More

    ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆ ಅಗತ್ಯ

    ಹಗರಿಬೊಮ್ಮನಹಳ್ಳಿ: ದೈಹಿಕ ಸದೃಢತೆ ಹಾಗೂ ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ ಎಂದು ಸಿಪಿಐ ವಿಕಾಸ್ ಪಿ.ಲಮಾಣಿ ಹೇಳಿದರು.
    ಪಟ್ಟಣದಲ್ಲಿ ಬಸ್ ನಿಲ್ದಾಣ ಬಳಿಯ ಆವರಣದಲ್ಲಿ ಸೀನಿಯರ್ ಕ್ರಿಕೆಟರ್ಸ್‌ ತಂಡದಿಂದ ಆಯೋಜಿಸಿದ್ದ 35 ವರ್ಷ ಮೇಲ್ಪಟ್ಟ ವಯಸ್ಕರರಿಗೆ ಕ್ರಿಕೆಟ್ ಟೂರ್ನಾಮೆಂಟ್ ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದರು. ನಿತ್ಯದ ಕೆಲಸದಿಂದಾಗಿ ಮಾನಸಿಕ, ಬೌದ್ಧಿಕವಾಗಿ ಒತ್ತಡವಾಗಲಿದೆ. ಇದಕ್ಕೆ ಕ್ರೀಡೆ ಆಯೋಜನೆ ಸೂಕ್ತವಾಗಿದೆ ಎಂದರು.

    ನಿತ್ಯದ ಕೆಲಸದಿಂದಾಗಿ ಮಾನಸಿಕ, ಬೌದ್ಧಿಕವಾಗಿ ಒತ್ತಡ

    ಫೈನಲ್ಸ್‌ನಲ್ಲಿ ಜಯಗಳಿಸಿದ ವಿಜಯನಗರ ಕ್ರಿಕೆಟ್ ಕ್ಲಬ್ ತಂಡಕ್ಕೆ ಕಪ್, ನಗದು ಬಹುಮಾನ ವಿತರಿಸಲಾಯಿತು. ಸಿಪಿಐ ವಿಕಾಸ್ ಲಮಾಣಿ ನೇತೃತ್ವದಲ್ಲಿ ಪೊಲೀಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಕ್ಲಬ್ ತಂಡದ ತುಳಸಿರಾಮ್ ಕಠಾರೆ ಪಂದ್ಯ ಪುರುಷೋತ್ತಮ ಹಾಗೂ ಸಿಪಿಐ ವಿಕಾಸ್ ಲಮಾಣಿ ಸರಣಿ ಶ್ರೇಷ್ಠ ಪ್ರಶಸ್ತಿ ಭಾಜನರಾದರು.

    ಇದನ್ನೂ ಓದಿ: ತನಿಷಾ ಔಟ್​ ಆಗಿಲ್ಲ , ಮನೆಯಲ್ಲಿಯೇ ಸೀಕ್ರೆಟ್​​ ರೂಮ್​ನಲ್ಲಿ ಇದ್ದಾರೆ..!? ರಾತ್ರೋರಾತ್ರಿ ‘ಬಿಗ್ ಬಾಸ್’ನಿಂದ ಎಲಿಮಿನೇಷನ್​​ ಬಿಸಿ..!

    ಮಾಜಿ ಸೈನಿಕರ ಸಂಘದ ತಾಲೂಕಾಧ್ಯಕ್ಷ ಎಂ.ರಾಮ್‌ರೆಡ್ಡಿ, ಎಚ್.ಎಂ.ಬಸವರಾಜ್, ಶಿವಾನಂದ್, ಸೀನಿಯರ್ಸ್ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷ ಎಚ್.ಕೊಟ್ರೇಶ್, ಉಪಾಧ್ಯಕ್ಷ ಅಬ್ದುಲ್ ಗಫರ್‌ಖಾನ್, ಸದಸ್ಯರಾದ ಅಕ್ಬರ್ ತೆಲಗಿ, ರುದ್ರಮುನಿ, ವಕೀಲ ಎ.ಚಂದ್ರಶೇಖರ್, ವಸಂತ್, ಅಕ್ಬರ್, ರಾಜು, ದಾದಾಪೀರ್, ಮುಕ್ತಿಯಾರ್, ಉಸ್ಮಾನ್, ವೀರೇಶ್, ಸಂದೀಪ್, ವೆಂಕಟೇಶ, ಮುತ್ತುರಾಜ್ ಇತರರಿದ್ದರು. ಟೂರ್ನಿಯಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ತಂಡಗಳು ಹಾಗೂ ಕ್ರಿಕೆಟ್ ಕ್ಲಬ್ ಆಟಗಾರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts