More

    ಕ್ರಿಕೆಟ್​ ಬೆಟ್ಟಿಂಗ್​ ಕಾನೂನುಬದ್ಧವಾಗದೆ ಸರ್ಕಾರಕ್ಕೆ 2.29 ಲಕ್ಷ ಕೋಟಿ ರೂ. ನಷ್ಟ!

    ನವದೆಹಲಿ: ಭಾರತದಲ್ಲಿ ಈಗ ನಡೆಯುತ್ತಿರುವ ಏಕದಿನ ವಿಶ್ವಕಪ್​ ಟೂರ್ನಿ ಕ್ರಿಕೆಟ್​ ಪ್ರೇಮಿಗಳಿಗೆ ಮಾತ್ರವಲ್ಲದೆ, ಜೂಜುಗಾರರಿಗೂ ಹಬ್ಬವಾಗಿದೆ. ಪ್ರತಿ ಪಂದ್ಯಕ್ಕೂ ಸಾವಿರಾರು ಕೋಟಿ ರೂ. ಮೊತ್ತದ ಬೆಟ್ಟಿಂಗ್​ ದಂಧೆ ನಡೆಯುತ್ತಿದೆ. ಆದರೆ ಭಾರತದಲ್ಲಿ ಇನ್ನೂ ಬೆಟ್ಟಿಂಗ್​ ಕಾನೂನುಬದ್ಧ ಆಗದೇ ಇರುವುದರಿಂದ ಕೇಂದ್ರ ಸರ್ಕಾರಕ್ಕೆ ಇದರ ಲಾಭ ಸಿಗುತ್ತಿಲ್ಲ. ಒಂದು ಅಧ್ಯಾಯನದ ಪ್ರಕಾರ, ಬೆಟ್ಟಿಂಗ್​ ಕಾನೂನುಬದ್ಧ ಆಗದೆ ಇರುವುದರಿಂದ ಸರ್ಕಾರಕ್ಕೆ ವಾರ್ಷಿಕ 2.29 ಲಕ್ಷ ಕೋಟಿ ರೂ. ತೆರಿಗೆ ಹಣ ನಷ್ಟವಾಗುತ್ತಿದೆ!

    ದೇಶದಲ್ಲಿ ಬೆಟ್ಟಿಂಗ್​ ಕಾನೂನುಬಾಹಿರ ಎನಿಸಿದ್ದರೂ, ಅದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕುವುದು ಯಾವುದೇ ರಾಜ್ಯದ ಪೊಲೀಸರಿಗೂ ಸಾಧ್ಯವಾಗಿಲ್ಲ. ರಹಸ್ಯವಾಗಿ ಈ ದಂಧೆ ನಡೆಯುತ್ತಲೇ ಬಂದಿದೆ. ಈಗಂತೂ ಸ್ಮಾರ್ಟ್ ಫೋನ್​ ಮತ್ತಿತರ ಡಿಜಿಟಲ್​ ಸೌಕರ್ಯಗಳಿಂದಾಗಿ ಬೆಟ್ಟಿಂಗ್​ ದಂಧೆ ಸರಾಗವಾಗಿ ಬೆಳೆಯುತ್ತಲೇ ಸಾಗುತ್ತಿದೆ. ಥಿಂಕ್​ ಚೇಂಜ್​ ಫೋರಮ್​ (ಟಿಸಿಎಫ್​) ವರದಿಯ ಪ್ರಕಾರ, ದೇಶದಲ್ಲಿ ಪ್ರಸಕ್ತ ವಾರ್ಷಿಕ 8.20 ಲಕ್ಷ ಕೋಟಿ ರೂ. ಮೊತ್ತದ ಕ್ರೀಡಾ ಬೆಟ್ಟಿಂಗ್​ ವ್ಯವಹಾರ ನಡೆಯುತ್ತಿದೆ. ಇದಕ್ಕೆ ಶೇ. 28 ಜಿಎಸ್​ಟಿ ಅನ್ವಯವಾದರೆ ಸರ್ಕಾರ ವಾರ್ಷಿಕ 2.29 ಲಕ್ಷ ಕೋಟಿ ರೂ. ಆದಾಯ ಗಳಿಸಬಹುದು.

    ಪ್ರತಿ ವರ್ಷ ಏಪ್ರಿಲ್-ಮೇನಲ್ಲಿ ನಡೆಯುವ ಐಪಿಎಲ್​ ಟೂರ್ನಿಯ ವೇಳೆ ಬೆಟ್ಟಿಂಗ್​ ದಂಧೆ ಹೆಚ್ಚಿರುತ್ತದೆ. ಅಂದಾಜಿನ ಪ್ರಕಾರ, ಸಾಮಾನ್ಯವಾಗಿ ದೇಶದ 14 ಕೋಟಿ ಜನರು ಈ ಬೆಟ್ಟಿಂಗ್​ ಚಟುವಟಿಕೆಯಲ್ಲಿ ಪಾಲ್ಗೊಂಡರೆ, ಐಪಿಎಲ್​ ವೇಳೆ ಈ ಸಂಖ್ಯೆ 37 ಕೋಟಿಗೆ ಏರುತ್ತದೆ. ಭಾರತದಲ್ಲಿ ಬೆಟ್ಟಿಂಗ್​ಗೆ ನಿಷೇಧವಿರುವ ನಡುವೆ, ಸುಮಾರು 75 ವಿದೇಶಿ ಬೆಟ್ಟಿಂಗ್​ ವೆಬ್​ಸೈಟ್​ಗಳು ಭಾರತೀಯರ ಬೆಟ್ಟಿಂಗ್​ ವ್ಯವಹಾರಕ್ಕೆ ಲಭ್ಯವಾಗಿವೆ.

    ವಿಶ್ವಕಪ್​ನಲ್ಲಿ ಮುಂದಿನ 3 ಪಂದ್ಯಗಳಿಗೆ ಕೇನ್​ ವಿಲಿಯಮ್ಸನ್​ ಅಲಭ್ಯ; ಭಾರತಕ್ಕೂ ಸಿಹಿಸುದ್ದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts