More

    ಹಮಾಸ್​, ರಷ್ಯಾ ವಿರುದ್ಧ ಜೋ ಬೈಡೆನ್​ ವಾಗ್ದಾಳಿ: ಗೆಲ್ಲಲು ಬಿಡುವುದಿಲ್ಲ ಎಂದು ಸಂಕಲ್ಪ

    ವಾಷಿಂಗ್ಟನ್​: ಹಮಾಸ್​ ಹಾಗೂ ರಷ್ಯಾ ವಿರುದ್ಧ ಕಿಡಿಕಾರಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್​, ಈ ಎರಡೂ ಕೂಡ ಪ್ರಜಾಪ್ರಭುತ್ವಗಳನ್ನು ನಾಶ ಮಾಡಲು ಹೊರಟಿವೆ ಎಂದರು.

    ಓವಲ್​ ಕಚೇರಿಯಿಂದ ಗುರುವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಬೈಡೆನ್​, ಹಮಾಸ್​ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​, ಎರಡು ವಿಭಿನ್ನ ಬೆದರಿಕೆಗಳಾಗಿ ಪ್ರತಿನಿಧಿಸುತ್ತಿದ್ದಾರೆ. ಆದರೆ, ಇಬ್ಬರ ಸಾಮಾನ್ಯ ಉದ್ದೇಶ ಒಂದೇ ಆಗಿದೆ. ಅದೇನೆಂದರೆ ನೆರೆಯ ಪ್ರಜಾಪ್ರಭುತ್ವವನ್ನು ಸಂಪೂರ್ಣ ನಾಶಮಾಡಲು ಬಯಸುತ್ತಿವೆ ಎಂದು ಹೇಳಿದರು.

    ನಾವು ಒಂದು ದೊಡ್ಡ ರಾಷ್ಟ್ರವಾಗಿ ನಮ್ಮ ಜವಾಬ್ದಾರಿಯ ಹಾದಿಯಲ್ಲಿ ಸಣ್ಣ ಪಕ್ಷಪಾತದ ಕೋಪದ ರಾಜಕಾರಣವನ್ನು ನಾವು ಬಿಡಬಾರದು. ಹಾಗೆಯೇ ಹಮಾಸ್‌ನಂತಹ ಭಯೋತ್ಪಾದಕರು ಮತ್ತು ಪುಟಿನ್‌ನಂತಹ ಕ್ರೂರರನ್ನು ಗೆಲ್ಲಲು ನಾವು ಬಿಡುಬಾರದು ಮತ್ತು ಬಿಡುವುದಿಲ್ಲ ಎಂದು ಬೈಡೆನ್​ ಸಂಕಲ್ಪ ಮಾಡಿದರು.

    ಯೂಕ್ರೇನ್​ ಮತ್ತು ಇಸ್ರೇಲ್​ಗೆ ಭಾರೀ ಪ್ರಮಾಣದ ಧನಸಹಾಯಕ್ಕೆ ಅನುಮೋದನೆ ನೀಡುವಂತೆ ನಾನು ಕಾಂಗ್ರೆಸ್​ ಅನ್ನು ಕೇಳಿದ್ದೇನೆ. ಭವಿಷ್ಯದಲ್ಲಿ ಜಾಗತಿಕ ನಾಯಕನಾಗಲು ಯುನೈಟೆಡ್​ ಸ್ಟೇಟ್ಸ್​ಗೆ ಇದೊಂದು ಹೂಡಿಕೆಯಾಗಲಿದೆ. ತಲೆಮಾರುಗಳವರೆಗೆ ಅಮೆರಿಕನರ ಭದ್ರತೆಗಾಗಿ ಲಾಭಾಂಶವನ್ನು ಪಾವತಿಸುವ ಒಂದು ಜಾಣತನದ ಹೂಡಿಕೆಯಾಗಿದೆ ಎಂದು ಬೈಡೆನ್​ ವಿವರಿಸಿದರು.

    ಇದನ್ನೂ ಓದಿ: ಕ್ರಿಕೆಟ್​ ಬೆಟ್ಟಿಂಗ್​ ಕಾನೂನುಬದ್ಧವಾಗದೆ ಸರ್ಕಾರಕ್ಕೆ 2.29 ಲಕ್ಷ ಕೋಟಿ ರೂ. ನಷ್ಟ!

    ಅಮೆರಿಕನ್ ನಾಯಕತ್ವವು ಜಗತ್ತನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುತ್ತದೆ. ಅಮೆರಿಕನ್ ಮೈತ್ರಿಗಳು ನಮ್ಮನ್ನು, ಅಮೆರಿಕವನ್ನು ಸುರಕ್ಷಿತವಾಗಿರಿಸುತ್ತವೆ. ಅಮೆರಿಕದ ಮೌಲ್ಯಗಳು ಇತರ ರಾಷ್ಟ್ರಗಳು ನಮ್ಮೊಂದಿಗೆ ಕೆಲಸ ಮಾಡಲು ಬಯಸುವ ಪಾಲುದಾರರನ್ನಾಗಿ ಮಾಡುತ್ತವೆ. ಅಮೆರಿಕ ಇಂದಿಗೂ ಜಗತ್ತಿಗೆ ದಾರಿದೀಪವಾಗಿದೆ ಎಂದು ಬೈಡೆನ್​ ಹೇಳಿದರು.

    ಇನ್ನು ಶ್ವೇತಭವನವು ಕಾಂಗ್ರೆಸ್​ ಬಳಿ 100 ಬಿಲಿಯನ್​ ಡಾಲರ್​ಗಾಗಿ ಮನವಿ ಮಾಡಿದ್ದು, ಹಮಾಸ್​ ವಿರುದ್ಧ ಯುದ್ಧ ಮಾಡುತ್ತಿರುವ ಇಸ್ರೇಲ್​ ಹಾಗೂ ರಷ್ಯಾ ಅಕ್ರಮಣದ ವಿರುದ್ಧ ಹೋರಾಡುತ್ತಿರುವ ಯೂಕ್ರೇನ್​ಗೆ ಧನಸಹಾಯದ ಗುರಿಯನ್ನು ಹೊಂದಿದೆ. ​

    ಅಮೆರಿಕ ವಿಟೊ ಅಧಿಕಾರ ಬಳಕೆ
    ಇಮೇಲ್-ಹಮಾನ್ ಸಂಘರ್ಷ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಅಮೆರಿಕ ವಿಟೊ ಅಧಿಕಾರ ಚಲಾಯಿ ತಡೆ ಹಿಡಿದಿದೆ. 15 ಕೌನ್ಸಿಲ್​ ಸದಸ್ಯರಲ್ಲಿ 12 ಸದಸ್ಯರು ನಿರ್ಣಯದ ಪರವಾಗಿ ಮತ ಚಲಾಯಿಸಿದರು. ರಷ್ಯಾ ಮತ್ತು ಬ್ರಿಟನ್​ ಮತದಾನದಿಂದ ದೂರ ಉಳಿದಿದ್ದು, ಅಮೆರಿಕ ಈ ಪ್ರಸ್ತಾಪಕ್ಕೆ ವಿರುದ್ಧವಾಗಿ ಮತ ಚಲಾವಣೆ ಮಾಡಿತು. ಈ ನಿರ್ಣಯವು ಇಸ್ರೇಲ್​ನ ಸ್ವಯಂ ರಾಣಿಯ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತದೆ ಎಂದು ಅಮೆರಿಕ ರಾಯಭಾರಿ ಲಿಂಡಾ ಥಾಮರ್ ಹೇಳಿದ್ದಾರೆ.

    ಬ್ರಿಟನ್​ ಪ್ರಧಾನಿ ರಿಷಿ ಸುನಕ್ ಗುರುವಾರ, ಇಸ್ರೇಲ್​ಗೆ ಭೇಟಿ ನೀಡಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ಜಂಟಿ ಸಭೆ ನಡೆಸಿದರು. ಇಸ್ರೇಲ್​ಗೆ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕಿದೆ. ಹಮಾಸ್​ ವಿರುದ್ಧದ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ಅವರು ಹೇಳಿದರು. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಭೇಟಿ ಬೆನ್ನಲ್ಲೇ ಸುನಕ್​ ಕೂಡ ಇಸ್ರೇಲ್‌ಗೆ ಬೆಂಬಲ ನೀಡಿರುವುದು ಮಹತ್ವ ಪಡೆದಿದೆ. (ಏಜೆನ್ಸೀಸ್​)

    ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ; ಬೆಂಗಳೂರಿನ ಪಂದ್ಯಗಳ ದಿನಾಂಕ ಹೀಗಿದೆ…

    ಅಮರ ಗೀತೆಗಳ ಗಂಧರ್ವ ಜೋಡಿ ಶಂಕರ್-ಜೈಕಿಶನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts