

ಬೆಂಗಳೂರು: ಸಾರಿಗೆ ಬಸ್ಗಳಲ್ಲಿ ಇತ್ತೀಚೆಗೆ ಸಾಕು ನಾಯಿಗಳನ್ನೂ ಸಾಗಣೆ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ನಾಯಿ ಕೊಂಡೊಯ್ಯಲು ರಿಯಾಯಿತಿ ನೀಡಿದೆ.
ಈ ಮೊದಲು ಫುಲ್ ಟಿಕೆಟ್ ದರ ನೀಡಬೇಕಿತ್ತು. ಪರಿಷ್ಕೃತ ಸುತ್ತೋಲೆ ಅನ್ವಯ ನಾಯಿಗಳಿಗೆ ಅರ್ಧ ಟಿಕೆಟ್ (ಮಕ್ಕಳಿಗೆ ವಿಧಿಸುವ ದರ) ನಿಗದಿ ಪಡಿಸಲಾಗಿದೆ. ಈ ಕುರಿತು ಕೆಎಸ್ಆರ್ಟಿಸಿ ಅಧಿಕೃತ ಮಾಹಿತಿ ನೀಡಿದೆ.
30 ಕೆಜಿ ಲಗೇಜ್ ಸಾಗಣೆ ಉಚಿತ: ವಿಮಾನದಲ್ಲಿ ಮಾತ್ರ ನಿರ್ದಿಷ್ಟ ಲಗೇಜ್ ಉಚಿತವಾಗಿ ಕೊಂಡೊಯ್ಯಲು ಅವಕಾಶವಿದೆ. ಇನ್ಮುಂದೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಲಗೇಜ್ ಕೊಂಡೊಯ್ಯುವ ಬಗ್ಗೆ ಸ್ಪಷ್ಟತೆ ನೀಡಲಾಗಿದೆ. ಈ ಬಗ್ಗೆ ಇದ್ದ ಗೊಂದಲವನ್ನು ನಿವಾರಿಸಲಾಗಿದೆ.
ವೈಯಕ್ತಿಕವಾಗಿ ಕೊಂಡೊಯ್ಯುವ ಲಗೇಜ್ ತೂಕ 30 ಕೆಜಿವರೆಗೆ ಯಾವುದೇ ದರ ವಿಧಿಸುತ್ತಿಲ್ಲ. ಬ್ಯಾಗ್, ಸೂಟ್ಕೇಸ್, ಕಿಟ್ ಬ್ಯಾಗ್ ದಿನಸಿ, ಅಕ್ಕಿ, ತೆಂಗಿನಕಾಯಿ, ರಾಗಿ, ಅಕ್ಕಿ ಹಿಟ್ಟು, ತರಕಾರಿ, ಹೂ ಹಣ್ಣು, ಸೀಲಿಂಗ್ ಫ್ಯಾನ್, ಒಂದು ಮಿಕ್ಸರ್ ಗ್ರೈಂಡರ್ ಬಾಕ್ಸ್ ಇತ್ಯಾದಿ ವಸ್ತುಗಳು 30 ಕೆಜಿ ಒಳಗೆ ಪರಿಗಣಿಸಲಾಗುತ್ತದೆ. ಲಗೇಜ್ 30 ಕೆಜಿ ಮೀರಿದರೆ ಅದರ ಮೇಲೆ ನಿಯಮದ ಪ್ರಕಾರ ದರ ವಿಧಿಸಲಾಗುತ್ತದೆ. ಈ ಕುರಿತು ಕೆಎಸ್ಆರ್ಟಿಸಿ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ.