

ಬೆಂಗಳೂರು: ಇಡೀ ಜಗತ್ತು ಕರೊನಾ ಭೀತಿಯಲ್ಲಿ ಮುಳುಗಿದ್ದರೆ ಸೈಬರ್ ಹ್ಯಾಕರ್ಸ್ ಜನರ ಬ್ಯಾಂಕ್ ಖಾತೆ, ಡೇಟಾಗೆ ಕನ್ನ ಹಾಕಲು ಅಣಿಯಾಗಿದ್ದಾರೆ. ಇ-ಮೇಲ್, ವಾಟ್ಸ್ಆಪ್ ಅಥವಾ ಇನ್ನಾವುದೇ ಜಾಲತಾಣಗಳಲ್ಲಿ ಬರುವ ಲಿಂಕ್ಗಳನ್ನು ಕ್ಲಿಕ್ ಮಾಡದಂತೆ ಸಾರ್ವಜನಿಕರಿಗೆ ಸಿಐಡಿ ಸೈಬರ್ ಪೊಲೀಸರು ಎಚ್ಚರಿಸಿದ್ದಾರೆ.
ಕರೊನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಮಾಹಿತಿ ತಿಳಿಯಲು ಪ್ರತಿಯೊಬ್ಬರೂ ಇಂಟರ್ನೆಟ್ನಲ್ಲಿ ಹುಡುಕಾಡುತ್ತಿದ್ದಾರೆ. ಮತ್ತೊಂದೆಡೆ ಬ್ಲಾಕ್ ಹ್ಯಾಟ್ ಹ್ಯಾಕರ್ಗಳ ತಂಡ ಅಮಾಯಕರನ್ನು ದಾರಿ ತಪ್ಪಿಸಿ ಬ್ಯಾಂಕ್ ಖಾತೆ ಮತ್ತು ಡೇಟಾಗೆ ಕನ್ನ ಹಾಕಲು ಪ್ರಯತ್ನಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಹ್ಯಾಕರ್ಗಳು ಕರೊನಾ ಸೋಂಕಿನ ನಿಯಂತ್ರಣ ಕುರಿತ ಮಾಹಿತಿಯುಳ್ಳ ಸಂದೇಶವನ್ನು ಇ-ಮೇಲ್ ಮತ್ತು ಮೊಬೈಲ್ಗೆ ರವಾನಿಸಿ ಆಸಕ್ತಿ ಮೂಡಿಸಿ ಕೊನೆಗೆ ಹೆಚ್ಚಿನ ಮಾಹಿತಿಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ಸೂಚನೆ ಕೊಡುತ್ತಾರೆ. ಜನ ಲಿಂಕ್ ಮೇಲೆ ಕ್ಲಿಕ್ ಮಾಡುತ್ತಿದ್ದಂತೆ ಕಂಪ್ಯೂಟರ್ ಮತ್ತು ಮೊಬೈಲ್ನಲ್ಲಿರುವ ಡೇಟಾ ಕಳವಾಗುತ್ತದೆ. ಆ ನಂತರ ಜನರಿಗೆ ತಿಳಿಯದಂತೆ ಅವರ ಬ್ಯಾಂಕ್ ಖಾತೆಯಲ್ಲಿ ಇರುವ ಹಣಕ್ಕೆ ಕನ್ನ ಹಾಕುತ್ತಾರೆ. ಹೀಗಾಗಿ ಖಾಸಗಿ ಕಂಪನಿಗಳ ನೌಕರರನ್ನು ರಾಜ್ಯದ ಸಿಐಡಿ ಸೈಬರ್ ಕ್ರೖೆಂ ವಿಭಾಗದ ಅಧಿಕಾರಿಗಳು ಕರೊನಾ ವೈರಸ್ ಮಾಹಿತಿಯುಳ್ಳ ಇ-ಮೇಲ್ ಬಗ್ಗೆ ಎಚ್ಚರ ವಹಿಸುವಂತೆ ಅರಿವು ಮೂಡಿಸುತ್ತಿದ್ದಾರೆ.
ದೇಣಿಗೆ ಹೆಸರಲ್ಲೂ ಕನ್ನ: ಕರೊನಾ ವೈರಸ್ನಿಂದ ನೂರಾರು ಜನ ಮೃತಪಡುತ್ತಿದ್ದಾರೆ. ಅವರಿಗೆ ನೆರವಾಗುವ ಹೆಸರಲ್ಲಿ ದೇಣಿಗೆ ಸಂಗ್ರಹಿಸುವ ಸೋಗಿನಲ್ಲಿ ಸೈಬರ್ ಹ್ಯಾಕರ್ಸ್ ಸೆಳೆಯುತ್ತಾರೆ. ಆನ್ಲೈನ್ನಲ್ಲೇ ದೇಣಿಗೆ ವರ್ಗಾವಣೆಗೆ ಆಹ್ವಾನಿಸಿ ನಿಮ್ಮ ಬ್ಯಾಂಕ್ ಖಾತೆ ಅಥವಾ ವ್ಯಾಲೆಟ್ ಮಾಹಿತಿಗೆ ಕನ್ನ ಹಾಕುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಎಚ್ಚೆತ್ತ ಸಾಫ್ಟ್ವೇರ್ ಕಂಪನಿಗಳು: ಕರೊನಾ ಸೋಂಕಿನ ಭೀತಿಯಿಂದ ಬಹುರಾಷ್ಟ್ರೀಯ ಕಂಪನಿಗಳಾದ ಮೈಕ್ರೋಸಾಫ್ಟ್, ಗೂಗಲ್, ಲಾಗ್ವಿುನ್, ಸಿಸ್ಕೊ ಸೇರಿ ಹಲವು ಕಂಪನಿಗಳು ತಮ್ಮ ನೌಕರರಿಗೆ ಮನೆಯಲ್ಲೇ ಕುಳಿತು ಕೆಲಸ ಮಾಡುವಂತೆ ತಿಳಿಸಿವೆ. ಅಲ್ಲದೆ, ಕಂಪನಿಯ ರಿಮೋಟ್ ನೆಟ್ವರ್ಕ್ನಲ್ಲೇ ಮೀಟಿಂಗ್ ಮತ್ತು ಚರ್ಚೆ
ನಡೆಸಬೇಕು. ಯಾವುದೇ ನೆಟ್ವರ್ಕ್ನಲ್ಲಿ ಅಧಿಕಾರಿ, ಸಹೋದ್ಯೋಗಿಗಳ ಜತೆ ಚಾಟ್ ಮತ್ತು ಮಾಹಿತಿ ಹಂಚಿಕೊಳ್ಳದಂತೆ ಕಟ್ಟಾಜ್ಞೆ ಹೊರಡಿಸಿವೆ.
ಕಳ್ಳರಿಂದ ದೂರವಿರಿ
| ಗೋವಿಂದರಾಜು ಚಿನ್ನಕುರ್ಚಿ