

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ನಾರಾಯಣ ಗುರುಗಳ ತತ್ವಗಳು ನಮ್ಮ ಬದುಕಿಗೆ ಪ್ರೇರಣೆ ಎಂದು ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಮರಿಕೆ ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಪಾರೆಂಕಿ ಮಡಂತ್ಯಾರು, ಮಹಿಳಾ ಬಿಲ್ಲವ ವೇದಿಕೆ ಯುವ ಬಿಲ್ಲವ ವೇದಿಕೆ ವತಿಯಿಂದ ಪಾರೆಂಕಿ ಕಡ್ತಿಲ ಎಸ್ಟೇಟ್‌ನಲ್ಲಿ ನಡೆದ ಗುರು ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಳ್ತಂಗಡಿ ತಾಲೂಕು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ್ ಉದ್ಘಾಟಿಸಿದರು. ಪಾರೆಂಕಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ವೆಂಕಪ್ಪ ಪೂಜಾರಿ ಕೊಡ್ಲಕ್ಕೆ ಅಧ್ಯಕ್ಷತೆ ವಹಿಸಿದ್ದರು.
ಮಂಡಂತ್ಯಾರು ಗ್ರಾ.ಪಂ ಅಧ್ಯಕ್ಷೆ ರೂಪ ನವೀನ್ ಕೋಡ್ಲಕ್ಕೆ, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಕೆ ಪ್ರಸಾದ್, ಬೆಳ್ತಂಗಡಿ ಯುವವಾಹಿನಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕ ಪ್ರಮೋದ್ ಕುಮಾರ್ ಮಚ್ಚಿನ, ಗೆಜ್ಜೆಗಿರಿ ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ, ಪ್ರಧಾನ ಕಾರ್ಯದರ್ಶಿ ಶುಭಾಶ್ಚಂದ್ರ ಪೂಜಾರಿ ಹಾರಬೆ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಸಚಿನ್ ಪೂಜಾರಿ ಅಂರ್ಬಡ. ಕಾರ್ಯದರ್ಶಿ ಶರತ್ ಪೂಜಾರಿ ಹಾರಬೆ ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಆಶಾ ಉಮೇಶ್ ಕೋಟೆ, ಕಾರ್ಯದರ್ಶಿ ಮಲ್ಲಿಕಾ ಹರಿಶ್ಚಂದ್ರ ಕೋಡ್ಲಕ್ಕೆ ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಯೋಗಿಶ್ ಪೂಜಾರಿ ಕಡ್ತಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಧಕರಿಗೆ ಸನ್ಮಾನ, ಅತಿಹೆಚ್ಚು ಅಂಕಗಳಿಸಿದ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವೀರೇಂದ್ರ ಕುಮಾರ್ ಸ್ವಾಗತಿಸಿ ಪ್ರವೀಣ್ ಕುಮಾರ್ ದೋಟ ನಿರೂಪಿಸಿದರು. ಶುಭಾಶ್ಚಂದ್ರ ಪೂಜಾರಿ ಹಾರಬೆ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.