

ಬನಾರಸ್ (ಉತ್ತರ ಪ್ರದೇಶ): ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಪ್ರಕರಣ ಸದ್ಯ ನ್ಯಾಯಾಲಯದಲ್ಲಿದ್ದು, ಸದ್ಯ ಈ ಜಾಗವನ್ನು ಸೀಲ್ ಮಾಡಲು ಆದೇಶಿಸಲಾಗಿದೆ. ಈ ನಡುವೆ ಸರ್ವೆ ಮಾಡಿದ ವೇಳೆ ಶಿವಲಿಂಗವನ್ನು ಯಾವ ರೀತಿ ಬಚ್ಚಿಡಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಸದ್ಯ ಈ ಪ್ರಕರಣ ಸುಪ್ರೀಂಕೋರ್ಟ್ ಅಂಗಳಕ್ಕೆ ಹೋಗಿದೆ. ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಹಿಂದೂ ಪರ ವಕೀಲ ವಿಷ್ಣು ಜೈನ್ ಶಿವಲಿಂಗ ಕುರಿತ ಸತ್ಯವನ್ನು ಹೊರಹಾಕಿದ್ದಾರೆ. ಮಸೀದಿಯಲ್ಲಿ ಸಿಕ್ಕ ಶಿವಲಿಂಗವನ್ನು ಯಾರಿಗೂ ಕಾಣದಂತೆ ಮುಚ್ಚಿಡಲಾಗಿತ್ತು.
ಮಸೀದಿಯೊಳಗೆ ಸರ್ವೇ ತಂಡ ಪ್ರವೇಶಿಸಿ ಸುತ್ತಲೂ ಕಣ್ಣಾಯಿಸಿದಾಗ ಒಂದು ಗೋಡೆಯೊಂದು ಪತ್ತೆಯಾಗುತ್ತದೆ. ಈ ಗೋಡೆಯನ್ನು ತೆರವುಗೊಳಿಸಿ ನೋಡಿದರೆ ಶಿವಲಿಂಗ ಪತ್ತೆಯಾಗಿದೆ. ಇದು ಅಂತಿಂತಹ ಶಿವಲಿಂಗವಲ್ಲ, ನಾವು ಏನಾದರೂ ಚಿಕ್ಕ ವಿಗ್ರಹಗಳು ಪತ್ತೆಯಾಗುವ ನಿರೀಕ್ಷೆಯಲ್ಲಿದ್ದೆವು. ಏಕೆಂದರೆ ದೇವಾಲಯವೂ ಮಸೀದಿಯ ಆವರಣದಲ್ಲೇ ಇರುವುದರಿಂದ ಅನುಮಾನವಿತ್ತು. ಇದನ್ನು ನೋಡಿದ ಮೇಲೆ ನಮ್ಮ ಕಣ್ಣೇ ನಂಬಲಿಲ್ಲ ಎಂದು ಹೇಳಿದ್ದಾರೆ.
3 ಅಡಿ ಎತ್ತರ ಶಿವಲಿಂಗು ಇದಾಗಿದ್ದು, ಬಾವಿ ರೀತಿ ಸುತ್ತಲೂ ಗೋಡೆ ನಿರ್ಮಿಸಲಾಗಿತ್ತು. ಶಿವಲಿಂಗ ಕಾಣದ ರೀತಿಯಲ್ಲಿ ನೀರನ್ನು ತುಂಬಿಸಲಾಗಿತ್ತು. ನಂತರ ಇಲ್ಲಿದ್ದ ಎಲ್ಲಾ ನೀರನ್ನು ಖಾಲಿ ಮಾಡಿಸಿ ನೋಡಿದಾಗ ದೊಡ್ಡ ಶಿವಲಿಂಗ ನಮ್ಮ ಕಣ್ಣಿಗೆ ಕಾಣಿಸಿತು ಎಂದು ಹೇಳಿದ್ದಾರೆ.
ಒಟ್ಟಾರೆ ಹಿಂದೂಗಳ ದೇವರನ್ನು ಮುಚ್ಚಿಟ್ಟ ಸತ್ಯ ಬಹಿರಂಗವಾಗಿದ್ದು, ಸದ್ಯ ಈ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿ ಬಂದು ತಲುಪಿದೆ. ಈ ಮಧ್ಯೆ ಸಮೀಕ್ಷೆ ಸಮಯದಲ್ಲಿ ಶಿವಲಿಂಗ ಪತ್ತೆಯಾದ ಜಾಗವನ್ನು ಸೀಲ್ ಮಾಡುವಂತೆ ವಾರಾಣಸಿ ನ್ಯಾಯಾಲಯ ಸೋಮವಾರ ಆದೇಶಿಸಿದೆ. (ಏಜೆನ್ಸೀಸ್)