

ಬಂಟ್ವಾಳ: ಒಬ್ಬರ ವಿದ್ಯಾದಾನ ನೂರಾರು ಮಕ್ಕಳ ಜ್ಞಾನ ವರ್ಧನೆಯ ಮೊದಲ ಹೆಜ್ಜೆಯಾಗಬಹುದು ಎಂಬ ಆಶಯದೊಂದಿಗೆ ಏಮಾಜೆ ದ.ಕ. ಜಿಪಂ ಕಿ.ಪ್ರಾ.ಶಾಲೆಯಲ್ಲಿ ಜ್ಞಾನವಾಹಿನಿ-2025 ವಿನೂತನ ಯೋಜನೆಯನ್ನು ಗುರುವಾರ ಮಂಗಳೂರು ಎ.ಜೆ. ಸಂಶೋಧನಾ ಕೇಂದ್ರದ ಗ್ಯಾಸ್ಟ್ರೋ ಸರ್ಜನ್ ಡಾ.ಅಶ್ವಿನ್ ಆಳ್ವ ಉದ್ಘಾಟಿಸಿದರು.
ನೆಟ್ಲ ಮುಡ್ನೂರು ಗ್ರಾಪಂ ಅಧ್ಯಕ್ಷೆ ಸಮಿತಾ ಡಿ.ಪೂಜಾರಿ, ಎಸ್ಡಿಎಂಸಿ ಅಧ್ಯಕ್ಷೆ ಮಲ್ಲಿಕಾ ಗಣೇಶ್ ಆಚಾರ್ಯ, ಉಪಾಧ್ಯಕ್ಷ ಹರೀಶ್ ಕುಲಾಲ್, ಪಂಚಾಯಿತಿ ಸದಸ್ಯರಾದ ಶಕೀಲಾ ಕೃಷ್ಣ ಮಿತ್ತಕೋಡಿ, ಧನಂಜಯ ಗೌಡ, ಎಸ್ಡಿಎಂಸಿ ನಿಕಟಪೂರ್ವ ಉಪಾಧ್ಯಕ್ಷ ಶ್ರೀಪ್ರಸಾದ್ ಆಚಾರ್ಯ, ಶಾಲಾ ನಾಯಕಿ ರಿದಿಕಾ ಶೆಟ್ಟಿ, ಉಪ ನಾಯಕಿ ವರ್ಷಾ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ತ್ರಿವೇಣಿ ರಮೇಶ್ ಸ್ವಾಗತಿಸಿದರು. ಸಹ ಶಿಕ್ಷಕ ಉದಯ ಚಂದ್ರ ವಂದಿಸಿದರು. ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ದೀಕ್ಷಾ ಹಾಗೂ ಐಸಮ್ಮ ಸಹಕರಿಸಿದರು.