ಹಂಪಿ: ಚಂದನವನದ ಎವರ್ ಗ್ರೀನ್ ನಟಿ ರಮ್ಯಾ ಸಮಾರೋಪ ಸಮಾರಂಭದ ಹೈಲೈಟ್ ಆಗಿದ್ದರು. ವೇದಿಕೆಗೆ ಬರುತ್ತಲೇ ಜನರು ಕೇಕೆ ಹಾಕಿ ಸ್ವಾಗತಿಸಿದರು. ಪುನೀತ್ ರಾಜ್ಕುಮಾರ್ ಜತೆ ನಟಿಸಿದ ‘ನೀನೆ ನೀನೆ.. ನನಗೆಲ್ಲ ನೀನೆ’ ಹಾಡನ್ನು ಕೆಲ ಕಾಲ ಗುನುಗಿದರು. ಜನರೂ ರಮ್ಯಾರೊಂದಿಗೆ ದನಿಗೂಡಿಸಿದರು. ಈ ವೇಳೆ ಅನೇಕರು ರಮ್ಯಾ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವ ಆಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಂಪಿ ಉತ್ಸವದಲ್ಲಿ ಅರ್ಜುನ್ ಜನ್ಯ ಹಾಡಿಗೆ ಕುಣಿದು ಕುಪ್ಪಳಿಸಿ ಯುವಕರು

ಅಂಗವಿಕಲರಾಗಿರುವ ಚಿತ್ರಕಲಾ ಶಿಕ್ಷಕ ರಾಜು ಎಂಬುವರರನ್ನು ವೇದಿಕೆಗೆ ಕರೆಸಿಕೊಂಡ ರಮ್ಯಾ ಸೆಲ್ಫಿ ನೀಡಿದರು. ಈ ವೇಳೆ ರಾಜು ಅವರು ’ಕಂಡಿಲ್ಲ ಯಾರು ಆ ದೇವರನ್ನು, ಇರಬಹುದೇ ನಿನ್ನಂತೆ ಅವನು’ ಹಾಡನ್ನು ಹಾಡಿದರು. ಬಳಿಕ ಕೆಲ ಜನರಿಗೆ ಸೆಲ್ಫಿ ನೀಡಿದ ರಮ್ಯಾ, ಅತಿಥಿ ಸ್ಥಾನ ವಹಿಸಿದರೂ ಹೆಚ್ಚು ಮಾತನಾಡಲಿಲ್ಲ. ಕೆಲ ನಿಮಿಷಗಳಲ್ಲೇ ವೇದಿಕೆ ಇಳಿದಿದ್ದು ಜನರಲ್ಲಿ ನಿರಾಸೆ ಮೂಡಿಸಿತು.