

ಕೊಪ್ಪಳ: ಇಲ್ಲೊಬ್ಬ ಹನುಮ ಭಕ್ತ, ಬರೋಬ್ಬರಿ 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟವೇರಿದ್ದಾರೆ.
ಕೊಪ್ಪಳ ತಾಲೂಕಿನ ಹನುಮನ ಹಳ್ಳಿ ಬಳಿಯ ಪುರಾಣ ಪ್ರಸಿದ್ಧ ಅಂಜನಾದ್ರಿ ಬೆಟ್ಟವನ್ನು ಹನಮ ಜನ್ಮಭೂಮಿ ಎಂದೇ ಹೇಳಲಾಗುತ್ತದೆ. ಅಂತಹ ಅಂಜನಾದ್ರಿ ಬೆಟ್ಟವನ್ನು ಹೀಗೆ 101 ಕೆಜಿ ಭಾರದ ಚೀಲ ಹೊತ್ತು ಏರಿದ ಭಕ್ತನ ಹೆಸರು ರಾಯಪ್ಪ ದಪೇದಾರ್ (46) ಎಂದು. ಇವರು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದವರು.
ನಾವು ಒಂದು ಗಂಟೆಯಲ್ಲಿ ಉಸ್ಸಪ್ಪಾ ಎಂದರೆ ಇವರು ಮಾತ್ರ 1 ಗಂಟೆ 10 ನಿಮಿಷದಲ್ಲಿ 575 ಮೆಟ್ಟಿಲುಗಳನ್ನ ಹತ್ತಿ ಸಾಹಸ ಮೆರೆದಿದ್ದಾರೆ. ಹನುಮಭಕ್ತರು ರಾಯಪ್ಪನ ಸಾಹಸಕ್ಕೆ ಅಚ್ಚರಿಗೊಂಡಿದ್ದಾರೆ.