

ವಿಜಯವಾಣಿ ಸುದ್ದಿಜಾಲ ಕೋಟ
ಕೋಟದ ಮಣೂರು ಪಡುಕರೆ ಸರ್ಕಾರಿ ಸಂಯುಕ್ತ ಫ್ರೌಡಶಾಲೆ, ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ರಜೆ ಕಳೆದು ಶುಕ್ರವಾರ ಸಂಭ್ರಮದಿಂದ ಶಾಲೆ ಪ್ರವೇಶಿಸಿದರು.ಮಕ್ಕಳಿಗೆ ನಗುಮೊಗದ ಸ್ವಾಗತಕೋರಿದ ಆನಂದ್ ಸಿ.ಕುಂದರ್ ಸಿಹಿ ಹಂಚಿ ಶುಭಹಾರೈಸಿದರು. ಶಾಲಾ ಮುಖ್ಯದ್ವಾರದಲ್ಲಿ ಬಲೂನ್ಗಳನ್ನು ಶೃಂಗರಿಸಿದ್ದು, ಮಕ್ಕಳು ಕುಣಿದಾಡುತ್ತಾ ತರಗತಿ ಪ್ರವೇಶಿಸಿದರು. ಮಕ್ಕಳಿಗೆ ಶಿಕ್ಷಕರು ಪುಷ್ಪವೃಷ್ಟಿಗೈದರು.
ಮುಖ್ಯಶಿಕ್ಷಕ ಮಂಜುನಾಥ್ ಕೆ.ಎಸ್., ಪ್ರೌಢವಿಭಾಗದ ಮುಖ್ಯಶಿಕ್ಷಕ ನಿರಂಜನ್ ನಾಯಕ್, ಎಸ್ಡಿಎಂಸಿ ಅಧ್ಯಕ್ಷ ಜಯರಾಮ್ ಶೆಟ್ಟಿ, ನಾಗರಾಜ್, ಗೀತಾನಂದ ಟ್ರಸ್ಟ್ ವೈಷ್ಣವಿ ರಕ್ಷಿತ್ ಕುಂದರ್, ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ, ಸಹ ಶಿಕ್ಷಕರಾದ ರಾಮದಾಸ ನಾಯಕ್, ಶ್ರೀಧರ ಶಾಸ್ತ್ರಿ, ನಾಗರತ್ನ, ಪಾಲಕರು ಮತ್ತಿತರರು ಇದ್ದರು. ಸರ್ಕಾರದಿಂದ ಕೊಡಮಾಡಿದ ಪಠ್ಯಪಸ್ತಕ ಹಾಗೂ ಸಮವಸ್ತ್ರವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಮಕ್ಕಳಿಗೆ ವಿತರಿಸಿದರು.