More

    ಮತ ಜಾಗೃತಿಗೆ ರಂಗೋಲಿ ಚಿತ್ತಾರ, ಮನೆ, ಗ್ರಾಪಂ ಕಚೇರಿ, ಅಂಗನವಾಡಿ ಮುಂದೆ ಆಕರ್ಷಣೆ

    ಗಜೇಂದ್ರಗಡ: ಮತದಾನ ಜಾಗೃತಿಗಾಗಿ ಚುನಾವಣಾ ಆಯೋಗ ಹಲವು ವಿನೂತನ ಕ್ರಮ ಕೈಗೊಂಡಿದೆ. ಅದರಂತೆ ಗಜೇಂದ್ರಗಡ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಮನೆ ಮುಂದೆ ಬೆಳ್ಳಂಬೆಳಗ್ಗೆ ಬಿಡಿಸಿದ ರಂಗೋಲಿ ಚಿತ್ತಾರಗಳು ಸರ್ವರನ್ನೂ ಆಕರ್ಷಿಸಿ ಮತದಾನ ಜಾಗೃತಿಯನ್ನು ಸಾರಿ ಹೇಳುವಂತಿದ್ದವು.
    ತಾಲೂಕಿನ 13 ಗ್ರಾಮ ಪಂಚಾಯಿತಿ ವ್ಯಾಪ್ತಿಯ 42 ಗ್ರಾಮಗಳಲ್ಲಿ ಏಕಕಾಲಕ್ಕೆ ಮಹಿಳೆಯರು ತಮ್ಮ ಮನೆಯಂಗಳದಲ್ಲಿ ರಂಗೋಲಿ ಬಿಡಿಸುವ ಮೂಲಕ ಲೋಕಸಭಾ ಚುನಾವಣೆ ಮತದಾನ ಜಾಗೃತಿ ಮೂಡಿಸಿರುವುದು ಎಲ್ಲರ ಗಮನ ಸೆಳೆಯಿತು.
    ರಂಗೋಲಿ ವಿತ್ ಸೆಲ್ಪಿ: ತಾಲೂಕು ಇಒ ಆದೇಶದಂತೆ ಮಹಿಳೆಯರು ತಮ್ಮ ಮನೆಯಂಗಳದಲ್ಲಿ ಮತದಾನ ಜಾಗೃತಿ ಕುರಿತು ರಂಗೋಲಿ ಚಿತ್ತಾರ ಬಿಡಿಸಿ ಅದರೊಂದಿಗೆ ಸೆಲ್ಪಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.
    ಆಕರ್ಷಕ ಬರಹಗಳು:
    ಲೋಕಸಭಾ ಚುನಾವಣೆಯ ಮತದಾನ ಜಾಗೃತಿ ಕುರಿತು ರಂಗೋಲಿಯಲ್ಲಿ ನನ್ನ ಮತ ನನ್ನ ಹಕ್ಕು, ಚುನಾವಣಾ ಪರ್ವ- ದೇಶದ ಗರ್ವ, ನಾನು ಕಡ್ಡಾಯವಾಗಿ ಮತದಾನ ಮಾಡುತ್ತೇನೆ, ಮೈ ವೋಟ್ ಕೌಂಟ್ಸ್ ಸೇರಿ ಹತ್ತಾರು ವಿವಿಧ ಆಕರ್ಷಕ ಬರಹಗಳು ಎಲ್ಲರ ಗಮನ ಸೆಳೆದವು.
    ಇಲ್ಲಿವೆ ರಂಗೋಲಿ ಚಿತ್ತಾರ: ಮನೆಯಂಗಳದಲ್ಲಿ ಅಷ್ಟೇ ಅಲ್ಲದೆ, ತಾಪಂ ಇಒ ಕಚೇರಿ, ಎಲ್ಲ ಗ್ರಾಮ ಪಂಚಾಯಿತಿಗಳು, ಅಂಗನವಾಡಿಗಳು, ಗ್ರಂಥಾಲಯಗಳು, ಆರೋಗ್ಯ ಕೇಂದ್ರ ಸೇರಿ ವಿವಿಧ ಸರ್ಕಾರಿ ಕಚೇರಿಗಳ ಮುಂದೆ ರಂಗೋಲಿ ಬಿಡಿಸಿ ಮತದಾನ ಜಾಗೃತಿ ಅಭಿಯಾನ ಯಶಸ್ವಿಗೊಳಿಸಿದ್ದಾರೆ.


    ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಪ್ರತಿ ಮತದಾರರನ್ನು ಪ್ರೇರೇಪಿಸಲು ತಾಲೂಕಿನ ಎಲ್ಲ ಗ್ರಾಮಗಳ ಮನೆಯ ಮುಂದೆ ಮಹಿಳೆಯರು ಮತದಾನ ಕುರಿತು ರಂಗೋಲಿ ಬಿಡಿಸಿ ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸಾಪ್ ಗ್ರೂಪ್​ಗಳಲ್ಲಿ ಹಂಚಿಕೊಳ್ಳಲು ತಿಳಿಸಲಾಗಿತ್ತು. ಈ ನಿಟ್ಟಿನಲ್ಲಿ ಗ್ರಾಮೀಣ ಮಹಿಳೆಯರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದೆ.
    | ಬಸವರಾಜ ಬಡಿಗೇರ, ಪ್ರಭಾರಿ ತಾಪಂ ಇಒ ಗಜೇಂದ್ರಗಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts