಅತಿಥಿಯಾಗಿದ್ದಾರೆ.

ಕಾಂಪೌಂಡ್ ಗೋಡೆ ಏರಿದ 20 ರಿಂದ 22 ವಯೋಮಾನದೊಳಗಿನ ಗುಜರಾತ್ ಮೂಲದ ಈ ಇಬ್ಬರು ಯುವಕರು ಒಳ ಪ್ರವೇಶಿಸಿದ್ದಾರೆ. ಆದರೆ ತಕ್ಷಣವೇ ಇವರನ್ನು ಹಿಡಿದ ಭದ್ರತಾ ಸಿಬ್ಬಂದಿ ಪೊಲೀಸರ ವಶಕ್ಕೆ ನೀಡಿದ್ದಾರೆ.

ವಿಚಾರಣೆ ವೇಳೆ ಈ ಇಬ್ಬರು ಯುವಕರು ತಾವು ಶಾರುಖ್ ಖಾನ್ ಅಭಿಮಾನಿಗಳಾಗಿದ್ದು, ಅವರನ್ನು ನೋಡುವ ಸಲುವಾಗಿಯೇ ಗುಜರಾತಿನಿಂದ ಮುಂಬೈಗೆ ಬಂದಿದ್ದೆವು ಎಂದಿದ್ದಾರೆ. ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಈ ಇಬ್ಬರು ಯುವಕರು ಒಳ ಪ್ರವೇಶಿಸಲು ಏಕೆ ಯತ್ನಿಸಿದ್ದರು ಎಂಬುದು ತನಿಖೆ ಬಳಿಕ ತಿಳಿದು ಬರಲಿದೆ.

200 ಕೋಟಿ ರೂಪಾಯಿ ಬೆಲೆಬಾಳುವ ಶಾರುಖ್ ಅವರ 'ಮನ್ನತ್' ನಿವಾಸ, ವಾಣಿಜ್ಯ ನಗರಿ ಮುಂಬೈನ ಬಾಂದ್ರಾ ಬ್ಯಾಂಡ್ ಸ್ಟ್ಯಾಂಡ್ ಬಳಿ ಇದ್ದು, ಕೆಲವೊಮ್ಮೆ ಶಾರುಖ್ ತಮ್ಮ ಬಂಗಲೆಯಿಂದ ಹೊರಬಂದು ಅಭಿಮಾನಿಗಳನ್ನು ಭೇಟಿಯಾಗುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net