More

    ಮರುಬಳಕೆ ವಸ್ತುಗಳ ಬೇರ್ಪಡಿಸಲು ಯೋಜನೆ

    ಗಜೇಂದ್ರಗಡ: ಪ್ಲಾಸ್ಟಿಕ್ ಕಸದಿಂದ ಪರಿಸರ ಮಾಲಿನ್ಯಗೊಳ್ಳುತ್ತಿದೆ. ಪ್ರತಿ ಮನೆಯಿಂದ ಕಸ ಸಂಗ್ರಹಿಸಿ, ಘನ ತ್ಯಾಜ್ಯ ವಿಂಗಡನೆ ಕೇಂದ್ರಕ್ಕೆ ಒಯ್ದು ಮರುಬಳಕೆ ವಸ್ತುಗಳನ್ನು ಬೇರ್ಪಡಿಸಲು ಯೋಜಿಸಲಾಗಿದೆ ಎಂದು ರಾಂಪುರ ಗ್ರಾಪಂ ಅಧ್ಯಕ್ಷ ಶಿವರಾಜಗೌಡ ಗೌಡ್ರ ಹೇಳಿದರು.

    ಪಟ್ಟಣ ಸಮೀಪದ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಗಾನೂರ ಹಾಗೂ ಪುರ್ತಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ 2021-22ನೇ ಸಾಲಿನ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಗ್ರಾಮದ ಎಲ್ಲ ಕುಟುಂಬಗಳಿಗೂ ಕಸದ ಬುಟ್ಟಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಪ್ರತಿ ಮನೆಗೆ ಎರಡು ಕಸದ ಡಬ್ಬಿಗಳನ್ನು ನೀಡಲಾಗುವುದು. ಒಂದರಲ್ಲಿ ಹಸಿ ಕಸ, ಮತ್ತೊಂದರಲ್ಲಿ ಒಣ ಕಸ ಸಂಗ್ರಹ ಮಾಡಬೇಕು. ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಹಂತದಲ್ಲಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿಯೂ ಎರಡು ದಿನಗಳಿಗೊಮ್ಮೆ ಕಸ ಸಂಗ್ರಹಿಸುವ ಯೋಜನೆ ರೂಪಿಸಲಾಗುತ್ತಿದೆ. ಕೊಡಗಾನೂರ ಗ್ರಾಮದಲ್ಲಿ 391 ಕುಟುಂಬಗಳಿಗೆ ಮತ್ತು ಪುರ್ತಗೇರಿ ಗ್ರಾಮದ 430 ಕುಟುಂಬಗಳಿಗೆ ಕಸದ ಡಬ್ಬಿಗಳನ್ನು ಹಂಚಲಾಗುವುದು ಎಂದು ತಿಳಿಸಿದರು.

    ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಲ್ಲವ್ವ ಮುಶಿಗೇರಿ, ಬಾಲಚಂದ್ರ ವಾಲ್ಮೀಕಿ, ಬಾಲಾಜಿ ಭೋಸ್ಲೆ, ಹನುಮಪ್ಪ ವಾಲ್ಮೀಕಿ, ರಮೇಶ ರಾಮಜಿ, ಅಲ್ಲಾಭಕ್ಷಿ ನದಾಫ್, ಪ್ರಭುಲಿಂಗಯ್ಯ ಹಿರೇಮಠ, ಸೈದುಸಾಬ್ ನದಾಫ್, ಈರಪ್ಪ ನಡಕಟ್ಟಿನ, ಶಂಕ್ರವ್ವ ಯಡ್ರಾವಿ, ಶಾಂತವ್ವ ತಳವಾರ, ಶಾವಕ್ಕ ಹೂಗಾರ, ಲಕ್ಷ್ಮೀ ನಡಕಟ್ಟಿನ, ರುದ್ರವ್ವ ಕುಕನೂರಮಠ, ಶಿವಲೀಲಾ ಪೂಜಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts