ಒಪ್ಪಂದಕ್ಕೆ ಒಪ್ಪದಿದ್ರೆ ದುರಂತ ಅಂತ್ಯವೇ ಗತಿ! ಹಮಾಸ್​ ವಿರುದ್ಧ ಟ್ರಂಪ್​ ಗುಡುಗು, ಇಸ್ರೇಲ್​ಗೆ ಖಡಕ್​ ಸೂಚನೆ | Trump

ವಿಜಯವಾಣಿ (77)
Published on

Trump: ಹಮಾಸ್​ಗೆ ಕದನ ವಿರಾಮಕ್ಕೆ ಒಪ್ಪುವಂತೆ ಅಮೆರಿಕ ಮುಂದಿಟ್ಟ ಪ್ರಸ್ತಾಪ ಅದ್ಯಾಕೋ ಫಲಿಸುವಂತೆ ಕಾಣುತ್ತಿಲ್ಲ. ಇಸ್ರೇಲ್​ ವಿರುದ್ಧದ ಪ್ರತೀಕಾರದ ದಾಳಿಯನ್ನು ಕೈಬಿಡಲು ಮನಸ್ಸಿಲ್ಲ ಎಂಬುದನ್ನು ಹಮಾಸ್​ ತೀಕ್ಷ್ಣವಾಗಿ ಹೇಳಿದ್ದು, ಟ್ರಂಪ್​ ಕಳುಹಿಸಿದ ಕದನ ವಿರಾಮ ಮಾತುಕತೆಯನ್ನು ತಿರಸ್ಕರಿಸಿದೆ. ಸದ್ಯ ಇದೇ ಅಮೆರಿಕ ಅಧ್ಯಕ್ಷರ ಕೆಂಗಣ್ಣಿಗೆ ಗುರಿಯಾಗಿದೆ.

ಗಾಜಾದಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಹೆಚ್ಚಿಸಬೇಕೆಂದು ಇಸ್ರೇಲ್​ಗೆ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದಾರೆ. ಅಮೆರಿಕ ಪ್ರಸ್ತಾಪಿಸಿದ ಕದನ ವಿರಾಮ ಪ್ರಸ್ತಾಪವನ್ನು ಹಮಾಸ್ ತಿರಸ್ಕರಿಸಿದ ಬೆನ್ನಲ್ಲೇ ಈ ಮಾತುಗಳು ಮುನ್ನೆಲೆಗೆ ಬಂದಿವೆ. ಹಮಾಸ್​ ನಡೆಯಿಂದ ತೀರ ಸಿಟ್ಟಾಗಿರುವ ಟ್ರಂಪ್​, ಗಾಜಾ ಕಥೆಯನ್ನು ಶೀಘ್ರವೇ ಕೊನೆಗೊಳಿಸಬೇಕು ಎಂದು ಕಟುವಾಗಿ ನುಡಿದಿದ್ದಾರೆ.

ಸ್ಕಾಟ್ಲೆಂಡ್‌ಗೆ ತೆರಳುವ ಮೊದಲು, ಈ ಕುರಿತು ಮಾತನಾಡಿ ಟ್ರಂಪ್, "ನಮ್ಮ ಪ್ರಸ್ತಾಪವನ್ನು ನೀವು ತಿರಸ್ಕರಿಸುತ್ತೀರಾ? ಹಮಾಸ್ ನಿಜವಾಗಿಯೂ ಒಪ್ಪಂದ ಮಾಡಿಕೊಳ್ಳಲು ಬಯಸುವುದಿಲ್ಲ. ಬದಲಿಗೆ ಸಾಯುವ ನಿರ್ಧಾರ ಕೈಗೊಂಡಿದ್ದಾರೆ ಎಂಬಂತೆ ತೋರುತ್ತಿದೆ. ಅವರಿಗೆ ಶಾಂತಿ ಬೇಕಿಲ್ಲ. ಗಾಜಾದ ಮೇಲಿನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿ. ಏನು ಮುಗಿಯಬೇಕೋ ಅದನ್ನು ಆದಷ್ಟು ಬೇಗ ಮುಗಿಸಿ" ಎಂದು ಇಸ್ರೇಲ್‌ಗೆ ಕರೆ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net