ಸಹೋದರರೊಂದಿಗೆ ಕೇರಂ ಆಡಿದ ಹಾರ್ದಿಕ್ ಪಾಂಡ್ಯ.!

hardik pandya brother_WEB
Published on

ಮುಂಬೈ: ಲಾಕ್‌ಡೌನ್‌ನಿಂದಾಗಿ ಕ್ರಿಕೆಟ್‌ನಿಂದ ಬಿಡುವು ಪಡೆದಿರುವ ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ದಿನಂಪ್ರತಿ ತಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ಹಂಚಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಅಡುಗೆ ಮಾಡುವ ಮೂಲಕ ಗಮನಸೆಳೆದಿದ್ದ ಪಾಂಡ್ಯ, ಬುಧವಾರ ಸಹೋದರರೊಂದಿಗೆ ಕೇರಂ ಆಡುವ ಮೂಲಕ ಗಮನಸೆಳೆದಿದ್ದಾರೆ. ಸಹೋದರೊಂದಿಗೆ ಕೇರಂ ಆಡಲು ಇದಕ್ಕಿಂತ ಉತ್ತಮ ಸಮಯ ಮತ್ತೊಂದಿಲ್ಲ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕರೊನಾ ವೈರಸ್‌ನಿಂದಾಗಿ ಕಳೆದ ಮೂರುವರೆ ತಿಂಗಳಿಂದ ಕ್ರೀಡಾ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡಿದೆ. ಸ್ಟಾರ್ ಕ್ರಿಕೆಟಿಗರಿಗೆ ಇನ್‌ಸ್ಟಾಗ್ರಾಂ, ಟ್ವಿಟರ್ ಪ್ರಮುಖ ಅಸವಾಗಿದೆ. ಇದಕ್ಕೆ ಪಾಂಡ್ಯ ಸಹೋದರರು ಹೊರತಾಗಿಲ್ಲ. ಹಾರ್ದಿಕ್ ಪಾಂಡ್ಯ ತಮ್ಮ ಸಹೋದರ ಕೃನಾಲ್ ಪಾಂಡ್ಯ, ಇನ್ನಿತರ ಸಹೋದರ ಸಂಬಂಧಿಗಳೊಂದಿಗೆ ಕೇರಂ ಆಡುವ ಮೂಲಕ ಗಮನಸೆಳೆದಿದ್ದಾರೆ. ಮೊನ್ನೆಯಷ್ಟೇ ಚೀಸ್ ಬಟ್ಟರ್ ಮಸಾಲ ತಯಾರಿಸಿದ್ದರು. ಇದು ಬಾಲಿವುಡ್ ನಟಿಯರ ಗಮನಸೆಳೆದಿತ್ತು. ಜತೆಗೆ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಗೊಂಡ ಬೆನ್ನಲ್ಲೇ ಲಕ್ಷಾಂತರ ಮಂದಿ ಲೈಕ್ ಸೂಚಿಸಿದ್ದರು. 26 ವರ್ಷದ ಪಾಂಡ್ಯ ಇತ್ತೀಚೆಗಷ್ಟೇ ಪತ್ನಿ ನತಾಶಾ ಸ್ಟಾನ್ಕೊವಿಕ್ ತಾಯಿಯಾಗುತ್ತಿರುವ ವಿಷಯ ಬಹಿರಂಗಪಡಿಸಿದ್ದರು. 2020ರ ಜನವರಿ 1ರಂದು ನತಾಶಾ ಜತೆಗೆ ನಿಶ್ಚಿತಾರ್ಥ
ಮಾಡಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net