More

    ಕ್ರಿಕೆಟಿಗ ಹರ್ಭಜನ್​ ಸಿಂಗ್​ ಚೊಚ್ಚಲ ತಮಿಳು ಚಿತ್ರದ ಫಸ್ಟ್ ಲುಕ್​ ಹೀಗಿದೆ!

    ಐಪಿಎಲ್​ ಹೊತ್ತಿನಲ್ಲಿ ಚೈನ್ನೈ ಸೂಪರ್​ಕಿಂಗ್ಸ್​ ತಂಡದಲ್ಲಿ ಆಟ ಆಡುವಾಗ, ಸೋಷಿಯಲ್​ ಮೀಡಿಯಾಗಳಲ್ಲಿ ತಮಿಳು ಲಿಪಿಯಲ್ಲಿ ಟ್ವಿಟ್​ ಮಾಡಿ ಸಿಎಸ್​ಕೆ ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್​, ಕಾಲಿವುಡ್​ನಲ್ಲಿ ಸಿನಿಮಾ ಮಾಡುವುದಾಗಿಯೂ ಹೇಳಿದ್ದರು. ಬಳಿಕ ಸಿನಿಮಾ ಒಪ್ಪಿಕೊಂಡು ನಟನೆಯನ್ನೂ ಒಂದು ಕೈ ನೋಡಿಯೇ ಬಿಟ್ಟರು. ಇದೀಗ ಅದೇ ಸಿನಿಮಾದ ಫಸ್ಟ್ ಲುಕ್​ ಶೇರ್​ ಮಾಡಿಕೊಂಡಿದ್ದಾರೆ ಹರ್ಭಜನ್​.

    ಇದನ್ನೂ ಓದಿ: ‘ವಿರೂಷ್ಕಾ ಡಿವೋರ್ಸ್’ ಭರ್ಜರಿ ಟ್ರೆಂಡಿಂಗ್‌ನಲ್ಲಿದೆ ಯಾಕೆ ಗೊತ್ತೇ?

    ಕ್ರಿಕೆಟಿಗ ಹರ್ಭಜನ್​ ಸಿಂಗ್​ ಚೊಚ್ಚಲ ತಮಿಳು ಚಿತ್ರದ ಫಸ್ಟ್ ಲುಕ್​ ಹೀಗಿದೆ!

    ಹೌದು, ಜಾನ್​ ಪೌಲ್​ ರಾಜ್​ ಮತ್ತು ಶ್ಯಾಂ​ ಸೂರ್ಯ ನಿರ್ದೇಶನದಲ್ಲಿ ‘ಫ್ರೆಂಡ್​ಶಿಪ್​’ ಶೀರ್ಷಿಕೆಯಲ್ಲಿ ಸಿನಿಮಾ ಸಿದ್ಧವಾಗಿದೆ. ಹರ್ಭಜನ್​ ಜತೆಗೆ ಅರ್ಜುನ್ ಸರ್ಜಾ ಸಹ ಮುಖ್ಯಭೂಮಿಕೆಯಲ್ಲಿದ್ದಾರೆ. ಕಾಲೇಜು ಕ್ಯಾಂಪಸ್​ನಲ್ಲಿ ನಡೆಯುವ ಥ್ರಿಲ್ಲರ್​ ಶೈಲಿಯ ಸಿನಿಮಾ ಇದಾಗಿದ್ದು, ಹರ್ಭಜನ್​ ಎಂದಿನ ಟರ್ಬನ್​ ಲುಕ್​ನಲ್ಲಿಯೇ ಪೋಸ್ಟರ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಬಿಗ್​ಬಾಸ್​ ಖ್ಯಾತಿಯ ಲೋಸಲಿಯಾ ಜೋಡಿ.

    ಇದನ್ನೂ ಓದಿ: PHOTOS| ಅದಾ ಶರ್ಮಾ ಹಾಟ್​ ಫೋಟೋ ಹಾಕುವುದರ ಹಿಂದಿದೆಯಾ ಈ ಉದ್ದೇಶ!?

    ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ‘ಫ್ರೆಂಡ್​ಶಿಪ್​’ ಸಿನಿಮಾ ತೆರೆಕಂಡಿರಬೇಕಿತ್ತು. ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಆಗಸ್ಟ್ ವೇಳೆಗೆ ಬಿಡುಗಡೆಗೆ ಪ್ಲ್ಯಾನ್​ ಮಾಡಿದೆ. ಇನ್ನು ಈ ಸಿನಿಮಾದ ಜತೆಯಲ್ಲಿ ಸಂತಾನಮ್​ ನಾಯಕನಾಗಿ ನಟಿಸಲಿರುವ ‘ದಿಕ್ಕಿಲೋನಾ’ ಚಿತ್ರದಲ್ಲಿಯೂ ಬಜ್ಜಿ ನಟಿಸಲಿದ್ದಾರೆ. (ಏಜೆನ್ಸೀಸ್)

    PHOTO GALLERY | ಬಿಕಿನಿ ಅವತಾರದಲ್ಲಿ ಕೆಜಿಎಫ್​ ಬೆಡಗಿ ಮೌನಿ ರಾಯ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts