ಹಂಗಾರಕಟ್ಟೆ ಶಾಲೆ ಮಕ್ಕಳ ಮೆರವಣಿಗೆ

1 Min Read
hangarakatte
ಸರ್ಕಾರಿ ಹಿ.ಪ್ರಾ. ಶಾಲೆ ಹಂಗಾರಕಟ್ಟೆಯಲ್ಲಿ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಅಚರಿಸಲಾಯಿತು

ಕೋಟ: ಸರ್ಕಾರಿ ಹಿ.ಪ್ರಾ.ಶಾಲೆ(ದೂಳಂಗಡಿ) ಹಂಗಾರಕಟ್ಟೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಶಾಲೆಯನ್ನು ತಳಿರು ತೋರಣದಿಂದ ಶೃಂಗರಿಸಿ, ಮೆರವಣಿಗೆಯಲ್ಲಿ ಅಗಮಿಸಿದ ಮಕ್ಕಳನ್ನು ಆರತಿ ಮೂಲಕ ಸ್ವಾಗತಿಸಲಾಯಿತು. ನಂತರ ನಡೆದ ಸಮಾರಂಭದಲ್ಲಿ ಶಾಲಾಭಿವೃದ್ಧಿ ಸಮಿತಿ ಆಧ್ಯಕ್ಷೆ ರೇಖಾ ಉಡುಪ, ನಿವೃತ್ತ ಮುಖ್ಯಶಿಕ್ಷಕಿ ಸೇಸು ವಿದ್ಯಾಥಿಗಳಿಗೆ ಉಚಿತ ಪುಸ್ತಕ ವಿತರಿಸಿದರು. ಮುಖ್ಯಶಿಕ್ಷಕಿ ಪ್ರೆಸಿಲ್ಲಾ ಮೆಟಿಲ್ಡಾ ನೊರೊನಾ ಸ್ವಾಗತಿಸಿ, ಶಿಕ್ಷಕಿ ವೀಣಾ ಪ್ರಾಸ್ತಾವಿಕ ಮಾತನಾಡಿ ಶಾಲೆಯ ವಾರ್ಷಿಕ ಕ್ರಿಯಾ ಯೋಜನೆ ಬಗ್ಗೆ ಮಾತನಾಡಿದರು.
ಶಿಕ್ಷಕಿ ಉಷಾರಾಣಿ ನಿರೂಪಿಸಿದರು. ಗೌರವ ಶಿಕ್ಷಕಿ ಯಶೋದಾ ವಂದಿಸಿದರು. ಶಿಕ್ಷಕಿಯರಾದ ಲವೀನಾ, ರಮ್ಯಾ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪಾಲಕರು ಉಪಸ್ಥಿತರಿದ್ದರು.

See also  ವಿಜ್ಞಾನ, ತಂತ್ರಜ್ಞಾನ ಜನರ ಶ್ರೇಯೋಭಿವೃದ್ಧಿಗೆ ಬಳಕೆಯಾಗಲಿ: ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್​.ಕಿರಣ್​ ಕುಮಾರ್​ ಅಭಿಮತ
Share This Article