

ಕಾಸರಗೋಡು: ವೆಳ್ಳರಿಕುಂಡು ಪೊಲೀಸ್ ಠಾಣೆ ವ್ಯಾಪ್ತಿಯ ಲಿಟ್ಲ್ ಫ್ಲವರ್ ಮಸೀದಿ ಸನಿಹದ ಬಸ್ ನಿಲ್ದಾಣ ವಠಾರದಲ್ಲಿ ಬಸ್ಗೆ ಕಾಯುತ್ತಿದ್ದ 14ರ ಹರೆಯದ ಬಾಲಕಿಯನ್ನು ಬಿಗಿದಪ್ಪಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆಟೋ ಚಾಲಕನ ವಿರುದ್ಧ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. ಮಾ.6ರಂದು ಘಟನೆ ನಡೆದಿದ್ದು, ಬಸ್ಗೆ ನಿಂತಿದ್ದ ಬಾಲಕಿಗೆ ಕಿರುಕುಳ ನೀಡಿದ್ದಲ್ಲದೆ, ಬಹಿರಂಗಪಡಿಸಿದಲ್ಲಿ ಕೊಲೆಗೈಯುವುದಾಗಿ ಬೆದರಿಕೆಯೊಡ್ಡಿದ್ದನು. ಈ ಬಗ್ಗೆ ಬಾಲಕಿ ನೀಡಿದ ದೂರಿನನ್ವಯ ವೆಳ್ಳರಿಕುಂಡು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.