More

    ಕಾಯಿಲೆಗಳಿಂದ ದೂರವಿರಲು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿ

    ಗಜೇಂದ್ರಗಡ: ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 397ನೇ ಜಯಂತ್ಯುತ್ಸವ ಅಂಗವಾಗಿ ಶ್ರೀ ಮಾರುತೇಶ್ವರ ಜಿಣೋದ್ಧಾರ ಸಮಿತಿ ಹಾಗೂ ಶ್ರೀ ಮಾರುತೇಶ್ವರ ತರುಣ ಸಂಘ ಶಿವಾಜಿಪೇಟೆ, ಗದಗನ ಅಂಬಿಕಾ ಬ್ಲಡ್ ಬ್ಯಾಂಕ್ ಹಾಗೂ ಯಲಬುರ್ಗಾದ ಪದ್ಮಾ ಐ ಕೇರ್ ಆಶ್ರಯದಲ್ಲಿ ಬುಧವಾರ ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣೆ ಶಿಬಿರ ನಡೆಯಿತು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುರಸಭೆ ಸದಸ್ಯ ಶಿವರಾಜ ಘೊರ್ಪಡೆ, ನಮ್ಮ ಅಂಗಾಂಗದಿಂದ ಉತ್ಪಾದನೆಯಾಗುವ ರಕ್ತವು ಮತ್ತೊಬ್ಬರ ಬಾಳಿಗೆ ಬೆಳಕಾಗುತ್ತದೆ. ನಾವು ಒಂದು ಬಾರಿ ಮಾಡುವ ರಕ್ತದಾನವು ಮೂರು ಜನರಿಗೆ ನೆರವಾಗುತ್ತದೆ. ಬಿಪಿ, ಶುಗರ್, ಕೊಲೆಸ್ಟ್ರಾಲ್, ಹಾರ್ಟ್ ಅಟ್ಯಾಕ್, ಜಾಯಿಂಟ್ ಪೇನ್​ನಂತಹ ಕಾಯಿಲೆಗಳಿಂದ ದೂರವಿರಲು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು ಎಂದರು.

    ಬ್ಲಡ್ ಬ್ಯಾಂಕ್ ಟೆಕ್ನಿಷಿಯನ್ ದತ್ತು ವೈಕುಂಠೆ ಮಾತನಾಡಿ, ರಕ್ತದಾನ ಮಾಡುವುದರಿಂದ ಮತ್ತೊಂದು ಜೀವ ಉಳಿಸಲು ನೆರವಾಗುವುದರ ಜತೆಗೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಅದು ಸಹಕಾರಿಯಾಗುತ್ತದೆ ಎಂದರು.

    ಮರಾಠಾ ಸಮಾಜದ ಅಧ್ಯಕ್ಷ ಶೇಖಪ್ಪ ರಾಮಜಿ ಮಾತನಾಡಿ, ನಾವು ರಕ್ತದಾನ ಮಾಡಬೇಕು ಎಂದು ಬಯಸಿದರೂ ನಮ್ಮಲ್ಲಿನ ಕಾಯಿಲೆಗಳು ಅದಕ್ಕೆ ಅಡ್ಡವಾಗಬಹುದು. ಹಾಗಾಗಿ ಮೊದಲು ನಾವು ಶುದ್ಧವಾಗಿರಬೇಕು ಎಂದು ಸಲಹೆ ನೀಡಿದರು.

    ಇದೇ ವೇಳೆ 49 ಜನರು ರಕ್ತದಾನ ಮಾಡಿದರು. ಶಿವಾಜಿ ಹಾಳಕೇರಿ, ಪರಸಪ್ಪ ಪೂಜಾರ, ಡಾ. ಪಿ.ಬಿ. ರಾಮಜಿ, ಕಳಕಪ್ಪ ಸ್ವಾಮಿ, ಮಾರುತಿ ಚಿಟಗಿ, ಸುಭಾಸ ನಿಂಭೋಜಿ, ಲಕ್ಷ್ಮಣ ರಾಮಜಿ, ಯಲ್ಪಪ್ಪ ಕಲ್ಗುಡಿ, ರೇಣುಕರಾಜ ರಾಮಜಿ, ಮಾರುತಿ ಅವಧೂತ, ಕಲ್ಲಪ್ಪ ರಾಮಜಿ, ಧರ್ಮಣ್ಣ ಹಾಳಕೇರಿ, ರಮೇಶ ರಾಮಜಿ, ಕಲ್ಲಪ್ಪ ಪಿ. ರಾಮಜಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts