ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜತೆಗಿನ ವಿಚ್ಛೇದನದ ಬಳಿಕ ಬಾಲಿವುಡ್ ನಟಿ ನತಾಶಾ ಸ್ಟಾಂಕೊವಿಕ್ ಹುಟ್ಟೂರು ಸರ್ಬಿಯಾಗೆ ಹೋಗಿದ್ದರು. ಅವರು ವಿಮಾನ ಏರುತ್ತಲೇ ನತಾಶಾ ಅಲ್ಲಿಯೇ ಸೆಟಲ್ ಆಗುತ್ತಾರೆ, ಭಾರತಕ್ಕೆ ವಾಪಸ್ಸಾಗುವುದಿಲ್ಲ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡತೊಡಗಿತು. ಅದಾಗಿ ಕೆಲ ದಿನಗಳಲ್ಲೇ ಮುಂಬೈಗೆ ವಾಪಸ್ಸಾದ ನತಾಶಾ, ಮತ್ತೆ ಗ್ಲಾಮರ್ ಲೋಕದಲ್ಲಿ ಮಿಂಚಲು ಸಿದ್ಧತೆ ನಡೆಸುತ್ತಿದ್ದಾರೆ.
ಇದೇ ಮೊದಲ ಬಾರಿಗೆ ವಿಚ್ಛೇದನ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಮೌನ ಮುರಿದಿರುವ ಅವರು, “ನಾನು ಸರ್ಬಿಯಾಗೆ ಶಿಫ್ಟ್ ಆಗಿದ್ದೇನೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಅದ್ಹೇಗೆ ನಾನು ಅಲ್ಲಿಗೆ ಹೋಗಿರಲಿ? ನನಗೆ ಮಗನಿದ್ದಾನೆ. ಅವನು ಇಲ್ಲೇ ಓದುತ್ತಿದ್ದಾನೆ. ಮಗ ಅಗಸ ಇಲ್ಲಿಗೆ ಸೇರಿದವನು. ಆತನ ಕುಟುಂಬ ಇಲ್ಲಿದೆ. ನಾವು ವಿಚ್ಛೇದನ ಪಡೆದಿರಬಹುದು. ಆದರೆ, ಮಗನಿಗೆ ಅಪ್ಪ, ಅಮ್ಮ ಇಬ್ಬರೂ ಬೇಕು. ಕಳೆದ 10 ವರ್ಷಗಳಿಂದಲೂ ನಾನು ಇದೇ ಸಮಯದಲ್ಲಿ ಸರ್ಬಿಯಾಗೆ ಹೋಗುತ್ತಿದ್ದೆ. ಅದೇ ರೀತಿ ಈ ಬಾರಿಯೂ ಹೋಗಿಬಂದೆ ಅಷ್ಟೇ. ಐದು ವರ್ಷಗಳ ಕಾಲ ನಾನು ಕೆಲಸ ಮಾಡಿಲ್ಲ. ಕೆಲಸದಿಂದ ದೂರವಾಗಬಾರದಿತ್ತು ಅಂತ ನನಗೆ ಈಗ ಅನ್ನಿಸುತ್ತಿದೆ’ ಎಂದು ಹೇಳಿಕೊಂಡಿದ್ದಾರೆ.
ನತಾಶಾ ಮ್ಯೂಸಿಕ್ ವಿಡಿಯೋ ಆಲ್ಬಂ ಸಾಂಗ್ನಲ್ಲಿ ನಟಿಸಿದ್ದು, ಕಳೆದ ತಿಂಗಳು “ತೇರೆ ಕರ್ಕೇ’ ಎಂಬ ಆ ಹಾಡು ರಿಲೀಸ್ ಆಗಿದೆ.