More

    ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ; ಬೆಂಗಳೂರಿನ ಪಂದ್ಯಗಳ ದಿನಾಂಕ ಹೀಗಿದೆ…

    ಬೆಂಗಳೂರು: ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಡಿಸೆಂಬರ್​ 2ರಂದು ಅಹಮದಾಬಾದ್​ನ ಅರೆನಾ ಬೈ ಟ್ರಾನ್ಸ್​ಸ್ಟೇಡಿಯಾದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಗುಜರಾತ್​ ಜೈಂಟ್ಸ್​ ಮತ್ತು ತೆಲುಗು ಟೈಟಾನ್ಸ್​ ತಂಡಗಳು ಮುಖಾಮುಖಿ ಆಗಲಿವೆ. ಬೆಂಗಳೂರು ಬುಲ್ಸ್​ ತಂಡ ಡಿ.3ರಂದು ಗುಜರಾತ್​ ಜೈಂಟ್ಸ್​ ಎದುರು ಅಭಿಯಾನ ಆರಂಭಿಸಲಿದೆ.

    ಈ ಬಾರಿ ಟೂರ್ನಿ ಹಿಂದಿನಂತೆ 12 ನಗರಗಳಲ್ಲಿ ಕ್ಯಾರವಾನ್​ ಸ್ವರೂಪದಲ್ಲಿ ನಡೆಯಲಿದ್ದು, ಅಹಮದಾಬಾದ್​ನಲ್ಲಿ ಮೊದಲ ಚರಣದ ಪಂದ್ಯಗಳು ನಡೆಯಲಿವೆ. 2024ರ ಫೆಬ್ರವರಿ 21ರವರೆಗೆ ಲೀಗ್​ ಹಂತದ ಪಂದ್ಯಗಳು ನಡೆಯಲಿದ್ದು, ಪ್ಲೇಆಫ್​ ವೇಳಾಪಟ್ಟಿ ತಡವಾಗಿ ಪ್ರಕಟಗೊಳ್ಳಲಿದೆ.

    ಡಿಸೆಂಬರ್​ 7ರವರೆಗೆ ಅಹಮದಾಬಾದ್​ ಚರಣ ನಡೆಯಲಿದೆ. ಬಳಿಕ ಬೆಂಗಳೂರು (ಡಿ.8-13), ಪುಣೆ (ಡಿ.15-20), ಚೆನ್ನೈ (ಡಿ.22-27), ನೋಯ್ಡಾ (ಡಿ.29-ಜ.3), ಮುಂಬೈ (ಜ.5-10), ಜೈಪುರ (ಜ.12-17), ಹೈದರಾಬಾದ್​ (ಜ.19-24), ಪಟನಾ (ಜ.26-31), ದೆಹಲಿ (ಫೆ.2-7), ಕೋಲ್ಕತ (ಫೆ.9-14), ಪಂಚಕುಲ (ಫೆ.16-21) ಚರಣದ ಪಂದ್ಯಗಳು ನಡೆಯಲಿವೆ. ಸ್ಟಾರ್​ ಸ್ಪೋರ್ಟ್ಸ್​, ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ ಎಲ್ಲ ಪಂದ್ಯಗಳು ನೇರಪ್ರಸಾರ ಕಾಣಲಿವೆ. ಪ್ರತಿ ದಿನದ ಮೊದಲ ಪಂದ್ಯ ರಾತ್ರಿ 8 ಮತ್ತು 2ನೇ ಪಂದ್ಯ ರಾತ್ರಿ 9ರಿಂದ ನಡೆಯಲಿದೆ.

    ಡಿ.8-13 ಬೆಂಗಳೂರು ಚರಣ
    ಅಹಮದಾಬಾದ್​ನಲ್ಲಿ ಟೂರ್ನಿಗೆ ಚಾಲನೆ ದೊರೆತ ಬೆನ್ನಲ್ಲೇ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಡಿಸೆಂಬರ್​ 8ರಿಂದ 13ರವರೆಗೆ 2ನೇ ಚರಣದ ಪಂದ್ಯಗಳು ನಡೆಯಲಿವೆ. ಬೆಂಗಳೂರು ಬುಲ್ಸ್​&ದೆಹಲಿ ನಡುವೆ ಬೆಂಗಳೂರು ಚರಣದ ಮೊದಲ ಪಂದ್ಯ ನಡೆಯಲಿದೆ. ಈ ಪೈಕಿ ಡಿಸೆಂಬರ್​ 12ರಂದು ಮಾತ್ರ ಒಂದೇ ಪಂದ್ಯ ನಡೆಯಲಿದ್ದರೆ, ಉಳಿದ ದಿನಗಳಲ್ಲಿ ತಲಾ 2 ಪಂದ್ಯಗಳು ನಡೆಯಲಿವೆ.

    ಬೆಂಗಳೂರು ಬುಲ್ಸ್​ ಪಂದ್ಯಗಳು
    ದಿನಾಂಕ:ಎದುರಾಳಿ (ಸ್ಥಳ): ಆರಂಭ
    ಡಿ.3: ಗುಜರಾತ್​ ಜೈಂಟ್ಸ್​ (ಅಹಮದಾಬಾದ್​): ರಾತ್ರಿ 9
    ಡಿ.4: ಬೆಂಗಾಲ್​ ವಾರಿಯರ್ಸ್​ (ಅಹಮದಾಬಾದ್​): ರಾತ್ರಿ 9
    ಡಿ.8: ದಬಾಂಗ್​ ದೆಹಲಿ (ಬೆಂಗಳೂರು): ರಾತ್ರಿ 8
    ಡಿ. 9: ಹರಿಯಾಣ ಸ್ಟೀಲರ್ಸ್​ (ಬೆಂಗಳೂರು): ರಾತ್ರಿ 8
    ಡಿ. 11: ಯುಪಿ ಯೋಧಾಸ್​ (ಬೆಂಗಳೂರು): ರಾತ್ರಿ 9
    ಡಿ.13: ಜೈಪುರ ಪಿಂಕ್​ಪ್ಯಾಂಥರ್ಸ್​ (ಬೆಂಗಳೂರು): ರಾತ್ರಿ 9
    ಡಿ.20: ಪುಣೇರಿ ಪಲ್ಟಾನ್​ (ಪುಣೆ): ರಾತ್ರಿ 9
    ಡಿ.24: ತೆಲುಗು ಟೈಟಾನ್ಸ್​ (ಚೆನ್ನೈ): ರಾತ್ರಿ 9
    ಡಿ.29: ಯುಪಿ ಯೋಧಾಸ್​ (ನೋಯ್ಡಾ): ರಾತ್ರಿ 9
    ಡಿ. 31: ತಮಿಳ್​ ತಲೈವಾಸ್​ (ನೋಯ್ಡಾ): ರಾತ್ರಿ 9
    ಜ.5: ಯು ಮುಂಬಾ (ಮುಂಬೈ): ರಾತ್ರಿ 9
    ಜ. 8: ಪಟನಾ ಪೈರೇಟ್ಸ್​ (ಮುಂಬೈ): ರಾತ್ರಿ 8
    ಜ.15: ಬೆಂಗಾಲ್​ ವಾರಿಯರ್ಸ್​ (ಜೈಪುರ): ರಾತ್ರಿ 8
    ಜ. 19: ತೆಲುಗು ಟೈಟಾನ್ಸ್​ (ಹೈದರಾಬಾದ್​): ರಾತ್ರಿ 9
    ಜ. 21: ತಮಿಳ್​ ತಲೈವಾಸ್​ (ಹೈದರಾಬಾದ್​): ರಾತ್ರಿ 9
    ಜ. 28: ಜೈಪುರ ಪಿಂಕ್​ಪ್ಯಾಂಥರ್ಸ್​ (ಪಟನಾ): ರಾತ್ರಿ 9
    ಜ. 31: ಪಟನಾ ಪೈರೇಟ್ಸ್​ (ಪಟನಾ): ರಾತ್ರಿ 9
    ಫೆ.4: ಯು ಮುಂಬಾ (ದೆಹಲಿ): ರಾತ್ರಿ 9
    ಫೆ. 7: ಪುಣೇರಿ ಪಲ್ಟಾನ್​ (ದೆಹಲಿ): ರಾತ್ರಿ 8
    ಫೆ. 11: ಗುಜರಾತ್​ ಜೈಂಟ್ಸ್​ (ಕೋಲ್ಕತ): ರಾತ್ರಿ 9
    ಫೆ. 18: ದಬಾಂಗ್​ ದೆಹಲಿ (ಪಂಚಕುಲ): ರಾತ್ರಿ 9
    ಫೆ. 21: ಹರಿಯಾಣ ಸ್ಟೀಲರ್ಸ್​ (ಪಂಚಕುಲ): ರಾತ್ರಿ 9

    ವಿಶ್ವಕಪ್​ನಲ್ಲಿ ಮುಂದಿನ 3 ಪಂದ್ಯಗಳಿಗೆ ಕೇನ್​ ವಿಲಿಯಮ್ಸನ್​ ಅಲಭ್ಯ; ಭಾರತಕ್ಕೂ ಸಿಹಿಸುದ್ದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts