ನಾವೆಲ್ಲರೂ ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಕಾಲವನ್ನು ಸಂಭ್ರಮಿಸಿದ್ದೇವೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಮಹತ್ವಾಕಾಂಕ್ಷೆಯನ್ನು ಪ್ರಧಾನಿ ಮೋದಿ ಹೊಂದಿದ್ದಾರೆ.
| ಜಗತ್ ಪ್ರಕಾಶ್ ನಡ್ಡಾ
ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ. ನಮಗೆಲ್ಲರಿಗೂ ವಿಶೇಷ ದಿನ. ಅವರ ಜೀವನದ ಪ್ರತಿಕ್ಷಣ ಉದಾತ್ತ ಕಾರಣಗಳಿಗಾಗಿ ಮೀಸಲಾಗಿದೆ. ನಮ್ಮ ದೇಶದ ಪ್ರಗತಿ, ನಂಬಿಕೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ, ಪುನರುತ್ಥಾನದ ಸಂಕೇತ ಅವರಾಗಿದ್ದಾರೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ ಕಾ ಪ್ರಯಾಸ್ ಎಂಬ ಮೂಲತತ್ವ ಆಧರಿಸಿದ ಅವರ ನಾಯಕತ್ವ, ಜಾಗತಿಕ ವೇದಿಕೆಯಲ್ಲಿ ಭಾರತದ ಘನತೆ ಹೆಚ್ಚಿಸಿರುವುದಲ್ಲದೆ, ಅವರನ್ನೂ ಜಾಗತಿಕ ಐಕಾನ್ ಆಗುವಂತೆ ಮಾಡಿದೆ.
ಭಾರತವನ್ನು ವಿವಿಧ ಕ್ಷೇತ್ರಗಳಲ್ಲಿ ಮರುರೂಪಿಸುತ್ತಿರುವ ಅವರು, ವಿಶ್ವಕರ್ಮ ಜಯಂತಿಯ ಈ ದಿನದಂದು ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡುತ್ತಿದ್ದಾರೆ. ಅಕ್ಕಸಾಲಿಗರು, ಕುಂಬಾರರು, ನೇಕಾರರು, ಶಿಲ್ಪಿಗಳು ಸೇರಿದಂತೆ 18 ವಿವಿಧ ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿರುವ ಸಣ್ಣ ಕಾರ್ವಿುಕರು, ಕುಶಲಕರ್ವಿುಗಳಿಗೆ ವಿಶೇಷ ಭರವಸೆ ತುಂಬುವ ಯೋಜನೆ ಇದಾಗಿದೆ.
ಮೋದಿಯವರ ನಾಯಕತ್ವದಲ್ಲಿ ನಾವು ಈಗ ಸಂಸತ್ತಿನ ಹೊಸ ಕಟ್ಟಡ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಹೊಂದಿದ್ದೇವೆ. ಇದು ನಮ್ಮ ದೇಶದ ಸಾರ್ವಭೌಮತ್ವದ ಸಂಕೇತ. ಕರ್ತವ್ಯಪಥದಲ್ಲಿ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಪ್ರತಿಮೆ ಅನಾವರಣಗೊಂಡಿರುವುದು ಐತಿಹಾಸಿಕ ಕ್ರಮ. ಜಿ-20 ಗುಂಪಿನ ಅಧ್ಯಕ್ಷ ರಾಷ್ಟ್ರವಾದ ಭಾರತ, ಇದನ್ನು ‘ಜನ ಭಾಗೀದಾರಿ’ಯನ್ನಾಗಿ ಮಾಡುವ ಮೂಲಕ ವಿಶ್ವಕ್ಕೊಂದು ಮೇಲ್ಪಂಕ್ತಿಯನ್ನೇ ಹಾಕಿದೆ. ಭಾರತ ತನ್ನ ಸಂಸ್ಕೃತಿ, ಪರಂಪರೆಯನ್ನು ವಿದೇಶಾಂಗ ನೀತಿಯಲ್ಲಿ ಅಳವಡಿಸಿಕೊಂಡು ಅಭೂತಪೂರ್ವ ರೀತಿಯಲ್ಲಿ ತನ್ನನ್ನು ಜಗತ್ತಿಗೆ ಪರಿಚಯಿಸುತ್ತಿದೆ. ಇದಕ್ಕೆಲ್ಲಾ ಮೋದಿ ಅವರ ದೂರದೃಷ್ಟಿ ನಾಯಕತ್ವವೇ ಕಾರಣ. ಮೋದಿಯವರು ಜೈ ಜವಾನ್, ಜೈ ಕಿಸಾನ್ ಮತ್ತು ಜೈ ವಿಜ್ಞಾನವನ್ನು ಜೈ ಅನುಸಂಧಾನದೊಂದಿಗೆ ಸಂಯೋಜಿಸಿದ್ದಾರೆ. ಚಂದ್ರಯಾನ ಮತ್ತು ಆದಿತ್ಯಯಾನದ ಮೂಲಕ ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತದ ಪರಾಕ್ರಮ ಇಡೀ ಜಗತ್ತಿನ ಮುಂದೆ ಅನಾವರಣಗೊಂಡಿದೆ. ಅಮೃತಕಾಲದಲ್ಲಿ ಪ್ರಧಾನಿಯವರು ಸ್ವಾತಂತ್ರ್ಯ ಹೋರಾಟದ ಅಪ್ರತಿಮ ವೀರರನ್ನು ಗೌರವಿಸುವ ಮೂಲಕ ಶ್ಲಾಘನೀಯ ಹೆಜ್ಜೆಯಿಟ್ಟಿದ್ದಾರೆ. ಹರ್ಘರ್ ತಿರಂಗಾ, ಮೇರಿ ಮಾಟಿ, ಮೇರಾ ದೇಶ್ ರೀತಿಯ ಕಾರ್ಯಕ್ರಮಗಳು ನಾಗರಿಕರಲ್ಲಿ ಏಕತೆಯ ಭಾವನೆಯನ್ನು ಹೆಚ್ಚಿಸಿದೆ. ಮೋದಿಯವರ ಪ್ರತಿಯೊಂದು ಉಪಕ್ರಮವೂ ಪ್ರತಿ ನಾಗರಿಕನ ಜೀವನವನ್ನು ರ್ಸ³ಸಿದೆ.
ಸದ್ಯ ಜಗತ್ತು ನಮ್ಮ ಸಂಸ್ಕೃತಿ, ಜೀವನಶೈಲಿ, ಪರಂಪರೆಗಳತ್ತ ಆಕರ್ಷಿತಗೊಳ್ಳುತ್ತಿರುವಾಗ ವಿಪಕ್ಷಗಳ ಅಹಂಕಾರಿ ಮೈತ್ರಿಕೂಟ ನಮ್ಮದೇ ದೇಶದ ಪರಂಪರೆ, ಸಂಸ್ಕೃತಿಯನ್ನು ಅವಮಾನಿಸುತ್ತಿದೆ. ಭಾರತದ ಜನ ತಮ್ಮ ಸಂಸ್ಕೃತಿಯೊಂದಿಗೆ ಆಳವಾಗಿ ಬೆರೆತಿದ್ದು, ಇಂತಹ ಅಗೌರವವನ್ನು ಒಪ್ಪಿಕೊಳ್ಳುವುದಿಲ್ಲ.
2009-2014ರ ಮಧ್ಯೆ ನಮ್ಮ ದೇಶ ಹಲವು ಸವಾಲುಗಳನ್ನು ಎದುರಿಸಿತು. ಆದರೆ, ಮೋದಿ ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ದೇಶದ ಅಭಿವೃದ್ಧಿ ಪಥ ಬದಲಾಗತೊಡಗಿತು. ನನ್ನ ದೇಶ ಬದಲಾಗುತ್ತಿದೆ, ಮೋದಿಯಿಂದ ಎಲ್ಲವೂ ಸಾಧ್ಯ ಎಂದು ಜನ ನಂಬಲು ಪ್ರಾರಂಭಿಸಿದರು. ಬಿಜೆಪಿ ಪಕ್ಷ ಕೂಡ ಸವೋಚ್ಛ ನಾಯಕ ಪ್ರಧಾನಿ ಮೋದಿ ಅವರ ತತ್ವಗಳ ಮೇಲೆ ದೃಢವಾಗಿ ನಿಂತಿದೆ. ಅವರು ಜನರ ಆಶೋತ್ತರಗಳನ್ನು ಸಾಕಾರಗೊಳಿಸುವಲ್ಲಿ ಶ್ರಮಿಸುತ್ತಿದ್ದಾರೆ. ಮೋದಿಯವರು ಜನರ ಹೃದಯದಲ್ಲಿ ದೇಶಭಕ್ತಿ, ಸೇವಾ ಮನೋಭಾವ ಬೆಳಗಿಸುತ್ತಿದ್ದಾರೆ. ಈ ಅಸಾಧಾರಣ ನಾಯಕನಿಗೆ ಜನ್ಮದಿನದ ಶುಭಾಶಯಗಳು!
(ಲೇಖಕರು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು)

ಪ್ರೀತಿ ಇದ್ದರೂ ಪತ್ನಿ ಯಾಕೆ ಪತಿಯಿಂದ ವಿಮುಖಳಾಗುತ್ತಾಳೆ?; ಇದು ವಿವಾಹಿತರಿಗೊಂದು ಕಿವಿಮಾತು, ಎಚ್ಚರಿಕೆ ಕೂಡ!