More

    ಜೂನ್ 20: ಮೂವರು ದಿಗ್ಗಜರು ಟೆಸ್ಟ್‌ಗೆ ಪದಾರ್ಪಣೆ ಮಾಡಿದ ದಿನ

    ಬೆಂಗಳೂರು: ಜೂನ್ 20, ಭಾರತೀಯ ಕ್ರಿಕೆಟ್ ಇತಿಹಾಸದ ಪ್ರಮುಖ ದಿನಗಳಲ್ಲಿ ಒಂದು. ಇದೇ ದಿನದ 1996ರಲ್ಲಿ ದಿಗ್ಗಜರಾದ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಹಾಗೂ 2011ರ ಇದೇ ದಿನದಂದು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನ. ವಿಶ್ವ ಕ್ರಿಕೆಟ್ ಕಾಶಿ ಎಂದೇ ಕರೆಸಿಕೊಳ್ಳುವ ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ರಾಹುಲ್ ಹಾಗೂ ಗಂಗೂಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಬಳಿಕ ನಡೆದಿದ್ದು ಇತಿಹಾಸ..

    ಇದನ್ನೂ ಓದಿ: ಮಗನ ಬಲಿ ಪಡೆದ ರಸ್ತೆ ಗುಂಡಿ ಮುಚ್ಚಿದ ವ್ಯಕ್ತಿಗೆ ಲಕ್ಷ್ಮಣ್ ಶ್ಲಾಘನೆ

    ಮೊದಲ ಪಂದ್ಯದಲ್ಲೇ ದಾದಾ ಮಿಂಚಿಂಗ್….

    1996ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋತ ಬಳಿಕ ಭಾರತ ತಂಡದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲಾಯಿತು. ಇದರ ಲವಾಗಿ ದೇಶೀಯ ಕ್ರಿಕೆಟ್‌ನಲ್ಲಿ ರನ್ ಹೊಳೆಯನ್ನೇ ಹರಿಸಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ಹಾಗೂ ಬಂಗಾಳದ ಸೌರವ್ ಗಂಗೂಲಿಗೆ ರಾಷ್ಟ್ರೀಯ ತಂಡಕ್ಕೆ ಕರೆ ನೀಡಲಾಯಿತು. ಇಂಗ್ಲೆಂಡ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲೇ ಗಂಗೂಲಿ 131 ರನ್ ಸಿಡಿಸಿ ಮಿಂಚಿದರೆ, 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿದ ರಾಹುಲ್ ದ್ರಾವಿಡ್ 95 ರನ್ ಸಿಡಿಸಿ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸುವ ಅವಕಾಶ ತಪ್ಪಿಸಿಕೊಂಡರು. ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ವಿಶ್ವದ 7ನೇ ಹಾಗೂ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಜೂನ್ 20: ಮೂವರು ದಿಗ್ಗಜರು ಟೆಸ್ಟ್‌ಗೆ ಪದಾರ್ಪಣೆ ಮಾಡಿದ ದಿನಗಂಗೂಲಿ 113 ಟೆಸ್ಟ್ ಹಾಗೂ 311 ಏಕದಿನ ಪಂದ್ಯಗಳಿಂದ ಕ್ರಮವಾಗಿ 7212 ಹಾಗೂ 11363 ರನ್ ಪೇರಿಸಿದ್ದಾರೆ. ಗಂಗೂಲಿ ನಾಯಕತ್ವದಲ್ಲಿಯೆ ಭಾರತ ತಂಡ 2003ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು. ಮತ್ತೊಂದೆಡೆ, 267 ಎಸೆತಗಳಲ್ಲಿ 95 ರನ್ ಗಳಿಸಿದ್ದ ದ್ರಾವಿಡ್ ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಎನಿಸಿಕೊಂಡರು. 164 ಟೆಸ್ಟ್ ಪಂದ್ಯಗಳಿಂದ 13288 ರನ್ ಹಾಗೂ 344 ಏಕದಿನ ಪಂದ್ಯಗಳಿಂದ 10889 ರನ್ ಕಲೆಹಾಕಿದ್ದಾರೆ.

    ಇದನ್ನೂ ಓದಿ: ಗಂಗೂಲಿ ಓಪನರ್ ಆಗಿ ಆಡಲು ಇವರೇ ಕಾರಣ!

    2011ರ ಏಕದಿನ ವಿಶ್ವಕಪ್ ಜಯಿಸಿದ ಭಾರತ ತಂಡ, ಐಪಿಎಲ್ ಮುಕ್ತಾಯ ಗೊಳ್ಳುತ್ತಿದ್ದಂತೆಯೇ ವೆಸ್ಟ್ ಇಂಡೀಸ್‌ಗೆ ಪ್ರಯಾಣ ಬೆಳೆಸಿತು. ಜೂನ್ 20ರಂದು ಕಿಂಗ್ಸ್‌ಸ್ಟನ್‌ನಲ್ಲಿ ಆರಂಭಗೊಂಡ ಸರಣಿಯ ಮೊದಲ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಟೆಸ್ಟ್ ಸರಣಿಗೆ ಪದಾರ್ಪಣೆ ಮಾಡಿದರು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿದ್ದ ಕೊಹ್ಲಿ 4 ರನ್ ಗಳಿಸಷ್ಟೇ ಶಕ್ತರಾಗಿದ್ದರು. ಇದೀಗ ಮೂರು ಮಾದರಿಯಲ್ಲೂ ಭಾರತ ತಂಡ ಮುನ್ನಡೆಸುತ್ತಿದ್ದಾರೆ. ಇದೇ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ತಮಿಳುನಾಡಿದ ಅಭಿನವ್ ಮುಕುಂದ್ ಹಾಗೂ ಉತ್ತರಪ್ರದೇಶದ ಪ್ರವೀಣ್ ಕುಮಾರ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

    ಸಲ್ಮಾನ್​ ಖಾನ್​ ‘ಬೀಯಿಂಗ್​ ಹ್ಯೂಮನ್​’ ಚಾರಿಟಿಯ ಅಸಲಿ ಮುಖ ಬಹಿರಂಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts