ಬಾಲಕನಿಗೆ ಲೈಂಗಿಕ ಕಿರುಕುಳ

harassment
Published on

ಕಾಸರಗೋಡು: ಹದಿನಾರರ ಹರೆಯದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮದ್ರಸಾ ಶಿಕ್ಷಕ ಸಿನಾನ್ ಎಂಬಾತನ ವಿರುದ್ಧ ಕುಂಬಳೆ ಠಾಣಾ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಶಾಲೆಯಲ್ಲಿ ನಡೆದ ಕೌನ್ಸೆಲಿಂಗ್ ಸಂದರ್ಭ ಬಾಲಕ ಶಿಕ್ಷಕರಲ್ಲಿ ವಿಷಯ ಬಹಿರಂಗಪಡಿಸಿದ್ದನು. 2022ರಿಂದ 23ರ ಅವಧಿಯಲ್ಲಿ ವಿವಿಧ ದಿವಸಗಳಲ್ಲಾಗಿ ತನ್ನನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾನೆ. ಅಲ್ಲದೆ ಬಾಲಕನಿಗೆ ಕಾಸರಗೋಡು, ವಿದ್ಯಾನಗರ ವ್ಯಾಪ್ತಿಯ ವಿವಿಧೆಡೆ ಇನ್ನೂ ಹಲವರು ಕಿರುಕುಳ ನೀಡಿರುವ ಬಗ್ಗೆಯೂ ದೂರು ದಾಖಲಾಗಿದೆ. ಈ ಬಗ್ಗೆ ಒಟ್ಟು ಮೂರು ೆಕ್ಸೋ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net