VIDEO:ಹರ್ಭಜನ್ ಸಿಂಗ್‌ಗೇ ಡ್ಯಾನ್ಸ್ ಡೆಮೋ ಕೇಳಿದ ಅಭಿಮಾನಿಗಳು

Harbhajan-Singh.webp new photo
Published on

ನವದೆಹಲಿ: ಭಾರತ ತಂಡದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಸಾಮಾಜಿಕ ಜಾಲತಾಣಗಳಿಗೆ ಸಾಕಷ್ಟು ಹತ್ತಿರವಾಗಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕ್ರಿಕೆಟ್ ಚಟುವಟಿಕೆಗಳಿಂದ ದೂರ ಉಳಿದಿರುವ ಹರ್ಭಜನ್ ಸಿಂಗ್ ಮೈಕ್ರೊ ಬ್ಲಾಗಿಂಗ್ ಸೈಟ್‌ನ 20 ಸೆಕೆಂಡ್‌ಗಳ ವಿಡಿಯೋವೊಂದನ್ನು ಪ್ರಕಟಿಸಿ, ಫಿಟ್ನೆಸ್ ಕಾಯ್ದುಕೊಳ್ಳಲು ಈ ವಿಡಿಯೋದಲ್ಲಿರುವ ಸುಲಭವಾದ ವ್ಯಾಯಾಮ ಮಾಡಿ ಎಂದು ಅಭಿಮಾನಿಗಳಿಗೆ ತಮಾಷೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ‘ನೀವು ಒಮ್ಮೆ ಡೆಮೋ ತೋರಿಸಿ ಕೋಡಿ, ಬಳಿಕ ನಾವು ನಿಮ್ಮನ್ನು ಹಿಂಬಾಲಿಸುತ್ತೇವೆ’ ಎಂದಿದ್ದಾರೆ.

ವ್ಯಕ್ತಿ ಓರ್ವ ತುಂಬಿದ ಜನರ ಮಧ್ಯೆ ವಿಚಿತ್ರ ಸ್ಟೆಪ್ಟ್‌ಗಳನ್ನು ಹಾಕುತ್ತಾ ರಂಜಿಸುತ್ತಿದ್ದಾನೆ. ಮೈಕ್ರೊ ಬ್ಲಾಗಿಂಗ್‌ನಲ್ಲಿ ಸಿಕ್ಕಿರುವ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವ ಹರ್ಭಜನ್ ಸಿಂಗ್, ಇದು ತುಂಬಾ ಸುಲಭವಾಗಿದೆ. ಕೇವಲ 20 ಸೆಕೆಂಡ್ ಇದ್ದು, ಫಿಟ್ನೆಸ್ ಕಾಯ್ದುಕೊಳ್ಳಲು ಉತ್ತಮ ವ್ಯಾಯಾಮಗಳಿವೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಕೂಡ ಬಗೆ ಬಗೆಯ ರೀತಿಯಲ್ಲಿ ಪ್ರತಿಕ್ರಿಯಿಸಿ ಹರ್ಭಜನ್‌ಗೇ ತಮಾಷೆ ಮಾಡಿದ್ದಾರೆ.

ಹರ್ಭಜನ್ ಸಿಂಗ್ ಇತ್ತೀಚೆಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರ ಯೂಟೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾರೆ, ಕೇಂದ್ರ ಗುತ್ತಿಗೆ ಒಪ್ಪಂದ ಹೊಂದಿರದ ಆಟಗಾರರಿಗೆ ವಿದೇಶಿ ಲೀಗ್‌ಗಳಲ್ಲಿ ಆಡಲು ಅನುಮತಿ ನೀಡಬೇಕೆಂದು ಬಿಸಿಸಿಐಗೆ ಒತ್ತಾಯಿಸಿದ್ದರು. ಹರ್ಭಜನ್ ಹೇಳಿಕೆಗೆ ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಇರ್ಫಾನ್​ ಪಠಾಣ್ ಕೂಡ ಧ್ವನಿಗೂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net