More

    ಓ ಮೈ ಗಾಡ್​ ಯಾರವ್ರು … ಅಂದರಂತೆ ಹನ್ಸಿಕಾ!

    ಒಂದು ಕಾಲದಲ್ಲಿ ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ಹನ್ಸಿಕಾ ಮೋಟ್ವಾನಿ, ಕನ್ನಡದಲ್ಲೂ ಪುನೀತ್​ ರಾಜಕುಮಾರ್​ ಜತೆಗೆ ಬಿಂದಾಸ್​ ಎಂಬ ಚಿತ್ರದಲ್ಲಿ ನಟಿಸಿದ್ದ ಹನ್ಸಿಕಾ, ಈಗ ಅಷ್ಟೇನೂ ಬ್ಯುಸಿಯಾಗಿಲ್ಲದಿರಬಹುದು. ಆದರೆ, ಆಕೆ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದೇ ಇದ್ದಾರೆ. ಒಂದಿಷ್ಟು ದಿನಗಳ ಕಾಲ ನಟ ಸಿಂಬು ಅವರ ಜತೆಗಿನ ಗೆಳತನದಿಂದ, ಇನ್ನೊಂದಿಷ್ಟು ಕಾಲ ತಮ್ಮ ಗ್ಲಾಮರಸ್​ ಪಾತ್ರಗಳಿಂದ ಸುದ್ದಿಯಾಗಿದ್ದರು.

    ಇದನ್ನೂ ಓದಿ: ಈ ಫೋಟೋ ಮೂಲಕ ಅಭಿಷೇಕ್ ಏನು ಹೇಳೋಕೆ ಹೊರಟಿದ್ದಾರೆ?

    ಇತ್ತೀಚಿನ ವರ್ಷಗಳಲ್ಲಿ ಹನ್ಸಿಕಾಗೆ ಸಹಜವಾಗಿಯೇ ಅವಕಾಶಗಳು ಕಡಿಮೆಯಾಗಿವೆ. ಆದರೂ ಹನ್ಸಿಕಾ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಯಿತಾ? ಮದುವೆಯ ಮೂಲಕ ಹನ್ಸಿಕಾ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ.

    ಹನ್ಸಿಕಾ ಲವ್​ ಮಾಡುತ್ತಿದ್ದಾರಂತೆ, ಅವರು ಮದುವೆಯಾಗುತ್ತಿದ್ದಾರಂತೆ, ಅದಂತೆ, ಇದಂತೆ … ಎಂಬ ಅಂತೆ-ಕಂತೆಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಇತ್ತೀಚೆಗೆ ಸಹ ಅದು ರಿಪೀಟ್​ ಆಗಿದೆ. ಹನ್ಸಿಕಾ ಮುಂಬೈನ ಒಬ್ಬ ದೊಡ್ಡ ವ್ಯಾಪಾರಸ್ಥರನ್ನು ಮದುವೆಯಾಗುತ್ತಿದ್ದಾರೆ ಎಂಬ ಗುಲ್ಲು ಹಬ್ಬಿತ್ತು. ಅದು ಅಲ್ಲಿಂದ ಇಲ್ಲಿಗೆ ಹೋಗಿ, ಇಲ್ಲಿಂದ ಅಲ್ಲಿಗೆ ಹೋಗಿ ಕೊನೆಗೆ ಹನ್ಸಿಕಾ ಕಿವಿಗೂ ಬಿದ್ದಿದೆ. ಅಷ್ಟರಲ್ಲಿ ಒಂದಿಷ್ಟು ಅಭಿಮಾನಿಗಳು ಸೋಷಿಯಲ್​ ಮೀಡಿಯಾ ಮೂಲಕವೂ, ಅವರನ್ನು ಈ ವಿಷಯ ನಿಜವಾ ಎಂದು ಕೇಳುವುದಕ್ಕೆ ಪ್ರಾರಂಭಿಸಿದ್ದಾರೆ.

    ಇದನ್ನೂ ಓದಿ: ಭಿಕ್ಷುಕ ನಾಳೆ ರಾಜನಾಗಬಹುದು … ಹಾಗಂತ ‘ದುನಿಯಾ’ ವಿಜಯ್ ಹೇಳಿದ್ದೇಕೆ?

    ಯಾವಾಗ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆ ಶುರುವಾಯಿತೋ, ಆಗ ಹನ್ಸಿಕಾ ಎಚ್ಚೆತ್ತುಕೊಂಡಿದ್ದಾರೆ. ನೀವು ಮುಂಬೈನ ದೊಡ್ಡ ಬ್ಯುಸಿನೆಸ್​ಮ್ಯಾನ್​ ಜತೆಗೆ ಮದುವೆಯಾಗುತ್ತಿದ್ದೀರಾ ಎಂಬ ಅಭಿಮಾನಿಗಳ ಪ್ರಶ್ನೆಗೆ, ಓ ಮೈ ಗಾಡ್​ ಯಾರವ್ರು … ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ರಬ್ಬಿಷ್​ ಎಂದು ಪ್ರತಿಕ್ರಿಯಿಸಿದ್ದಾರೆ. ಒಂದೇ ಸಾಲಿನಲ್ಲಿ ಇವೆಲ್ಲಾ ಸುಳ್ಳು ಎಂದು ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.

    ಹನ್ಸಿಕಾ ಸದ್ಯಕ್ಕೇನೋ, ತಮ್ಮ ಮದುವೆ ಸುದ್ದಿಗಳನ್ನು ಹಬ್ಬಿಸುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ. ಇದು ಪದೇಪದೇ ಮುಂದುವರೆದರೆ ಏನು ಮಾಡುತ್ತಾರೋ ನೋಡಬೇಕು.

    ಜ್ಯೂನಿಯರ್ ಐಶ್ವರ್ಯಾಗೆ ಹೀರೋಯಿನ್​ ಆಗೋ ಅವಕಾಶ ಸಿಗ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts