

ಮಂಗಳೂರು: ಯುವವಾಹಿನಿ ಕುಳೂರು ಘಟಕದ ವತಿಯಿಂದ ಹಳ್ಳಿಡೊಂಜಿ ದಿನ ಕಾರ್ಯಕ್ರಮಕ್ಕೆ ಈದುವಿನಲ್ಲಿ ಭಾನುವಾರ ಸ್ಥಳೀಯ ಕೃಷಿಕ ಶಾಂತಪ್ಪ ಪೂಜಾರಿ ಚಾಲನೆ ನೀಡಿದರು.
ಘಟಕದ ಸದಸ್ಯ ಪ್ರಸಾದ್ ಈದು ಅವರ ತಾಯಿ ಸುಶೀಲಾ ಪೂಜಾರಿ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಗದ್ದೆಯ ಮಾಲೀಕ ಶೇಖರ್ ಪೂಜಾರಿ ಹಾಗೂ ಪ್ರಗತಿಪರ ಶಾಂತಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಘಟಕದ ಅಧ್ಯಕ್ಷೆ ಇಂದಿರಾ ಸುರೇಶ್, ನಿಕಟಪೂರ್ವ ಅಧ್ಯಕ್ಷ ಯಶವಂತ್ ಪೂಜಾರಿ, ಎರಡನೇ ಉಪಾಧ್ಯಕ್ಷೆ ಗೀತಾ, ಮಾಜಿ ಅಧ್ಯಕ್ಷ ಪುಷ್ಪರಾಜ್ ಕುಮಾರ್, ಲೋಕೇಶ್ ಕೋಟ್ಯಾನ್, ನಯನಾ ರಮೇಶ್, ದೀಕ್ಷಿತ್ ಸಿ.ಎಸ್., ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಕಾರ್ಯದರ್ಶಿ ನೈನಾ ಕೋಟ್ಯಾನ್, ಕೋಶಾಧಿಕಾರಿ ವಿಘ್ನೇಶ್, ಕಾರ್ಯಕ್ರಮದ ಸಂಚಾಲಕ ಹೇಮಂತ್ ಅಮೀನ್, ಸಹ ಸಂಚಾಲಕ ಸುದೇಶ್ ಮತ್ತಿತರರಿದ್ದರು.
ಸ್ವಾತಿ ಮತ್ತು ಆದ್ಮಿತಾ ಪ್ರಾರ್ಥಿಸಿದರು. ಮಾಜಿ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್ ನಿರ್ವಹಿಸಿದರು. ಸಮಾರೋಪದಲ್ಲಿ ವಿವಿಧ ಪಂದ್ಯಾಕೂಟ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನೇತ್ರಾವತಿ ತಂಡ ಪ್ರಥಮ ಬಹುಮಾನ ಪಡೆಯಿತು. ಘಟಕದ ಸುಮಾರು 60 ಮಂದಿ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.