

ಕೃತಿ ಕರ್ಬಂಧ, ಪ್ರತಿಭಾವಂತ ನಟಿ. ಸ್ಯಾಂಡಲ್ವುಡ್, ಬಾಲಿವುಡ್ ಹೀಗೆ ಬಹುಬಾಷೆಯಲ್ಲಿ ಮಿಂಚಿದ ನಟಿ ಇವರು. ಇಂದು ಅಕ್ಟೋಬರ್ 29 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಕೃತಿ ಕರ್ಬಂಧ ತಮ್ಮ ಸ್ಕ್ರೀನ್ ಪ್ರೆಸೆನ್ಸ್ಗೆ ತುಂಬಾನೇ ಫೇಮಸ್. 2009 ರಲ್ಲಿ ತೆಲುಗು ಚಿತ್ರ ಬೋನಿ ಮೂಲಕ ನಟಿ ತನ್ನ ಸಿನಿ ಜರ್ನಿಯನ್ನ ಪ್ರಾರಂಭಿಸಿದ್ರು. ತಮಿಳು ಮತ್ತು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 2014 ರಲ್ಲಿ, ಅವರು ಉಪೇಂದ್ರ ಅವರೊಂದಿಗೆ ಸೂಪರ್ ರಂಗದಲ್ಲಿ ನಟಿಸಿದರು ಮತ್ತು ಅತ್ಯುತ್ತಮ ನಟಿ (ವಿಮರ್ಶಕರು) SIIMA ಪ್ರಶಸ್ತಿಯನ್ನು ಪಡೆದರು.
ಕೃತಿ 2016 ರಲ್ಲಿ Raaz: Reboot ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. 2017 ರಲ್ಲಿ ಅವರು ನಟ ರಾಕುಮ್ಮರ್ ರಾವ್ ಎದುರು ಶಾದಿ ಮೇ ಜರೂರ್ ಆನಾದಲ್ಲಿ ಕಾಣಿಸಿಕೊಂಡಾಗ ಅವರು ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆಯನ್ನು ಪಡೆದವರು.
ಶೀಘ್ರದಲ್ಲೇ ಅಕ್ಷಯ್ ಕುಮಾರ್ ಅಭಿನಯದ ಹೌಸ್‌ಫುಲ್ 5 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕೃತಿ ಕರಬಂಧ. ಇನ್ನು ಈಕೆ ಪ್ರೇಕ್ಷಕರಿಗೆ ಹತ್ತಿರವಾದ ಟಾಪ್ 10 ಚಲನಚಿತ್ರಗಳು ಯಾವುದು ಅನ್ನೋದನ್ನ ನೋಡೋಣ