ದಾವಣಗೆರೆಯಲ್ಲಿ ಅಪಘಾತ: ಹಂಪಿ ಕ‌ನ್ನಡ ವಿವಿ ಸಮಾಜ ವಿಜ್ಞಾನ ನಿಕಾಯದ ಡೀನ್ ವಾಸುದೇವನ್ ಸಾವು

vasudevan
Published on

ವಿಜಯನಗರ: ಹಂಪಿ ಕ‌ನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನ್ ಸಿ.ಎಸ್.ವಾಸುದೇವನ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ನಿನ್ನೆ(ಶನಿವಾರ) ರಾತ್ರಿ ದಾವಣಗೆರೆ ಜಿಲ್ಲೆಯ ಜಗಳೂರು ಬಳಿಯ ರಾಷ್ಟ್ರಿಯ ಹೆದ್ದಾರಿಯಲ್ಲಿ ಘಟನೆ ಅಪಘಾತ ನಡೆದಿದೆ. ವಾಸುದೇವನ್ ಅವರು ಪುತ್ರ ಮತ್ತು ಇಬ್ಬರು ವಿದ್ಯಾರ್ಥಿನಿಯರ ಜತೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಮಾರ್ಗಮಧ್ಯೆ ರಸ್ತೆಬದಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿದ್ದು, ಕಾರು ಚಾಲನೆ ಮಾಡುತ್ತಿದ್ದ ವಾಸುದೇವನ್​ ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾರೆ.

ಪುತ್ರ ಶ್ರೇಯಸ್, ಪಿ.ಎಚ್​ಡಿ ವಿದ್ಯಾರ್ಥಿನಿಯರಾದ ನಿರ್ಮಲ ಸಿ.ವಿ., ರಾಜೇಶ್ವರಿ ಕಡ್ಲಿಬುಡ್ಡಿ ಗಂಭೀರ ಗಾಯಗೊಂಡಿದ್ದಾರೆ. ಶ್ರೇಯಸ್​ ಎಂಬಿಬಿಎಸ್ ವಿದ್ಯಾರ್ಥಿ. ಹೊರನಾಡಿನ ಇತಿಹಾಸ ಅಕಾಡೆಮಿಯ ಕಾರ್ಯಕ್ರಮ ಮುಗಿಸಿಕೊಂಡು ಹಂಪಿಗೆ ಹೋಗುವಾಗ ಅಪಘಾತ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net