Champions Trophy : ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನ ನಡುವೆ ಇನ್ನು 12 ದಿನಗಳಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಎಲ್ಲ ಕ್ರಿಕೆಟ್ ಪ್ರಿಯರು ಈ ಪಂದ್ಯಕ್ಕಾಗಿ ಕಾತರದಿಂದ ಎದುರು ನೋಡುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಭಾಗವಾಗಿ ಫೆಬ್ರವರಿ 23 ರಂದು ದುಬೈನಲ್ಲಿ ಈ ಪಂದ್ಯ ನಡೆಯಲಿದೆ. ಇದರಲ್ಲಿ ತಮ್ಮ ತಂಡ ಗೆಲ್ಲಲಿ ಅಂತ ಆಯಾ ದೇಶದ ಕ್ರೀಡಾಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದರ ನಡುವೆ ಉಭಯ ದೇಶಗಳ ಇಬ್ಬರು ದಿಗ್ಗಜ ಆಟಗಾರರು ಕಿತ್ತಾಡಿಕೊಂಡಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಮೈದಾನದಲ್ಲೇ ಜಗಳವಾಡಿದ್ದಾರೆ. ಭಜ್ಜಿ ಬ್ಯಾಟ್ ಹಿಡಿದು ಅಖ್ತರ್ಗೆ ಎಚ್ಚರಿಕೆ ನೀಡಿದರೆ, ಅಖ್ತರ್ ಬಾಲ್ ಹಿಡಿದು ಭಜ್ಜಿಗೆ ಬೆದರಿಕೆ ಹಾಕಿದರು. ಅಲ್ಲದೆ, ಇಬ್ಬರು ಪರಸ್ಪರ ತಳ್ಳಾಡಿದರು. ಅಂತಾರಾಷ್ಟ್ರೀಯ ಲೀಗ್ ಟಿ20ಯ ಅಂತಿಮ ಪಂದ್ಯದ ಸಂದರ್ಭದಲ್ಲಿ ದುಬೈ ಕ್ರೀಡಾಂಗಣದಲ್ಲಿ ಇಬ್ಬರೂ ಜಗಳವಾಡಿದ್ದಾರೆ.
ಆದರೆ, ಇದು ನಿಜವಾದ ಜಗಳವಲ್ಲ. ಇಬ್ಬರು ಇದನ್ನು ಕೇವಲ ತಮಾಷೆಗಾಗಿ ಮಾಡಿದ್ದಾರೆ. ಶೋಯೆಬ್ ಅಖ್ತರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, “ಚಾಂಪಿಯನ್ಸ್ ಟ್ರೋಫಿಗೆ ನಾವು ಹೇಗೆ ಸಿದ್ಧರಾಗುತ್ತಿದ್ದೇವೆ?” ಎಂದು ಬರೆದಿದ್ದಾರೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ನೆಟಿಜನ್‌ಗಳು ತಮಾಷೆಯಾಗಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
Thats our way of getting ready for Champions Trophy. @harbhajan_singh kee kehnday oh? pic.twitter.com/ZufYlOt7Y4
— Shoaib Akhtar (@shoaib100mph) February 9, 2025
ಇನ್ನು ಚಾಂಪಿಯನ್ಸ್ ಟ್ರೋಫಿಯ ವಿಚಾರಕ್ಕೆ ಬಂದರೆ, ಫೆಬ್ರವರಿ 19 ರಿಂದ ಈ ಮೆಗಾ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ 8 ದೇಶಗಳು ಭಾಗವಹಿಸಲಿವೆ. ಈಗಾಗಲೇ ಎಲ್ಲ ದೇಶಗಳು ತಮ್ಮ ತಂಡಗಳನ್ನು ಘೋಷಿಸಿವೆ. ಆಯಾ ತಂಡಗಳಲ್ಲಿ ಬದಲಾವಣೆ ಮತ್ತು ಸೇರ್ಪಡೆ ಮಾಡಲು ಇಂದು (ಫೆಬ್ರವರಿ 11) ಕೊನೆಯ ಅವಕಾಶ. ಎಲ್ಲರ ಕಣ್ಣುಗಳು ಇದೀಗ ಜಸ್ಪ್ರೀತ್ ಬುಮ್ರಾ ಮೇಲಿದೆ. ಬುಮ್ರಾ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಇರುತ್ತಾರೋ? ಇಲ್ಲವೋ? ಎಂಬುದು ಇಂದು ತಿಳಿಯಲಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಬೆನ್ನುನೋವಿಗೆ ಒಳಗಾಗಿದ್ದರು. ಪ್ರಸ್ತುತ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
2023ರಲ್ಲಿ ನಡೆದ ಕೊನೆಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡ ಭಾರತವನ್ನು ಸೋಲಿಸಿ ಜಯಶಾಲಿಯಾಯಿತು. ಹೀಗಾಗಿ ಫೆಬ್ರವರಿ 23 ರಂದು ನಡೆಯಲಿರುವ ಪಂದ್ಯವನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸೇಡು ತೀರಿಸಿಕೊಳ್ಳಬೇಕೆಂದು ಅಭಿಮಾನಿಗಳು ಬಯಸುತ್ತಿದ್ದಾರೆ. (ಏಜೆನ್ಸೀಸ್)
ಇನ್ನೇನು ಬೇಸಿಗೆ ಶುರು… ನೀರಿನ ಜತೆ ಇದನ್ನು ಬೆರೆಸಿ ಸಿಂಪಡಿಸಿ ಹಾವುಗಳು ಮನೆ ಬಳಿ ಸುಳಿಯುವುದಿಲ್ಲ! Snake
ಟ್ರ್ಯಾಕ್ಟರ್ ಡ್ರೈವರ್ ಮೇಲೆ ದಾಳಿ ಮಾಡಿದ ದೆವ್ವ: ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್! Ghost attacks