ಕೆಎಸ್​ಆರ್​ಟಿಸಿ ಅಧಿಕಾರಿಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪ

KSRTC
Published on

ಆನೇಕಲ್: ಕೆಎಸ್​ಆರ್​ಟಿಸಿ ಡಿಪೋ ಒಂದರ ಅಧಿಕಾರಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದ್ದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವಂತಾಗಿದೆ. ಬೆಂಗಳೂರು ಹೊರವಲಯದ ಆನೇಕಲ್​ನ ಕೆಎಸ್​​ಆರ್​ಟಿಸಿ ಡಿಪೋದಲ್ಲಿ ಇಂಥದ್ದೊಂದು ಘಟನೆ ನಡೆದಿದೆ ಎನ್ನಲಾಗಿದೆ.

ಆನೇಕಲ್ ಡಿಪೋದ ಡಿವಿಷನಲ್ ಮೆಕಾನಿಕಲ್ ಇಂಜಿನಿಯರ್​ ಚಿನ್ನ ಚುಂಚಯ್ಯ ಮತ್ತು ಸಹಾಯಕ ಆಡಳಿತ ಅಧಿಕಾರಿ ಗುರುಶಾಂತ ಎಂಬವರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಪತಿಯ ಮರಣದ ಬಳಿಕ ಈ ಮಹಿಳೆ ಅನುಕಂಪದ ಮೇಲೆ ಕೆಲಸ ಪಡೆದು ಈ ಡಿಪೋದಲ್ಲಿ ನೌಕರಿ ಮಾಡುತ್ತಿದ್ದರು.

ಬೈರೇಶ್ ಎಂಬುವವರು ಮರಣ ಹೊಂದಿದ ಬಳಿಕ ಈಕೆಗೆ ಅನುಕಂಪದ ಆಧಾರದ ಮೇಲೆ ನೌಕರಿ ಸಿಕ್ಕಿತ್ತು. ಕಳೆದ ಎರಡು ತಿಂಗಳಿನಿಂದ ಇವರು ಇಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಈಕೆ ಆರೋಪಿಸಿದ್ದು, ಇವರ ಸಂಬಂಧಿಕರು ಆರೋಪಿಗಳನ್ನು ಅಮಾನತುಗೊಳಿಸಬೇಕು ಎಂದು ಡಿಪೋದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net