

ನವದೆಹಲಿ: ಕ್ರಿಕೆಟರ್ ಹಾರ್ದಿಕ್ ಪಾಂಡ್ಯ, ನತಾಶಾ ಇಬ್ಬರೂ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ವಿಚ್ಛೇದನ ನಂತರ ಮೊದಲಬಾರಿ ಪಾಂಡ್ಯ ತಮ್ಮ ಮುದ್ದು ಮಗ ಅಗಸ್ತ್ಯನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ನಾಲ್ಕು ವರ್ಷಗಳು ಒಟ್ಟಾಗಿ ಇದ್ದ ಹಾರ್ದಿಕ್ ಪಾಂಡ್ಯ, ನತಾಶಾ ಮಗು ಮಾಡಿಕೊಂಡ ನಂತರ ಇವರು ಮದುವೆ ಆದರು. ಮಗನಿಗೆ ಅಗಸ್ತ್ಯ ಎಂದು ಹಾರ್ದಿಕ್ ಹೆಸರು ಇಟ್ಟಿದ್ದಾರೆ. ಈಗ ನತಾಶಾ ಹಾಗೂ ಹಾರ್ದಿಕ್ ದೂರ ಆಗಿದ್ದಾರೆ. ಈ ಜೋಡಿ ವಿಚ್ಛೇದನ ನಂತರ ಕೂಡಾ ಸ್ನೇಹಿತರಾಗಿ ಮುಂದುವರೆಯುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ವೈಯಕ್ತಿಕ ಜೀವನದಲ್ಲಿ ಇತ್ತೀಚಿನ ಬದಲಾವಣೆಗಳ ಹೊರತಾಗಿಯೂ, ಹಾರ್ದಿಕ್ ಪಾಂಡ್ಯ ಅವರ ಮಗನ ಕುರಿತಾಗಿ ಹೆಚ್ಚಿನ ಪ್ರೀತಿ ಹೊಂದಿದ್ದಾರೆ. ಜುಲೈ 30 ರಂದು ಅಗಸ್ತ್ಯ ಜನ್ಮದಿನ. ಮಗನಿಗೆ ಪ್ರೀತಿ ಸಂದೇಶ ಮತ್ತು ಹೃದಯಸ್ಪರ್ಶಿ ವೀಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುವ ಮೂಲಕವಾಗಿ ಮಗನ ಬರ್ತಡೆಗೆ ಶುಭಕೋರಿದ್ದಾರೆ. ಪೋಸ್ಟ್‌ನಲ್ಲಿ , ಹಾರ್ದಿಕ್ ಪಾಂಡ್ಯ ಅವರು ಮತ್ತು ಅವರ ಮಗನ ನಡುವಿನ ಅಮೂಲ್ಯ ಕ್ಷಣಗಳನ್ನು ಸೆರೆಹಿಡಿಯುವ ವೀಡಿಯೋ ಹಂಚಿಕೊಂಡಿದ್ದಾರೆ.
ಹೃದಯಸ್ಪರ್ಶಿ ವೀಡಿಯೊ ಜೊತೆಗೆ, ಹಾರ್ದಿಕ್ ಪಾಂಡ್ಯ ತನ್ನ ಮಗ ಅಗಸ್ತ್ಯನ ಹುಟ್ಟುಹಬ್ಬದ ಸಂದೇಶವನ್ನು ಹಂಚಿಕೊಂಡಿದ್ದಾರೆ. “ನೀನು ನನ್ನ ಪ್ರತಿದಿನದ ಶಕ್ತಿಯ ಮೂಲ ಆಗಿದ್ದೀಯ. ನನ್ನ ಕ್ರೈಂ ಪಾರ್ಟರ್ಗೆ ಜನ್ಮದಿನದ ಶುಭಾಶಯಗಳು, ತುಂಬು ಹೃದಯದಿಂದ, ನನ್ನ ಮಗು ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ ಅಪ್‌ಲೋಡ್ ಮಾಡಿದ ತಕ್ಷಣ, ಅಭಿಮಾನಿಗಳು “ಜೂನಿಯರ್ ಪಾಂಡ್ಯ” ಜನ್ಮದಿನದ ಶುಭಾಶಯಗಳನ್ನು ಕೋರಿ ಕಾಮೆಂಟ್ ಮಾಡುತ್ತಿದ್ದಾರೆ.
ಜುಲೈ 18 ರಂದು, ಹಾರ್ದಿಕ್ ಪಾಂಡ್ಯ ಮತ್ತು ನತಾಸಾ ಸ್ಟಾಂಕೋವಿಕ್ ನಾಲ್ಕು ವರ್ಷಗಳ ದಾಂಪತ್ಯದ ನಂತರ ತಮ್ಮ ಪ್ರತ್ಯೇಕತೆಯನ್ನು ಅಧಿಕೃತವಾಗಿ ಘೋಷಿಸಿದರು. ಅವರು ತಮ್ಮ ಮಗ ಅಗಸ್ತ್ಯನನ್ನು ಸಹ-ಪೋಷಕರಾಗಿ ಮತ್ತು ಅವನ ಯೋಗಕ್ಷೇಮವನ್ನು ನೋಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ, ನತಾಶಾ ಸ್ಟಾಂಕೋವಿಕ್ ಮತ್ತು ಅಗಸ್ತ್ಯ, ಸೆರ್ಬಿಯಾದಲ್ಲಿ ರಜೆಯನ್ನು ಆನಂದಿಸುತ್ತಿದ್ದಾರೆ.