More

    ವಸ್ತುಗಳ ಸಂಗ್ರಹ ಕೇಂದ್ರಕ್ಕೆ ಮರುಬಳಕೆ ವಸ್ತುಗಳು ನೀಡಿ

    ಹರಪನಹಳ್ಳಿ: ಹಳೆಯ ಪುಸ್ತಕಗಳು, ಬಟ್ಟೆ, ಪ್ಲಾಸ್ಟಿಕ್ ಚೀಲಗಳು, ಎಲೆಕ್ಟ್ರಾನಿಕ್, ಆಟಿಕೆಗಳು ಸೇರಿದಂತೆ ಮತ್ತೆ ಬಳಸುವಂತಹ ವಸ್ತುಗಳನ್ನು ಜನರು ಮರುಬಳಕೆ ವಸ್ತುಗಳ ಸಂಗ್ರಹ ಕೇಂದ್ರಕ್ಕೆ ನೀಡುವ ಮೂಲಕ ಸ್ವಚ್ಛ ಪಟ್ಟಣ ಮಾಡಲು ಸಹಕರಿಸಬೇಕು ಎಂದು ಎಸಿ ಟಿ.ವಿ.ಪ್ರಕಾಶ ಹೇಳಿದರು.

    ಇದನ್ನೂ ಓದಿ: ಮರುಬಳಕೆ ವಸ್ತುಗಳ ಬೇರ್ಪಡಿಸಲು ಯೋಜನೆ

    ಪಟ್ಟಣದ ಪುರಸಭೆ ಸಮುದಾಯ ಭವನದಲ್ಲಿ ಶನಿವಾರ ಮರುಬಳಕೆ ವಸ್ತುಗಳ ಸಂಗ್ರಹ (ಆರ್‌ಆರ್‌ಆರ್) ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಜನಸಂಖ್ಯೆ ಹೆಚ್ಚಳದ ಜತೆಗೆ ಪಟ್ಟಣ ಕೂಡ ವೇಗವಾಗಿ ಬೆಳೆಯುತ್ತಿದ್ದು, ಸ್ವಚ್ಛತೆ ಕಡಿಮೆಯಾಗುತ್ತಿದೆ.

    ಹೀಗಾಗಿ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಸಾರ್ವಜನಿಕರು ಸಹಕರಿಸಬೇಕು. ಬಳಸಿದ ವಸ್ತುಗಳು ಮತ್ತೆ ಉಪಯೋಗಿಸಲು ಬರುತ್ತಿದ್ದರೆ ಬಿಸಾಡುವ ಬದಲು ಆರ್‌ಆರ್‌ಆರ್ ಕೇಂದ್ರಕ್ಕೆ ನೀಡಬಹುದು. ಇದರಿಂದ ಇಡೀ ಪಟ್ಟಣವನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು ಎಂದರು.

    ಮುಖ್ಯಾಧಿಕಾರಿ ಯರಗುಡಿ ಶಿವಕುಮಾರ ಮಾತನಾಡಿ, ಸ್ವಚ್ಛ ಭಾರತ್ ಮಿಷನ್ 2.0 ಯೋಜನೆ ಹಾಗೂ ನನ್ನ ಸ್ವಚ್ಛ ಪಟ್ಟಣ ಯೋಜನೆಯಡಿ ಸಂಗ್ರಹಿಸಿದ ಮರು ಬಳಕೆ ವಸ್ತುಗಳನ್ನು ಅನಾಥ ಇಲ್ಲವೆ ವೃದ್ಧಾಶ್ರಮಗಳಿಗೆ ಕಳಿಸಲಾಗುತ್ತದೆ. ಮರು ಬಳಕೆ ವಸ್ತುಗಳ ಕೊಡುವವರಿಗೆ ಸಾವಯವ ಗೊಬ್ಬರ, ಲೇಖನ ಸಾಮಗ್ರಿ, ಡಿಜಿಟಲ್ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಗವುದು ಎಂದರು.

    ಸ್ವಚ್ಚ ಭಾರತ್ ಮಿಷನ್ 2.0 ಯೋಜನೆಯ ಸ್ಥಳೀಯ ರಾಯಭಾರಿ ರವೀಂದ್ರ ಅಧಿಕಾರ್ ಮಾತನಾಡಿದರು. ಪುರಸಭೆಯ ಪರಿಸರ ಇಂಜಿನಿಯರ್ ಅಮರೇಶ್, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ, ಚಿದಾನಂದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts